ಡೆಲ್ಲಿ ಕ್ಯಾಪಿಟಲ್ಸ್ ಮಾಡಿದ ಆ ತಪ್ಪಿನಿಂದಲೇ ಮಿಸ್ ಆಯ್ತು ಚಾಂಪಿಯನ್ ಪಟ್ಟ..
ಮರಳುಗಾಡಿನ ಮಹಾಯುದ್ಧದಲ್ಲಿ ಮೊದಲ ಬಾರಿಗೆ ಫೈನಲ್ಗೆ ಬಂದಿದ್ದ ಡೆಲ್ಲಿ, ಮುಂಬೈ ವಿರುದ್ಧ ಮುಗ್ಗರಿಸಿ ಚಾಂಪಿಯನ್ ಆಗೋ ಕನಸನ್ನ ಭಗ್ನ ಮಾಡಿಕೊಂಡಿತು. ನಿಮಗೆ ಗೊತ್ತಿದೆಯೋ ಗೊತ್ತಿಲ್ವೋ.. ಡೆಲ್ಲಿ ತಾನೇ ಮಾಡಿಕೊಂಡ ಯಡವಟ್ಟಿನಿಂದ ಚಾಂಪಿಯನ್ ಪಟ್ಟವನ್ನ ಮಿಸ್ ಮಾಡಿಕೊಂಡಿದೆ ಅಂದ್ರೆ, ನೀವು ನಂಬಲೇಬೇಕು. ನಿಜ.. ಡೆಲ್ಲಿ ಕ್ಯಾಪಿಟಲ್ಸ್ ತಾನೇ ಮಾಡಿಕೊಂಡ ಯಡವಟ್ಟಿನಿಂದಾಗಿ ಇಂದು ಮುಂಬೈ ವಿರುದ್ಧ ಮುಗ್ಗರಿಸಿದೆ. ಅದೊಂದು ವಿಚಾರದಲ್ಲಿ ಡೆಲ್ಲಿ ಸ್ವಲ್ಪ ಬುದ್ಧಿವಂತಿಕೆ ತೋರಿಸಿದ್ರೆ, ಇವತ್ತು ಮುಂಬೈ, ಡೆಲ್ಲಿ ಮುಂದೆ ಮಂಡಿಯೂರುತ್ತಿತ್ತು. ಡೆಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಕಿರೀಟವನ್ನ […]
ಮರಳುಗಾಡಿನ ಮಹಾಯುದ್ಧದಲ್ಲಿ ಮೊದಲ ಬಾರಿಗೆ ಫೈನಲ್ಗೆ ಬಂದಿದ್ದ ಡೆಲ್ಲಿ, ಮುಂಬೈ ವಿರುದ್ಧ ಮುಗ್ಗರಿಸಿ ಚಾಂಪಿಯನ್ ಆಗೋ ಕನಸನ್ನ ಭಗ್ನ ಮಾಡಿಕೊಂಡಿತು. ನಿಮಗೆ ಗೊತ್ತಿದೆಯೋ ಗೊತ್ತಿಲ್ವೋ.. ಡೆಲ್ಲಿ ತಾನೇ ಮಾಡಿಕೊಂಡ ಯಡವಟ್ಟಿನಿಂದ ಚಾಂಪಿಯನ್ ಪಟ್ಟವನ್ನ ಮಿಸ್ ಮಾಡಿಕೊಂಡಿದೆ ಅಂದ್ರೆ, ನೀವು ನಂಬಲೇಬೇಕು.
ನಿಜ.. ಡೆಲ್ಲಿ ಕ್ಯಾಪಿಟಲ್ಸ್ ತಾನೇ ಮಾಡಿಕೊಂಡ ಯಡವಟ್ಟಿನಿಂದಾಗಿ ಇಂದು ಮುಂಬೈ ವಿರುದ್ಧ ಮುಗ್ಗರಿಸಿದೆ. ಅದೊಂದು ವಿಚಾರದಲ್ಲಿ ಡೆಲ್ಲಿ ಸ್ವಲ್ಪ ಬುದ್ಧಿವಂತಿಕೆ ತೋರಿಸಿದ್ರೆ, ಇವತ್ತು ಮುಂಬೈ, ಡೆಲ್ಲಿ ಮುಂದೆ ಮಂಡಿಯೂರುತ್ತಿತ್ತು. ಡೆಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಕಿರೀಟವನ್ನ ಮುಡಿಗೇರಿಸಿಕೊಳ್ಳುತ್ತಿತ್ತು. ಹಾಗಾದ್ರೆ ಡೆಲ್ಲಿ ಮಾಡಿಕೊಂಡ ಎಡವಟ್ಟೇನು ಗೊತ್ತಾ?
