AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs MI, Qualifier 2: ಐಪಿಎಲ್​ನಲ್ಲಿಂದು ಗುಜರಾತ್-ಮುಂಬೈ ನಡುವೆ ಕ್ವಾಲಿಫೈಯರ್-2: ಸೋತರೆ ಔಟ್, ಗೆದ್ದರೆ ಫೈನಲ್​ಗೆ

Gujarat vs Mumbai: ಇಂದು ಕ್ವಾಲಿಫೈಯರ್-2 ಪಂದ್ಯ ನಡೆಯಲಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ (GT vs MI) ನಡುವೆ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದೆ.

GT vs MI, Qualifier 2: ಐಪಿಎಲ್​ನಲ್ಲಿಂದು ಗುಜರಾತ್-ಮುಂಬೈ ನಡುವೆ ಕ್ವಾಲಿಫೈಯರ್-2: ಸೋತರೆ ಔಟ್, ಗೆದ್ದರೆ ಫೈನಲ್​ಗೆ
GT vs MI Qualifier 2
Vinay Bhat
|

Updated on:May 26, 2023 | 7:19 AM

Share

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನು ಕೇವಲ ಎರಡು ಪಂದ್ಯಗಳು ಮಾತ್ರ ನಡೆಯಲಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಕ್ವಾಲಿಫೈಯರ್​ನಲ್ಲಿ ಗೆದ್ದು ಫೈನಲ್​ಗೆ ಪ್ರವೇಶ ಪಡೆದಿದೆ. ಇದೀಗ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್​ನಲ್ಲಿ ಗೆದ್ದ ತಂಡಗಳ ನಡುವೆ ಕ್ವಾಲಿಫೈಯರ್-2 (Qualifier 2) ಪಂದ್ಯ ನಡೆಯಲಿದೆ. ಇಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (GT vs MI) ನಡುವೆ ಈ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದೆ. ಇಲ್ಲಿ ಗೆದ್ದ ತಂಡ ಸಿಎಸ್​ಕೆ ವಿರುದ್ಧ ಐಪಿಎಲ್ 2023 ಫೈನಲ್​ನಲ್ಲಿ ಟ್ರೋಫಿಗಾಗಿ ಸೆಣೆಸಾಡಲಿದೆ.

ಗುಜರಾತ್:

ಜಿಟಿ ತಂಡ ಇಡೀ ಟೂರ್ನಿಯಲ್ಲಿ ಭರ್ಜರಿ ಆಟ ಪ್ರದರ್ಶಿಸಿ ಮೊದಲ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆಯಿಟ್ಟಿತ್ತು. ಆದರೆ, ಮೊದಲ ಕ್ವಾಲಿಫೈಯರ್​ನಲ್ಲಿ ಚೆನ್ನೈ ವಿರುದ್ಧ ಸೋತಿತು. ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿತು. ಪ್ರತಿ ಬಾರಿ ಉತ್ತಮ ಆರಂಭ ಒದಗಿಸುತ್ತಿದ್ದ ವೃದ್ದಿಮಾನ್ ಸಾಹ ಬೇಗನೆ ನಿರ್ಗಮಿಸಿದ್ದರು. ನಾಯಕ ಹಾರ್ದಿಕ್ ಪಾಂಡ್ಯ ಕಡೆಯಿಂದ ಈ ಟೂರ್ನಿಯಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬಂದಿಲ್ಲ.

ಶುಭ್​ಮನ್ ಗಿಲ್ ಮಾತ್ರ ಬೊಂಬಾಟ್ ಫಾರ್ಮ್​ನಲ್ಲಿದ್ದು ಹಿಂದಿನ ಮ್ಯಾಚ್​ನಲ್ಲಿ ಕೂಡ ಕೊಡುಗೆ ನೀಡಿದ್ದರು. ಉಳಿದಂತೆ ದಸನ್ ಶನಕಾ, ಡೇವಿಡ್ ಮಿಲ್ಲರ್, ವಿಜಯ್ ಶಂಕರ್ ಹಾಗೂ ರಾಹುಲ್ ತೇವಾಟಿಯ ಮಧ್ಯಮ ಕ್ರಮಾಂಕದಲ್ಲಿ ಅಪಾಯಕಾರಿ ಆಗಿದ್ದಾರೆ. ರಶೀದ್ ಖಾನ್ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶ್ವಾ ಲಿಟಲ್ ಹಾಗೂ ನೂರ್ ಅಹ್ಮದ್ ಮಾರಕವಾಗಿದ್ದಾರೆ.

