ಮಹಿಳಾ ದೇಶಿ ಕ್ರಿಕೆಟ್‌: 17 ರನ್​ಗಳಿಗೆ ಸರ್ವಪತನಗೊಂಡ ನಾಗಾಲ್ಯಾಂಡ್.. ನಾಲ್ಕೆ ಎಸೆತದಲ್ಲಿ ಪಂದ್ಯ ಗೆದ್ದ ಮುಂಬೈ!

|

Updated on: Mar 17, 2021 | 2:42 PM

ಕೇವಲ 4 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ, ಒಂದು ಸಿಕ್ಸರ್ ಮತ್ತು ಒಂದು ನೋ-ಬಾಲ್ ಮೂಲಕ ಎದುರಿದ್ದ 17 ರನ್​ಗಳ ಟಾರ್ಗೆಟನ್ನು ಸುಲಭವಾಗಿ ಬೆನ್ನತ್ತಿದ್ದರು.

ಮಹಿಳಾ ದೇಶಿ ಕ್ರಿಕೆಟ್‌: 17 ರನ್​ಗಳಿಗೆ ಸರ್ವಪತನಗೊಂಡ ನಾಗಾಲ್ಯಾಂಡ್.. ನಾಲ್ಕೆ ಎಸೆತದಲ್ಲಿ ಪಂದ್ಯ ಗೆದ್ದ ಮುಂಬೈ!
ಪ್ರಾತಿನಿಧಿಕ ಚಿತ್ರ
Follow us on

ಕ್ರಿಕೆಟ್ ಪ್ರಪಂಚದ ಜೆಂಟಲ್​ಮ್ಯಾನ್​ ಗೇಮ್​. ಈ ಆಟದಲ್ಲಿರುವ ವಿಶೇಷತೆಗಳಿಂದಲೇ ಈ ಆಟ ಪ್ರಪಂಚದಲ್ಲಿ ಇಷ್ಟೊಂದು ಪ್ರಾಮುಖ್ಯತೆ ಪಡೆದಿದೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಕ್ರಿಕೆಟ್​ ಒಂದು ಧರ್ಮವಾಗಿಬಿಟ್ಟಿದೆ. ಇಂತಹ ಆಟದಲ್ಲಿ ಒಮೊಮ್ಮೆ ವಿಚಿತ್ರ ಘಟನೆಗಳು ನಡೆದು ಹೋಗುತ್ತವೆ. ಕೆಲವೊಮ್ಮೆ ಆಟಗಾರರ ಅದ್ಭುತ ಆಟದಿಂದಾಗಿ ಈ ಹಿಂದೆ ಗಳಿಸಲಾಗದ ಅನೇಕ ದಾಖಲೆಗಳು ಕೇವಲ ಒಂದೇ ದಿನದಲ್ಲಿ ಸೃಷ್ಟಿಯಾಗಿಬಿಡುತ್ತವೆ. ಹಾಗೆಯೇ ಇನ್ನೂ ಕೆಲವೊಮ್ಮೆ ಆಟಗಾರರ ಕಳಪೆ ಪ್ರದರ್ಶನದಿಂದಾಗಿ ತಂಡ ಹೀನಾಯವಾಗಿ ಸೋಲುವುದನ್ನು ಕಾಣಬಹುದಾಗಿದೆ. ಈಗ ಅಂತಹದೆ ಘಟನೆಯೊಂದು ಭಾರತದ ಮಹಿಳಾ ದೇಶಿ ಕ್ರಿಕೆಟ್​ ಪಂದ್ಯಾವಳಿಯಲ್ಲಿ ನಡೆದಿದೆ.

