India vs Australia Test Series |ಸಿಡ್ನಿಯಲ್ಲಿ ಮೂರನೆ ವೇಗದ ಬೌಲರ್ ಆಗಿ ನವದೀಪ್ ಸೈನಿ ಆಡಬೇಕು: ನೆಹ್ರಾ

|

Updated on: Jan 05, 2021 | 11:03 PM

ಸೈನಿಯ ವೈಶಿಷ್ಟ್ಯತೆಯೆಂದರೆ ವೇಗ ಮತ್ತು ಅವನು ಜನರೇಟ್ ಮಾಡುವ ಪುಟಿತ. ಸಿಡ್ನಿಯಲ್ಲಿ ನಡೆಯಲಿರುವುದು ಟೆಸ್ಟ್ ಮ್ಯಾಚ್. ಟೆಸ್ಟ್​ಗಳಲ್ಲಿ ಬ್ಯಾಟ್ಸ್​ಮನ್​​ಗಳು ಔಟಾಗುವುದಿಲ್ಲ, ಅವರನ್ನು ಔಟ್ ಮಾಡಬೇಕಾಗುತ್ತದೆ, ವ್ಯತ್ಯಾಸ ಇರೋದೇ ಅಲ್ಲಿ ಎಂದು ನೆಹ್ರಾ ಹೇಳುತ್ತಾರೆ.

India vs Australia Test Series |ಸಿಡ್ನಿಯಲ್ಲಿ ಮೂರನೆ ವೇಗದ ಬೌಲರ್ ಆಗಿ ನವದೀಪ್ ಸೈನಿ ಆಡಬೇಕು: ನೆಹ್ರಾ
ನವದೀಪ್ ಸೈನಿ
Follow us on

ಅಸ್ಟ್ರೇಲಿಯಾ ವಿರುದ್ಧ ಗುರುವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಮೂರನೆ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಮೂರನೆ ವೇಗದ ಬೌಲರ್ ಆಗಿ ನವದೀಪ್ ಸೈನಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಮಾಜಿ ವೇಗದ ಬೌಲರ್ ಆಶಿಷ್ ನೆಹ್ರಾ ಅಭಿಪ್ರಾಯಪಡುತ್ತಾರೆ. ಸೈನಿಯ ವೇಗ ಮತ್ತು ಬೌನ್ಸ್ ಸಿಡ್ನಿ ಮೈದಾನದಲ್ಲಿ ಭಾರತಕ್ಕೆ ನೆರವಾಗಲಿವೆಯೆಂದು ಅವರು ಹೇಳುತ್ತಾರೆ.

‘ಕ್ರಿಕೆಟಿಂಗ್ ಲಾಜಿಕ್ ಬಳಸಿ ಯೋಚಿಸುವುದಾರೆ ಸೈನಿಯೇ ಪ್ರಥಮ ಆಯ್ಕೆಯಾಗಬೇಕು. ಯಾಕೆಂದರೆ, ಅವನನ್ನು ಟೀಮನ್ನು ಸೆಲೆಕ್ಟ್ ಮಾಡುವಾಗಲೇ ಆರಿಸಲಾಗಿತ್ತು. ಶಾರ್ದುಲ್ ಠಾಕುರ್ ಮತ್ತು ಟಿ ನಟರಾಜನ್ ಗಾಯಗೊಂಡ ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರಿಗೆ ಬದಲೀ ಅಟಗಾರರಾಗಿ ತಂಡಕ್ಕೆ ಸೇರ್ಪಡೆಯಾದವರು. ಠಾಕುರ್ ಮತ್ತು ನಟರಾಜನ್ ಅವರಿಗಿಂತ ಸೈನಿ ಉತ್ತಮ ಬೌಲರ್ ಎಂದು ಅಯ್ಕೆ ಸಮಿತಿಗೆ ಗೊತ್ತಿದ್ದರಿಂದಲೇ ಅವನನ್ನು ಮೊದಲು ಆರಿಸಲಾಗಿತ್ತು. ಅಂದರೆ, ಸೈನಿಯಲ್ಲಿ ಟೆಸ್ಟ್ ಆಡುವ ಸಾರ್ಮಥ್ಯ ಇದೆ ಅಂತಾಯ್ತು. ಈ ಹಿನ್ನೆಲೆಯಲ್ಲಿ ಅವನು ಮೂರನೆ ಬೌಲರ್ ಸ್ಥಾನಕ್ಕೆ ಆಟೊಮ್ಯಾಟಿಕ್ ಚಾಯ್ಸ್ ಅನಿಸುತ್ತಾನೆ,’ ಎಂದು 42-ವರ್ಷ ವಯಸ್ಸಿನ ನೆಹ್ರಾ ಸುದ್ದಿ ಸಂಸ್ಥೆಯೊಂದರ ಜೊತೆ ಮಾತಾಡುವಾಗ ಹೇಳಿದ್ದಾರೆ.

ಸೈನಿ ಯಾಕೆ ಆಡಬೇಕೆನ್ನುವ ವಿವರಣೆಯನ್ನೂ ನೆಹ್ರಾ ಸ್ಪಷ್ಟವಾಗಿ ನೀಡುತ್ತಾರೆ.