ಮುಂಬೈಗೆ ವೇಗಿ ಟ್ರೆಂಟ್ ಬೌಲ್ಟ್ನನ್ನು ಉಡುಗೊರೆ ನೀಡಿ ಕೆಟ್ಟ ಡೆಲ್ಲಿ! ಡೆಲ್ಲಿ ಕ್ಯಾಪಿಟಲ್ಸ್ ಮಾಡಿದ ಮೇಜರ್ ಮಿಸ್ಟೇಕ್ ಇದೆ. ಕಳೆದ ವರ್ಷ ವೇಗಿ ಟ್ರೆಂಟ್ ಬೌಲ್ಟ್ನನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಉಡುಗೊರೆಯಾಗಿ ನೀಡಿದ್ದು. ಲಸಿತ್ ಮಲಿಂಗಾ ಇಂಜುರಿಯಾಗಿದ್ದರಿಂದ, ಮುಂಬೈ ಇಂಡಿಯನ್ಸ್ ಸ್ಟಾರ್ ವೇಗಿಗಾಗಿ ಹುಡುಕಾಟ ನಡೆಸಿತ್ತು. ಆಗ ಮುಂಬೈ ಫ್ರಾಂಚೈಸಿ ಡೆಲ್ಲಿ ಫ್ರಾಂಚೈಸಿ ಬಳಿ ನಿಮ್ಮ ಬಳಿಯಿರೋ ಒಬ್ಬ ಬೌಲರ್ ಬೇಕು ಎಂದು ಮನವಿ ಮಾಡಿಕೊಂಡಿತ್ತು. ಮುಂಬೈ ಫ್ರಾಂಚೈಸಿ ಹೀಗೆ ಹೇಳಿದ್ದೇ ತಡ, ಡೆಲ್ಲಿ ಫ್ರಾಂಚೈಸಿ ಟ್ರೆಂಟ್ ಬೌಲ್ಟ್ನನ್ನು ನೀಡಿತ್ತು. ಇದೇ ಡೆಲ್ಲಿಗೆ ದೊಡ್ಡ ಪ್ರಮಾದವಾಗಿ ಪರಿಣಮಿಸಿತು.
ಡೆಲ್ಲಿಗೆ ಪ್ರತಿ ಪಂದ್ಯದಲ್ಲೂ ವಿಲನ್ ಆದ ಟ್ರೆಂಟ್ ಬೌಲ್ಟ್! ಡೆಲ್ಲಿ ಫ್ರಾಂಚೈಸಿ ಇಂತಹದ್ದೊಂದು ನಿರ್ಧಾರ ತಗೆದುಕೊಳ್ಳೋದ್ರ ಹಿಂದೊಂದು ಕಾರಣವಿತ್ತು. ಭಾರತದ ಪ್ಲ್ಯಾಟ್ ಪಿಚ್ನಲ್ಲಿ ಬೌಲ್ಟ್ಗೆ ಸ್ವಿಂಗ್ ಮಾಡೋದಕ್ಕೆ ಆಗ್ತಿಲ್ಲ. ಹೀಗಾಗಿ ಮುಂಬೈಗೆ ನೀಡೋದೇ ಸೂಕ್ತ ಎಂದು ನಿರ್ಧರಿಸಿತ್ತು. ಆದ್ರೆ ಕೊರೊನಾದಿಂದಾಗಿ ಐಪಿಎಲ್ ಯುಎಇನಲ್ಲಿ ನಡೆದಿದ್ದು, ಮುಂಬೈಗೆ ವರದಾನವಾಯ್ತು. ಯಾಕಂದ್ರೆ ಸ್ವಿಂಗ್ ಬೌಲರ್ಗಳಿಗೆ ನೆರವಾಗೋ ಯುಎಇ ಪಿಚ್ಗಳಲ್ಲಿ ಬೌಲ್ಟ್ ಧೂಳೆಬ್ಬಿಸಿಬಿಟ್ರು. ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ, ಬೌಲ್ಟ್ ಡೆಲ್ಲಿ ವಿರುದ್ಧದ ಪಂದ್ಯದಲ್ಲೇ ಬೊಂಬಾಟ್ ಸ್ಪೆಲ್ ಮಾಡಿಬಿಟ್ಟ.