ಕ್ರಿಕೆಟ್​ನಲ್ಲಿ ಈ ಹಿಂದೆ ಕೆಲವು ವಿಲಕ್ಷಣ ಸ್ಕೋರ್‌ಲೈನ್‌ಗಳನ್ನು ನಾವು ಕಂಡಿದ್ದೇವೆ. 2019 ರ ಟಿ -20 ಪಂದ್ಯದಲ್ಲಿ ಮಾಲಿ ಮಹಿಳಾ ತಂಡವನ್ನು ರುವಾಂಡಾ ತಂಡ 6 ರನ್ ಗಳಿಗೆ ಆಲ್​ಔಟ್​ ಮಾಡಿತ್ತು, ಹೆಚ್ಚು ಪರಿಚಿತ ಉದಾಹರಣೆಯನ್ನು ತೆಗೆದುಕೊಳ್ಳಬೇಕಾದರೆ, 2020 ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಪುರುಷರ ತಂಡ ಕೇವಲ 36 ರನ್ ಗಳಿಗೆ ಆಲ್​ಔಟ್​ ಆಗಿತ್ತು. ಈ ರೀತಿಯಾ ಇಂತದೆ ಘಟನೆಯೊಂದು ಬುಧವಾರ, ಭಾರತದ ಮಹಿಳಾ ಹಿರಿಯ ಏಕದಿನ ಟ್ರೋಫಿಯಲ್ಲಿ ಮುಂಬೈ ಮತ್ತು ನಾಗಾಲ್ಯಾಂಡ್ ನಡುವಿನ ಪಂದ್ಯದಲ್ಲಿ ನಡೆದಿದೆ.

ಬರೊಬ್ಬರಿ 17.4 ಓವರ್​ಗಳನ್ನು ಎದುರಿಸಿದ ನಾಗಾಲ್ಯಾಂಡ್..
ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನಾಗಾಲ್ಯಾಂಡ್ ತಂಡ ಬರೊಬ್ಬರಿ 17.4 ಓವರ್​ಗಳನ್ನು ಎದುರಿಸಿ, ಕೇವಲ 17 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಆಲ್​ಔಟ್​ ಆಗಿದೆ. 9 ರನ್ ಗಳಿಸಿದ ಸರಿಬಾ ಅವರು ತಂಡದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಮುಂಬೈ ಪರ ಮಿಂಚಿದ ತಂಡದ ನಾಯಕಿ ಸಯಾಲಿ ಸತ್ಘರೆ 8.4 ಓವರ್ಗಳಲ್ಲಿ ಕೇವಲ 5 ರನ್​ ನೀಡಿ ಪ್ರಮುಖ 7 ವಿಕೆಟ್​ ಪಡೆದುಕೊಂಡರು

ನಾಲ್ಕು ಎಸೆತಗಲ್ಲಿ ಪಂದ್ಯವನ್ನು ಗೆದ್ದು ಬೀಗಿತು..
ನಾಗಾಲ್ಯಾಂಡ್ ತಂಡ ನೀಡಿದ 17 ರನ್​ಗಳ ಟಾರ್ಗೆಟನ್ನು ಬೆನ್ನತ್ತಿದ ಮುಂಬೈ ತಂಡ ಕೇವಲ ನಾಲ್ಕು ಎಸೆತಗಲ್ಲಿ ಪಂದ್ಯವನ್ನು ಗೆದ್ದು ಬೀಗಿತು. ಮುಂಬೈ ತಂಡದ ಆರಂಭಿಕ ಆಟಗಾರ್ತಿಯರು ಕೇವಲ 4 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ, ಒಂದು ಸಿಕ್ಸರ್ ಮತ್ತು ಒಂದು ನೋ-ಬಾಲ್ ಮೂಲಕ ಎದುರಿದ್ದ 17 ರನ್​ಗಳ ಟಾರ್ಗೆಟನ್ನು ಸುಲಭವಾಗಿ ಬೆನ್ನತ್ತಿದ್ದರು. ಇದರೊಂದಿಗೆ ಇನ್ನಿಂಗ್ಸ್‌ನಲ್ಲಿ ಇನ್ನೂ 296 ಎಸೆತಗಳು ಬಾಕಿ ಇದ್ದಾಗಲೇ ಮುಂಬೈ ತಂಡ ಜಯದ ಮಾಲೆಯನ್ನು ಮೂಡಿಗೆರಿಸಿಕೊಂಡಿತು.

ಇದನ್ನೂ ಓದಿ:ರೂಪಾಂತರಿ ಕೊರೊನಾ ಭಯ: ಐಪಿಎಲ್ ಹೊರತುಪಡಿಸಿ, ಎಲ್ಲಾ ವಯೋಮಾನದವರ ದೇಶಿ ಪಂದ್ಯಾವಳಿಗಳಿಗೆ ಬ್ರೇಕ್​ ಹಾಕಿದ BCCI!