ಆಶಿಷ್ ನೆಹ್ರಾ

‘ಸೈನಿಯ ವೈಶಿಷ್ಟ್ಯತೆಯೆಂದರೆ ವೇಗ ಮತ್ತು ಅವನು ಜನರೇಟ್ ಮಾಡುವ ಪುಟಿತ. ಸಿಡ್ನಿಯಲ್ಲಿ ನಡೆಯಲಿರುವುದು ಟೆಸ್ಟ್ ಮ್ಯಾಚ್. ನಟರಾಜನ್​ಗೆ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ವಿಕೆಟ್ ಹೇಗೆ ಸಿಗುತ್ತವೆ ಗೊತ್ತಾ? ವೇಗವಾಗಿ ರನ್ ಗಳಿಸುವ ಪ್ರಯತ್ನದಲ್ಲಿ ಬ್ಯಾಟ್ಸ್​ಮನ್​ಗಳು ವಿಕೆಟ್ ಚೆಲ್ಲಿಬಿಡುತ್ತಾರೆ. ಅಲ್ಲದೆ, ನಟರಾಜನ್​ಗೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಅನುಭವವಿಲ್ಲ ಮತ್ತು ಮೊಹಮ್ಮದ್ ಸಿರಾಜ್​ನಂತೆ ವಿವಿಧ ಗ್ರೇಡ್​ಗಳ ಮೂಲಕ ಟೆಸ್ಟ್​ ಆಡುವ ಹಂತ ತಲುಪಿದವನಲ್ಲ. ಸಿರಾಜ್, ರಣಜಿಯಲ್ಲಿ ಅಡಿದ್ದಾನೆ ನಂತರ ಭಾರತ ಎ ತಂಡಕ್ಕೆ ಆಡಿದ್ದಾನೆ. ಈ ಎಲ್ಲ ಗ್ರೇಡ್​ಗಳಲ್ಲಿ ಅವನು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆ. ಆದರೆ, ನಟರಾಜನ್ ಕೇವಲ ಒಂದು ಪ್ರಥಮ ದರ್ಜೆ ಮಾತ್ರ ಆಡಿದ್ದಾನೆ,’ ಎಂದು ನೆಹ್ರಾ ಹೇಳಿದ್ದಾರೆ.

‘ಸಿರಾಜ್​ನಂತೆಯೇ, ಸೈನಿ ಕೂಡ ಹಂತಹಂತವಾಗಿ ಟೆಸ್ಟ್ ಆಡುವ ಮಟ್ಟವನ್ನು ತಲುಪಿದ್ದಾನೆ. ಅವನು ಕೂಡ ಇಂಡಿಯಾ ಎ ಟೀಮಿನೊಂದಿಗೆ ಹಲವಾರು ಪ್ರವಾಸಗಳಿಗೆ ಹೋಗಿದ್ದಾನೆ ಮತ್ತು ತಾನೊಬ್ಬ ಉತ್ತಮ ಬೌಲರ್​ ಎನ್ನುವುದನ್ನು ಪ್ರೂವ್ ಮಾಡಿದ್ದಾನೆ. ಟೆಸ್ಟ್​ಗಳಲ್ಲಿ ಬ್ಯಾಟ್ಸ್​ಮನ್​​ಗಳು ಔಟಾಗುವುದಿಲ್ಲ, ಅವರನ್ನು ಔಟ್ ಮಾಡಬೇಕಾಗುತ್ತದೆ, ವ್ಯತ್ಯಾಸ ಇರೋದೇ ಅಲ್ಲಿ ’ ಅಂತ ನೆಹ್ರಾ ಹೇಳಿದ್ದಾರೆ.

ಹಳಬರಾದ ಮ್ಯಾಥ್ಯು ಹೇಡನ್, ರಿಕ್ಕಿ ಪಾಂಟಿಂಗ್ ಮೊದಲಾದವರು ಶಾರ್ಟ್ ಎಸೆತಗಳನ್ನು ಅಧಿಕಾರಯುತವಾಗಿ ಆಡುತ್ತಿದ್ದರು, ಆದರೆ ಈಗಿನ ಅಸ್ಸೀ ಆಟಗಾರರು ತಡಬಡಿಸುತ್ತಾರೆ ಎಂದು ನೆಹ್ರಾ ಹೇಳುತ್ತಾರೆ.

‘ಸೈನಿ ಭಾರತದ ನಂಬರ್ ವನ್ ಬೌಲರ್ ಎಂದು ನಾನು ಹೇಳತ್ತಿಲ್ಲ ಮತ್ತು ಅವನು ಬ್ರೆಟ್ ಲೀ ಇಲ್ಲವೇ ಶೋಯೆಬ್ ಅಖ್ತರ್​ರಂತೆ 150 ಕಿ.ಮೀ ವೇಗದಲ್ಲಿ ಬೌಲ್ ಮಾಡಲಾರ. ಆದರೆ ಅವನ ವೇಗ ನಟರಾಜನ್​ ಮತ್ತು ಶಾರ್ದುಲ್​ಗಿಂತ ಜಾಸ್ತಿಯಿದೆ. ಆಸ್ಟ್ರೇಲಿಯಾದ ಈಗಿನ ಆಟಗಾರರು ಶಾರ್ಟ್​ ಎಸೆತಗಳೆದರು ತಡಬಡಿಸುತ್ತಾರೆ. ಸೈನಿಯ ಶಾರ್ಟ್ ಎಸೆತಗಳು ಪರಿಣಾಮಕಾರಿಯಾಗಿವೆ. ಬ್ಯಾಟ್ಸ್​ಮನ್​ಗಳನ್ನು ತೊಂದರೆಗೆ ಸಿಲುಕಿಸಬಲ್ಲ, ಹಾಗಾಗಿ, ಸಿಡ್ನಿಯಲ್ಲಿ ಅವನೇ ಆಡಬೇಕು,’ ಎಂದು ನೆಹ್ರಾ ಹೇಳುತ್ತಾರೆ.

ಟಿ ನಟರಾಜನ್