ಡೆಲ್ಲಿ ವಿರುದ್ಧ ಬೌಲ್ಟ್ ಈ ಸೀಸನ್ನಲ್ಲಿ ಡೆಲ್ಲಿ ವಿರುದ್ಧ ಮುಂಬೈ ಪರ ನಾಲ್ಕು ಪಂದ್ಯಗಳನ್ನಾಡಿದ ಟ್ರೆಂಟ್ ಬೌಲ್ಟ್, ಒಟ್ಟು 9 ವಿಕೆಟ್ ಪಡೆದು ಮಿಂಚಿದ್ರು.
ಡೆಲ್ಲಿ ಎಡವಟ್ಟಿಗೆ ಬೇಸರ ವ್ಯಕ್ತಪಡಿಸಿದ ಟಾಮ್ ಮೂಡಿ! ಡೆಲ್ಲಿ ಈ ರೀತಿ ಎಡವಟ್ಟು ಮಾಡಿಕೊಂಡಿದ್ದಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಕೋಚ್ ಟಾಮ್ ಮೂಡಿ, ಬೇಸರ ವ್ಯಕ್ತಪಡಿಸಿದ್ದಾರೆ. ಬೌಲ್ಟ್ ವಿಚಾರದಲ್ಲಿ ಡೆಲ್ಲಿ ಫ್ರಾಂಚೈಸಿ ಮಾಡಿಕೊಂಡ ಎಡವಟ್ಟೇ ಅವರಿಗೆ ಮುಳುವಾಯ್ತು ಎಂದಿದ್ದಾರೆ.
ಮೂರ್ಖತನದ ನಿರ್ಧಾರ ‘‘ ಟ್ರೆಂಟ್ ಬೌಲ್ಟ್ನನ್ನ ಮುಂಬೈಗೆ ನೀಡಿದ್ದು ಅತ್ಯಂತ ಕೆಟ್ಟ ನಿರ್ಧಾರ. ಕೊರೊನಾ ಬರಲಿದೆ ಪಂದ್ಯಾವಳಿ ಯುಎಇಗೆ ಹೋಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ಆದ್ರೆ ಟ್ರೆಂಟ್ ಬೌಲ್ಟ್ ಸ್ವಿಂಗ್‌ಗೆ ಹೊಂದಿಕೊಳ್ಳುವ ಪಿಚ್‌ಗಳ ಮೇಲೆ ಸಮರ್ಥವಾಗಿ ಬೌಲ್ ಮಾಡಬಲ್ಲರು ಎಂಬುದು ತಿಳಿದಿದ್ರೂ, ಡೆಲ್ಲಿ ಅವರನ್ನು ಕೈಬಿಟ್ಟಿತು. ಅಂತಹ ಅಸಾಧಾರಣ ವೇಗಿಯನ್ನು ಮುಂಬೈ ತಂಡಕ್ಕೆ ಉಡುಗೊರೆಯಾಗಿ ನೀಡಿದ್ದು ಮೂರ್ಖತನ.’’ – ಟಾಮ್ ಮೂಡಿ, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ
ನಿಜಕ್ಕೂ ಡೆಲ್ಲಿ ಫ್ರಾಂಚೈಸಿ ಬೌಲ್ಟ್ ವಿಚಾರದಲ್ಲಿ ಮಾಡಿಕೊಂಡ ಎಡವಟ್ಟಿನಿಂದಲೇ, ಮೊದಲ ಬಾರಿಗೆ ಫೈನಲ್ಗೆ ಎಂಟ್ರಿ ಕೊಟ್ರೂ ಚಾಂಪಿಯನ್ ಪಟ್ಟವನ್ನ ಅಲಂಕರಿಸೋದಕ್ಕೆ ಸಾಧ್ಯವಾಗ್ಲಿಲ್ಲ. ಯಾಕಂದ್ರೆ ಇದೇ ಬೌಲ್ಟ್ ಪಂದ್ಯ ಆರಂಭವಾದ ಮೊದಲ ಓವರ್ನ ಮೊದಲ ಬಾಲ್ನಲ್ಲೇ ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಪಡೆದ್ರು. ಅಷ್ಟೇ ಅಲ್ಲ. ಪ್ರಮುಖ ಮೂರು ವಿಕೆಟ್ ಪಡೆದು ಡೆಲ್ಲಿ ಅಧಃಪತನಕ್ಕೆ ಕಾರಣವಾದ್ರು.