ಮೈಸೂರು:ಎಲ್ಲೆಡೆ ಐಪಿಎಲ್ ಫಿವರ್ ಹೆಚ್ಚಾಗಿದ್ದು ಅದಕ್ಕಾಗಿ ಮೈಸೂರಿನ ಆರ್.ಸಿ.ಬಿ ಫ್ಯಾನ್ ಒಬ್ರು ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ಹೊಟ್ಟೆ ತುಂಬ ಬಿರಿಯಾನಿ ತಿನ್ನಿ ಅರ್ಧ ಹಣ ಕೊಡಿ ಅಂತಾ ಹೋಟೆಲ್ ಮಾಲೀಕರೊಬ್ಬರು ಆಫರ್ ನೀಡಿದ್ದಾರೆ.
ಮೈಸೂರಿನ ಗೋಕುಲಂನಲ್ಲಿರುವ ನಾಟಿ ಹಟ್ ಹೋಟೆಲ್ ನಲ್ಲಿ ಈ ಆಫರ್ ನೀಡಿದ್ದು, ಆರ್.ಸಿ.ಬಿ ಮ್ಯಾಚ್ ಇರುವ ದಿನ ಈ ಆಫರ್ ನೀಡಿದ್ದಾರೆ. ಇದೀಗಾ ಇಡೀ ಹೋಟಲನ್ನು ಆರ್.ಸಿ.ಬಿ ಮಯ ಮಾಡಿಕೊಂಡಿದ್ದಾರೆ.ಅದರಲ್ಲೂ ಬಿರಿಯಾನಿಗೆ ಆರ್.ಸಿ.ಬಿ ಬಿರಿಯಾನಿ ಅಂತ ಕೂಡ ಹೆಸರಿಟ್ಟಿದ್ದಾರೆ.
ಹೌದು, ಮೂಲತಃ ಮೈಸೂರಿನ ನಿವಾಸಿಯಾಗಿರುವ ಹೋಟೆಲ್ ಮಾಲೀಕ ಸ್ವರೂಪ್ ಈಗಷ್ಟೇ ಹೊಸದಾಗಿ ನಾಟಿ ಹಟ್ ಎಂಬ ನಾನ್ ವೆಜ್ ಹೋಟೆಲ್ ಮಾಡಿದ್ದಾರೆ. RCB ಪಕ್ಕಾ ಫ್ಯಾನ್ ಆದ ಸ್ವರೂಪ್, RCB ಗೆದ್ದಾಗಲೂ ಸೋತಾಗಲು RCBಯನ್ನೆ ಸಪೋರ್ಟ್ ಮಾಡುತ್ತಿದ್ದಾರೆ. ಇದೀಗ ಹೋಟೆಲ್ ತೆರೆದಿರುವ ಸ್ವರೂಪ್ ಈ ಬಾರಿ ಕಪ್ ನಮ್ದೇ ಎಂದು ತಮ್ಮ ಹೋಟೆಲ್ ನಲ್ಲಿ RCB ಅಭಿಮಾನಿಗಳಿಗೆ ಭರ್ಜರಿ ಡಿಸ್ಕೌಂಟ್ ಕೊಡ್ತಿದಾರೆ.
[yop_poll id=”10″]
ಅದು ನೂರು ರೂ ಇರೋ ಚಿಕನ್ ಬಿರಿಯಾನಿ RCB ಮ್ಯಾಚ್ ವೇಳೆ 49ರೂ ‘ಇನ್ನು ಚಿಕನ್ ಚಾಪ್ಸ್’ 49 ರೂ, ಎರಡು ತೆಗೆದುಕೊಂಡರೆ 90 ರೂ ಗೆ ಕಾಂಬೋ ಆಫರ್ ಆಗಿ ನೀಡಲಾಗ್ತಿದೆ. ಇದೆಲ್ಲವು RCB ಪರ ಸಪೋರ್ಟಗಾಗಿ ಅಂತಾರೆ ಹೋಟೆಲ್ ಮಾಲೀಕ ಸ್ವರೂಪ್. RCB ಎಷ್ಟೇ ಬಾರಿ ಸೋತ್ರು ಕೂಡ RCB ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗುತ್ತಿಲ್ಲ ಅಭಿಮಾನಿಗಳಿಗೆ.
-ದಿಲೀಪ್ ಚೌಡಹಳ್ಳಿ
Published On - 4:08 pm, Mon, 12 October 20