ಟೀಂ ಇಂಡಿಯಾದ ರನ್ ಮಷೀನ್, ದಾಖಲೆಗಳ ವೀರಾಧಿವೀರ ನಾಯಕ ವಿರಾಟ್ ಕೊಹ್ಲಿ, ಕಿವೀಸ್ ನೆಲದಲ್ಲಿ ಟಿ-ಟ್ವೆಂಟಿ ಸರಣಿಯನ್ನ ಗೆದ್ದು ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಕೇವಲ ಬ್ಯಾಟ್ಸ್ಮನ್ ಆಗಿ ಅಲ್ಲ, ಟೀಂ ಇಂಡಿಯಾದ ಯಶಸ್ವಿ ನಾಯಕ ಅನ್ನೋದನ್ನ ಕಿಂಗ್ ಕೊಹ್ಲಿ ಸಾಬೀತು ಮಾಡಿದ್ದಾರೆ.
ನ್ಯೂಜಿಲೆಂಡ್ ನೆಲದಲ್ಲಿ ಇದುವರೆಗೂ ಟೀಂ ಇಂಡಿಯಾ ಒಂದೇ ಒಂದು ಟಿ-ಟ್ವೆಂಟಿ ಸರಣಿಯನ್ನ ಗೆಲ್ಲೋದಕ್ಕೆ ಸಾಧ್ಯವಾಗಿರಲಿಲ್ಲ. 2009ರಲ್ಲಿ ಮಹೇಂದ್ರ ಸಿಂಗ್ ಧೋನಿ, 2019ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ-ಟ್ವೆಂಟಿ ಸರಣಿ ಗೆಲ್ಲದೇ, ಬರಿಗೈಯಲ್ಲಿ ತವರಿಗೆ ವಾಪಸ್ ಆಗಿತ್ತು. ಆದ್ರೀಗ ಕಿಂಗ್ ಕೊಹ್ಲಿ, ಕಿವೀಸ್ ನೆಲದಲ್ಲಿ ಆಡಿದ ಮೊದಲ ಟಿ-ಟ್ವೆಂಟಿ ಸರಣಿಯಲ್ಲೇ, ಕಪ್ಪು ಕುದುರೆಗಳನ್ನ ಕಟ್ಟಿಹಾಕಿ, ಸರಣಿ ಗೆದ್ದು ಬೀಗಿದ್ದಾರೆ.
ಯಾವ ನಾಯಕನೂ ಮಾಡದ ಸಾಧನೆ ಮಾಡಲಿದ್ದಾರೆ ಕೊಹ್ಲಿ!
ಕ್ಯಾಪ್ಟನ್ ಕೊಹ್ಲಿಗಿದೆ ಇತಿಹಾಸ ಸೃಷ್ಟಿಸೋ ಅವಕಾಶ!
ಬೇ ಓವಲ್ ಮೈದಾನದಲ್ಲಿ ನಡೆಯಲಿರೋ ಕೊನೆಯ ಟಿ-ಟ್ವೆಂಟಿಯಲ್ಲಿ ಕೊಹ್ಲಿ ಸೈನ್ಯ ಗೆದ್ದು, ಕ್ಲೀನ್ ಸ್ವೀಪ್ ಮಾಡೋ ತವಕದಲ್ಲಿದೆ. ಒಂದು ವೇಳೆ ಬ್ಲೂ ಬಾಯ್ಸ್ ಇಂದು ಅದ್ಭುತ ಪ್ರದರ್ಶನ ನೀಡಿ, ಕಿವೀಸ್ ತಂಡವನ್ನ ಕ್ಲೀನ್ ಸ್ವೀಪ್ ಮಾಡಿದ್ದೇ ಆದಲ್ಲಿ, ಟಿ-ಟ್ವೆಂಟಿ ಕ್ರಿಕೆಟ್ಗೆ ಕೊಹ್ಲಿ ಕಿಂಗ್ ಆಗಲಿದ್ದಾರೆ. ಅಂದ್ರೆ, ಇದುವರೆಗೂ ಐದು ಪಂದ್ಯಗಳ ಸರಣಿಯನ್ನ ಆಡಿರೋದು ಬೆರಳಣಿಕೆಯಷ್ಟು ರಾಷ್ಟ್ರಗಳು ಮಾತ್ರ. ಆದ್ರೆ, 5ಪಂದ್ಯಗಳ ಸರಣಿಯಲ್ಲಿ ಯಾವ ತಂಡವೂ ಕ್ಲೀನ್ ಸ್ವೀಪ್ ಸಾಧನೆಯನ್ನ ಮಾಡಿಲ್ಲ. ಆದ್ರೀಗ ಕಿಂಗ್ ಕೊಹ್ಲಿ ನಾಯತ್ವದ ಟೀಂ ಇಂಡಿಯಾ ಮುಂದೆ ಅಂತಹದ್ದೊಂದು ವಿಶ್ವ ದಾಖಲೆ ಬರೆಯೋ ಅವಕಾಶವಿದೆ.
5ಪಂದ್ಯಗಳ ಸರಣಿ ಆಡಿದ ದೇಶಗಳು:
ಇದುವೆರೆಗೂ 5ಪಂದ್ಯಗಳ ಸರಣಿಯನ್ನ ಯಾವ್ಯಾವ ದೇಶಗಳು ಆಡಿವೆ ಅನ್ನೋದನ್ನ ನೋಡೋದಾದ್ರೆ, 2014ರಲ್ಲಿ ಹಾಂಗ್ಕಾಂಗ್ ಹಾಗೂ ನೇಪಾಳ 5ಪಂದ್ಯಗಳ ಟಿಟ್ವೆಂಟಿ ಸರಣಿಯನ್ನ ಆಡಿದ್ವು. ಆದ್ರೆ 4 ಪಂದ್ಯ ಮಳೆಯಿಂದ ರದ್ದಾಗಿದ್ರೆ, 1ಪಂದ್ಯದಲ್ಲಿ ಹಾಂಗ್ಕಾಂಗ್ ಗೆಲುವು ಸಾಧಿಸಿತ್ತು. 2019ರಲ್ಲಿ ವನೌಟ್-ಮಲೇಷ್ಯಾ ನಡುವೆ ನಡೆದ 5ಪಂದ್ಯಗಳ ಸರಣಿಯಲ್ಲಿ ವಕೌಟ್ 3-2ಅಂತರದಿಂದ ಗೆದ್ದಿತ್ತು. ಕಳೆದ ವರ್ಷದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಸರಣಿಯಲ್ಲಿ ಇಂಗ್ಲೆಂಡ್3-2ಅಂತರದಿಂದ ಸರಣಿ ಗೆಲುವು ಸಾಧಿಸಿತ್ತು.
Published On - 12:46 pm, Sun, 2 February 20