ಸತತ ಗೆಲುವುಗಳೊಂದಿಗೆ ಬೀಗುತ್ತಿರುವ ಆರ್​ಸಿಬಿ ಮತ್ತು ಕೆಕೆಆರ್ ನಡುವೆ ಇಂದು ತುರುಸಿನ ಹೋರಾಟ

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತಿಯ 28ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತಾ ನೈಟ್​ರೈಡರ್ಸ್ ನಡುವೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ತಲಾ 8 ಅಂಕಗಳೊಂದಿಗೆ 3 ಮತ್ತು 4ನೇ ಸ್ಥಾನದಲ್ಲಿರುವ ಕೆಕೆಆರ್ ಮತ್ತು ಆರ್​ಸಿಬಿ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಲಿವೆ. ಎರಡು ತಂಡಗಳೂ ಸತತ ಎರಡು ಗೆಲುವುಗಳನ್ನು ದಾಖಲಿಸಿರುವುದರಿಂದ ಆತ್ಮವಿಶ್ವಾಸದಿಂದ ಬೀಗುತ್ತಿವೆ. ನಾಯಕ ವಿರಾಟ್ ಕೊಹ್ಲಿ ಫಾರ್ಮ್​ಗೆ ಮರಳಿ ರನ್ ಗಳಿಸುತ್ತಿರುವುದು ಆರ್​ಸಿಬಿಗೆ ಖುಷಿ ತಂದಿರುವುದು ನಿಜ, ಆದರೆ […]

ಸತತ ಗೆಲುವುಗಳೊಂದಿಗೆ ಬೀಗುತ್ತಿರುವ ಆರ್​ಸಿಬಿ ಮತ್ತು ಕೆಕೆಆರ್ ನಡುವೆ ಇಂದು ತುರುಸಿನ ಹೋರಾಟ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಸಾಧು ಶ್ರೀನಾಥ್​

Updated on:Oct 12, 2020 | 4:41 PM

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತಿಯ 28ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತಾ ನೈಟ್​ರೈಡರ್ಸ್ ನಡುವೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ತಲಾ 8 ಅಂಕಗಳೊಂದಿಗೆ 3 ಮತ್ತು 4ನೇ ಸ್ಥಾನದಲ್ಲಿರುವ ಕೆಕೆಆರ್ ಮತ್ತು ಆರ್​ಸಿಬಿ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಲಿವೆ. ಎರಡು ತಂಡಗಳೂ ಸತತ ಎರಡು ಗೆಲುವುಗಳನ್ನು ದಾಖಲಿಸಿರುವುದರಿಂದ ಆತ್ಮವಿಶ್ವಾಸದಿಂದ ಬೀಗುತ್ತಿವೆ.

ನಾಯಕ ವಿರಾಟ್ ಕೊಹ್ಲಿ ಫಾರ್ಮ್​ಗೆ ಮರಳಿ ರನ್ ಗಳಿಸುತ್ತಿರುವುದು ಆರ್​ಸಿಬಿಗೆ ಖುಷಿ ತಂದಿರುವುದು ನಿಜ, ಆದರೆ ಟಾಪ್ ಕ್ರಮಾಂಕದ ಇಬ್ಬರು ಬ್ಯಾಟ್ಸ್​ಮನ್ಆರನ್ ಫಿಂಚ್ ಮತ್ತು 360 ಡಿಗ್ರಿ ಕ್ರಿಕೆಟರ್ ಎಬಿ ಡಿ ವಿಲಿಯರ್ಸ್ ಆರಂಭದ ಕೆಲ ಪಂದ್ಯಗಳಲ್ಲಿ ರನ್ ಗಳಿಸಿ ನಂತರ ವಿಫಲರಾಗಿರುವುದು ಕೊಹ್ಲಿಗೆ ಸ್ವಲ್ಪ ಆತಂಕವನ್ನುಂಟು ಮಾಡಿದೆ. ಅವರ ವೈಫಲ್ಯಗಳನ್ನು ಕೊಹ್ಲಿ ತಮ್ಮ ಉತ್ಕೃಷ್ಟ ಪ್ರದರ್ಶನಗಳ ಮೂಲಕ ನಿಭಾಯಿಸುತ್ತಿದ್ದಾರೆ. ಆದರೆ ಒಂದು ಪಕ್ಷ ಕೊಹ್ಲಿ ಸಹ ಫೇಲಾದರೆ, ಕೆಳಗಿನ ಕ್ರಮಾಂಕದ ಆಟಗಾರರು ಒತ್ತಡಕ್ಕೆ ಸಿಲುಕುತ್ತಾರೆ. ಹಾಗಾಗಿ, ಫಿಂಚ್ ಮತ್ತು ಡಿವಿಲಿಯರ್ಸ್ ಇಬ್ಬರಲ್ಲಿ ಒಬ್ಬರು ರನ್ ಗಳಿಸಲೇಬೇಕು. [yop_poll id=”10″] ತನಗೆ ದೊರೆತಿರುವ ಅವಕಾಶವನ್ನು ಸದ್ವಿನಿಯೋಗ ಪಡಿಸಿಕೊಂಡಿರುವ ಯುವ ಪ್ರತಿಭೆ ದೇವದತ್ ಪಡಿಕ್ಕಲ್ ಕೊಹ್ಲಿ ಮೇಲಿನ ಒತ್ತಡವನ್ನು ಕಡಿಮೆ ಮಾಡಿದ್ದಾರೆ. ಈಗಾಗಲೇ 3 ಅರ್ಧ ಶತಕ ಮತ್ತು ಒಂದು 30 ಪ್ಲಸ್ ಸ್ಕೋರಿನೊಂದಿಗೆ ಅವರು, ಮ್ಯಾನೇಜ್ಮೆಂಟ್ ತನ್ನ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಇಂದು ಅವರಿಂದ ಮತ್ತೊಂದು ಉತ್ತಮ ಕಾಂಟ್ರಿಬ್ಯೂಷನನ್ನು ಆರ್​ಸಿಬಿ ನಿರೀಕ್ಷಿಸುತ್ತಿದೆ.

