Wrestlers Protest: ಸಾಕ್ಷಿ, ವಿನೇಶ್, ಬಜರಂಗ್ ವಿರುದ್ಧ ಎಫ್‌ಐಆರ್‌ಗೆ ಅರ್ಜಿ: ಪ್ರತಿಭಟನೆ ತೀವ್ರಗೊಳಿಸಲು ಮತ್ತೊಂದು ಹೆಜ್ಜೆ ಇಟ್ಟಿ ಕುಸ್ತಿಪಟುಗಳು

|

Updated on: May 26, 2023 | 7:54 AM

FIR: ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸುವಂತೆ ಆರಂಭವಾಗಿರುವ ಪ್ರತಿಭಟನೆಯಲ್ಲಿ ಪ್ರಮುಖ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಭಾಗವಹಿಸಿದ್ದು, ಇದೀಗ ಇವರ ಮೇಲೆ ಪಟಿಯಾಲ ಹೌಸ್ ಕೋರ್ಟ್​ನಲ್ಲಿ ದೂರು ದಾಖಲಾಗಿದೆ.

Wrestlers Protest: ಸಾಕ್ಷಿ, ವಿನೇಶ್, ಬಜರಂಗ್ ವಿರುದ್ಧ ಎಫ್‌ಐಆರ್‌ಗೆ ಅರ್ಜಿ: ಪ್ರತಿಭಟನೆ ತೀವ್ರಗೊಳಿಸಲು ಮತ್ತೊಂದು ಹೆಜ್ಜೆ ಇಟ್ಟಿ ಕುಸ್ತಿಪಟುಗಳು
wrestlers protest
Follow us on

ಭಾರತದ ಕುಸ್ತಿ ಫೆಡರೇಶನ್ (WFI) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸುವಂತೆ ಆರಂಭವಾಗಿರುವ ಪ್ರತಿಭಟನೆಯಲ್ಲಿ ಪ್ರಮುಖ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಭಾಗವಹಿಸಿದ್ದು, ಇದೀಗ ಇವರ ಮೇಲೆ ಪಟಿಯಾಲ ಹೌಸ್ ಕೋರ್ಟ್​ನಲ್ಲಿ ದೂರು ದಾಖಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸುಳ್ಳು ಆರೋಪ ಮಾಡಿರುವುದಾಗಿ ಹೇಳಿಕೆ ನೀಡಲಾಗಿದೆ.

ಗುರುವಾರ ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ನಡೆದಿದ್ದು ಜೂನ್ 9 ರೊಳಗೆ ತೆಗೆದುಕೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ. ಈಗ ಈ ಪ್ರಕರಣದ ಮುಂದಿನ ವಿಚಾರಣೆ ಜೂನ್ 9 ರಂದು ನಡೆಯಲಿದೆ. ಬಾಮ್ ಬಾಮ್ ಮಹಾರಾಜ್ ನೌಹತಿಯಾ ಎಂಬುವವರು ದೂರು ನೀಡಿದ್ದು ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನಾ ನಿರತ ಕುಸ್ತಿಪಟುಗಳು ಅಸಂಸದೀಯ ಭಾಷೆ ಬಳಸಿದ್ದಾರೆ. ಆರೋಪಿಗಳು ಸಿಂಗ್ ಅವರ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

IPL 2023: ಬೆಸ್ಟ್ ಐಪಿಎಲ್ ತಂಡ ಪ್ರಕಟಿಸಿದ ಸುರೇಶ್ ರೈನಾ; ಧೋನಿಗಿಲ್ಲ ತಂಡದಲ್ಲಿ ಸ್ಥಾನ..!

ಇದನ್ನೂ ಓದಿ
GT vs MI, Qualifier 2: ಐಪಿಎಲ್​ನಲ್ಲಿಂದು ಗುಜರಾತ್-ಮುಂಬೈ ನಡುವೆ ಕ್ವಾಲಿಫೈಯರ್-2: ಸೋತರೆ ಔಟ್, ಗೆದ್ದರೆ ಫೈನಲ್​ಗೆ
Virat Kohli: ಮೈದಾನಕ್ಕಿಳಿಯದೇ ದಾಖಲೆ ಬರೆದ ಕಿಂಗ್ ಕೊಹ್ಲಿ
IPL 2023: ವಿರಾಟ್ ಕೊಹ್ಲಿ ಜೊತೆ ಕ್ಷಮೆ ಕೇಳಿದ್ರಾ ನವೀನ್ ಉಲ್ ಹಕ್?
Asia Cup 2023: 3 ಮಂಡಳಿ ಅಧ್ಯಕ್ಷರ ಹಾಜರಿ; ಐಪಿಎಲ್ ಫೈನಲ್ ಪಂದ್ಯದಲ್ಲಿ ಏಷ್ಯಾಕಪ್ ಭವಿಷ್ಯ ನಿರ್ಧಾರ!

ಸಿಂಗ್ ಮೇಲೆ ಎರಡು ಎಫ್‌ಐಆರ್ ಆಗಿದ್ದರೂ ಇನ್ನೂ ಬಂಧಿಸಿಲ್ಲ. ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ ಪೈಲ್ವಾನರು ಅವರನ್ನು ಲೈಂಗಿಕ ಶೋಷಣೆಯ ಆರೋಪಗಳಲ್ಲಿ ಬಂಧಿಸದ ಹೊರತು ಪ್ರತಿಭಟನೆಯಿಂದ ಹಿಂತೆಗೆಯುವುದಿಲ್ಲ ಎಂದು ಸಂಕಲ್ಪ ಮಾಡಿದ್ದಾರೆ. 2012 ರಿಂದ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 7 ಮಹಿಳಾ ಕುಸ್ತಿಪಟುಗಳು ಈ ಹಿಂದೆ ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು.

ಇದರ ನಡುವೆ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಹಾಗೂ ವಿನೇಶಾ ಪೋಗಟ್ ಅವರು ಇದೇ 28ರಂದು ಮಹಿಳಾ ಮಹಾಪಂಚಾಯತ್‌ ಆಯೋಜನೆಗೆ ಸಿದ್ಧತೆ ನಡೆಸಿದ್ದಾರೆ. ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಖಾಪ್ ಪಂಚಾಯತ್‌ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲ ಕೋರುತ್ತಿದ್ದಾರೆ. ಮಹಾಪಂಚಾಯತ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರುತ್ತಿದ್ದಾರೆ. ಅದೇ ದಿನ ರಾಜಧಾನಿಯಲ್ಲಿ ನೂತನ ಸಂಸತ್ ಭವನವೂ ಉದ್ಘಾಟನೆಗೊಳ್ಳಲಿದೆ. ಇತ್ತ ಜಂತರ್ ಮಂಥರ್‌ನಲ್ಲಿ ಸಂಗೀತಾ ಪೋಗಟ್ ಅವರು ಧರಣಿಯ ಮುಂದಾಳತ್ವ ವಹಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