ಕ್ರೀಡಾಪಟುಗಳೆಂದರೆ ನಮ್ಮ ಸ್ಮೃತಿಪಟಲಕ್ಕೆ ಬರೋದು ಉತ್ತಮ ಆರೋಗ್ಯ ಮತ್ತು ಬಲಿಷ್ಠ ಕಾಯ. ತಮ್ಮತಮ್ಮ ಕ್ರೀಡೆಯಲ್ಲಿ ಸತತವಾಗಿ ಉತ್ತಮ ಪ್ರದರ್ಶನವನ್ನು ನೀಡಲು ಅವರಿಗೆ ಇದು ಅತ್ಯಾವಶ್ಯ. ಆದರೆ ಇಂಥ ಗಟ್ಟಿ ದೇಹದ ಕ್ರೀಡಾಪಟುಗಳನ್ನು ಬಿಡದೆ ಕಾಡುತ್ತಿದೆ ಮಹಾಮಾರಿ ಕೊರೊನಾ.
ಟೆನ್ನಿಸ್ ಲೋಕದ ನಂಬರ್ ಒನ್ ಆಟಗಾರನಾಗಿರುವ ನೊವಾಕ್ ಜೊಕೊವಿಚ್ಗೆ ಇಂದು ಕೊರೊನಾ ಸೋಂಕು ದೃಢವಾಗಿದೆ. ಸರ್ಬಿಯಾ ಮತ್ತು ಕ್ರೊಯೇಷಿಯಾದಲ್ಲಿ ಇತ್ತೀಚೆಗೆ ನಡೆದ ಟೆನ್ನಿಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ನಂತರ ನೊವಾಕ್ಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಅವರೊಟ್ಟಿಗೆ ಅವರ ಪತ್ನಿ ಜೆಲೆನಾಗೂ ಸಹ ಸೋಂಕು ದೃಢವಾಗಿದೆ. ಹಾಗಾಗಿ ದಂಪತಿಯಿಬ್ಬರೂ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಲು ತೀರ್ಮಾನಿಸಿದ್ದು ಐದು ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
Published On - 6:38 pm, Tue, 23 June 20