ಶಿವಮ್ ದುಬೆ, ಕ್ರಿಸ್ ಮೊರಿಸ್ ಮತ್ತು ವಾಷಿಂಗ್ಟನ್ ಸುಂದರ್ ಸಹ ರನ್ ಗಳಿಸಬಲ್ಲರು. ದುಬೆ ಮತ್ತು ಮೊರಿಸ್ ಬಿಗ್ ಹಿಟ್ಟಿಂಗ್​ಗೆ ಖ್ಯಾತರು. ದುಬೆ ಸಣ್ಣಪುಟ್ಟ ಕಾಣಿಕೆಗಳೊಂದಿಗೆ ಟೀಮಿನ ಮೊತ್ತವನ್ನು ಉಬ್ಬಿಸುವಲ್ಲಿ ನೆರೆವಾಗುತ್ತಿದ್ದಾರೆ, ಆದರೆ ಅವರು ಬ್ಯಾಟಿಂಗ್​ಗೆ ಬಂದಾಗ ಕೆಲವು ಎಸೆತಗಳು ಮಾತ್ರ ಉಳಿದಿರುತ್ತವೆ.

ದಕ್ಷಿಣ ಆಫ್ರಿಕಾದ ಆಲ್​ರೌಂಡರ್ ಮೊರಿಸ್, ಚೆನೈ ವಿರುದ್ಧ ಆಡಿದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 3 ವಿಕೆಟ್ ಪಡೆದರು. ಅವರು ಯುಟಿಲಿಟಿ ಅಥವಾ ಇಂಪ್ಯಾಕ್ಟ್ ಆಟಗಾರ, ಬ್ಯಾಟಿಂಗ್​ನಲ್ಲಿ ವಿಫಲರಾದರೆ ಬೌಲಿಂಗ್​ನಲ್ಲಿ ಮಿಂಚಿಬಿಡುತ್ತಾರೆ.

ಹೈದರಾಬಾದಿನ ಹುಡುಗ ಮೊಹಮ್ಮದ್ ಸಿರಾಜ್ ಚೆನ್ನಾಗಿ ಬೌಲ್ ಮಾಡುತ್ತಿದ್ದಾರೆ. ಆರ್​ಸಿಬಿ ಟೀಮಿಗೆ ಬೌಲಿಂಗ್ ವಿಭಾಗದಲ್ಲೂ ಹೇಳಕೊಳ್ಳುವಂಥ ಸಮಸ್ಯೆ ಎದುರಾಗುತ್ತಿಲ್ಲ. ಸುಂದರ್ ಮತ್ತು ಯುಜ್ವೇಂದ್ರ ಚಹಲ್ ನಿಸ್ಸಂದೇಹವಾಗಿ ವಿಶ್ವದರ್ಜೆಯ ಸ್ಪಿನ್ನರ್​ಗಳು. ಸುಂದರ್ ಶನಿವಾರದ ಪಂದ್ಯದಲ್ಲಿ ಸಿಎಸ್​ಕೆಯ ಇನ್​ಫಾರ್ಫ್ ಆರಂಭಿಕ ಜೋಡಿ ಶೇನ್ ವಾಟ್ಸನ್ ಮತ್ತು ಫಫ್ ಡು ಪ್ಲೆಸ್ಸಿ ಅವರ ವಿಕೆಟ್​ಗಳನ್ನು ಪಡೆದು, ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಚಹಲ್ ಸತತವಾಗಿ ವಿಕೆಟ್​ ಕಬಳಿಸುತ್ತಿದ್ದಾರೆ. ನವದೀಪ್ ಸೈನಿ ಮತ್ತು ಇಸುರು ಉಡಾನಾ ತಮ್ಮ ಕರ್ತವ್ಯಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.

ಅತ್ತ ಕೆಕೆಆರ್, ಟೀಮಿನ ಒಟ್ಟಾರೆ ಪ್ರದರ್ಶನದಿಂದ ಸಂತುಷ್ಟವಾಗಿದೆ; ಆದರೆ, ಸ್ಟಾರ್ ಆಲ್​ರೌಂಡರ್ ಆಂದ್ರೆ ರಸ್ಸೆಲ್ ಶನಿವಾರದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿರುವುದು ಟೀಮ್ ಮ್ಯಾನೇಜ್ಮೆಂಟ್​ಗೆ ಚಿಂತೆಗೀಡು ಮಾಡಿದೆ. ಪಾಶವೀ ಶಕ್ತಿಯ ಹೊಡೆತಗಳನ್ನಾಡುವ ವಿಂಡೀಸ್ ದೈತ್ಯ ಒಂದರೆಡು ಗೇಮ್​ಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ರಸ್ಸೆಲ್ ಸ್ಥಾನದಲ್ಲಿ ಆಸ್ಟ್ರೇಲಿಯಾದ ಕ್ರಿಸ್ ಗ್ರೀನ್ ಆಡುವ ಸಾಧ್ಯತೆಯಿದೆ. ಸುನಿಲ್ ನರೈನ್ ಅವರನ್ನು ಕಡೆಗೂ ಮಿಡ್ಲ್ ಆರ್ಡರ್​ನಲ್ಲಾಡಿಸುವ ನಿರ್ಧಾರವನ್ನು ಕೆಕೆಆರ್ ತೆಗೆದುಕೊಂಡಿದ್ದು ಫಲ ನೀಡುತ್ತಿದೆ. ಸಿಎಸ್​ಕೆ ವಿರುದ್ಧ ನರೈನ್ ಸ್ಥಾನದಲ್ಲಿ ಶುಬ್​ಮನ್ ಗಿಲ್​ರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್ ತ್ರಿಪಾಠಿ, 51 ಎಸೆತಗಳಲ್ಲಿ 81ರನ್ ಚಚ್ಚಿದರು

ಈಗಾಗಲೇ 2 ಅರ್ಧ ಶತಕಗಳನ್ನು ಬಾರಿಸಿರುವ ಗಿಲ್ ಪ್ರತಿ ಪಂದ್ಯದಲ್ಲೂ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ಆದರೆ, ಉತ್ತಮ ಸ್ಪರ್ಶದಲ್ಲಿರುವ ನಿತಿಶ್ ರಾಣಾ ಅವಸರದ ಪ್ರವೃತ್ತಿ ತೋರಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಅಯಾನ್ ಮೊರ್ಗನ್ ಅವರ ಬ್ಯಾಟ್​ನಿಂದ ರನ್ ಸಿಡಿಯುತ್ತಿವೆ, ಆದರೆ ದೊಡ್ಡ ಇನ್ನಿಂಗ್ಸ್ ಬರುತ್ತಿಲ್ಲ. ಮೊದಲ 5 ಪಂದ್ಯಗಳಲ್ಲಿ ಸತತವಾಗಿ ವಿಫಲರಾಗಿದ್ದ ನಾಯಕ ದಿನೇಶ್ ಕಾರ್ತೀಕ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಬಿರುಗಾಳಿ ವೇಗದ ಅರ್ಧ ಶತಕ ಬಾರಿಸಿ ಟಚ್ ವಾಪಸ್ಸು ಪಡೆದುಕೊಂಡಿದ್ದಾರೆ.

ಕೆಕೆಆರ್ ಟೀಮಿನ ಬೌಲಿಂಗ್ ಸದೃಢವಾಗಿದೆಪ್ಯಾಟ್ ಕಮ್ಮಿನ್ಸ್, ಪ್ರಸಿಧ್ ಕೃಷ್ಣ, ಶಿವಮ್ ಮಾವಿ, ಕಮ್ಲೇಶ್ ನಾಗರ್​ಕೋಟಿ ಮತ್ತು ಸಂದೀಪ್ ವಾರಿಯರ್ ಅವರನ್ನೊಳಗೊಂಡ ವೇಗದ ದಾಳಿ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ನಿಯಂತ್ರಿಸುವಲ್ಲಿ ಸಫಲವಾಗುತ್ತಿದೆ. ಸ್ಪಿನ್ನರ್​ಗಳಾದ ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ನರೈನ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.

ಕೆಕೆಆರ್ ಮತ್ತು ಆರ್​ಸಿಬಿ ನಡುವೆ ಇಂದು ಶಾರ್ಜಾದಲ್ಲಿ ತುರುಸಿನ ಹೋರಾಟ ನಡೆಯಲಿರುವುದು ಮಾತ್ರ ನಿಶ್ಚಿತ.

Published On - 4:39 pm, Mon, 12 October 20

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