ಇದನ್ನೂ ಓದಿ
Image
Virat Kohli: ಮೈದಾನಕ್ಕಿಳಿಯದೇ ದಾಖಲೆ ಬರೆದ ಕಿಂಗ್ ಕೊಹ್ಲಿ
Image
IPL 2023: ವಿರಾಟ್ ಕೊಹ್ಲಿ ಜೊತೆ ಕ್ಷಮೆ ಕೇಳಿದ್ರಾ ನವೀನ್ ಉಲ್ ಹಕ್?
Image
Asia Cup 2023: 3 ಮಂಡಳಿ ಅಧ್ಯಕ್ಷರ ಹಾಜರಿ; ಐಪಿಎಲ್ ಫೈನಲ್ ಪಂದ್ಯದಲ್ಲಿ ಏಷ್ಯಾಕಪ್ ಭವಿಷ್ಯ ನಿರ್ಧಾರ!
Image
IPL 2023: RCB ಯವರು ಚಾನ್ಸ್ ನೀಡಿಲ್ಲ, ಆ ಬಳಿಕ ನಾ ಮುಂಬೈ ಇಂಡಿಯನ್ಸ್ ಸೇರಿದೆ: ಆಕಾಶ್ ಮಧ್ವಾಲ್

IPL 2023: ಬೆಸ್ಟ್ ಐಪಿಎಲ್ ತಂಡ ಪ್ರಕಟಿಸಿದ ಸುರೇಶ್ ರೈನಾ; ಧೋನಿಗಿಲ್ಲ ತಂಡದಲ್ಲಿ ಸ್ಥಾನ..!

ಮುಂಬೈ ಇಂಡಿಯನ್ಸ್:

ಮುಂಬೈ ತಂಡ ಟೂರ್ನಿಯ ಅಂತಿಮ ಹಂತದಲ್ಲಿ ಸಾಕಷ್ಟು ಬಲಿಷ್ಠವಾಗಿದೆ. ಎಷ್ಟೇ ದೊಡ್ಡ ಮೊತ್ತದ ಟಾರ್ಗೆಟ್ ಇದ್ದರೂ ಸುಲಭವಾಗಿ ಗೆಲುವು ಸಾಧಿಸುತ್ತಿದೆ. ನಾಯಕ ರೋಹಿತ್ ಶರ್ಮಾ ಅವರ ಸತತ ಕಳಪೆ ಪ್ರದರ್ಶನ ತಂಡಕ್ಕೆ ದೊಡ್ಡ ಚಿಂತೆ. ಈ ಟೂರ್ನಿಯಲ್ಲಿ ಹಿಟ್​ಮ್ಯಾನ್ ಕಡೆಯಿಂದ ಉತ್ತಮ ಆಟ ಬಂದಿಲ್ಲ.

ಉಳಿದಂತೆ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೀರ ಭರ್ಜರಿ ಫಾರ್ಮ್​ನಲ್ಲಿದ್ದು ರನ್ ಕಲೆಹಾಕುತ್ತಿದ್ದಾರೆ. ಜೇಸನ್ ಬೆಹ್ರೆಂಡಾರ್ಫ್, ಗ್ರೀನ್, ಕ್ರಿಸ್ ಜೋರ್ಡನ್, ಆಕಾಶ್ ಮಧ್ವಾಲ್ ಮಾರಕವಾಗಬೇಕಿದೆ. ಪಿಯೂಷ್ ಚಾವ್ಲಾ ಮುಂಬೈ ಬೌಲಿಂಗ್​ನ ಪ್ರಮುಖ ಟ್ರಂಪ್ ಕಾರ್ಡ್ ಆಗಿದ್ದಾರೆ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ರಮಣದೀಪ್ ಸಿಂಗ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್, ವಿಷ್ಣು ವಿನೋದ್, ರಿಲೆ ಮೆರೆಡಿತ್, ಶಮ್ಸ್ ಮುಲಾನಿ, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ಹೃತಿಕ್ ಶೋಕೀನ್, ಡುವಾನ್ ಜಾನ್ಸೆನ್, ಸಂದೀಪ್ ವಾರಿಯರ್, ಜೇಸನ್ ಬೆಹ್ರೆಂಡಾರ್ಫ್.

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ, ಶುಭ್​ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಜೋಶ್ವಾ ಲಿಟಲ್, ಮೋಹಿತ್ ಶರ್ಮಾ, ಸಾಯಿ ಸುದರ್ಶನ್, ಶ್ರೀಕರ್ ಭರತ್, ಶಿವಂ ಮಾವಿ, ರವಿಶ್ರೀನಿವಾಸನ್ ಸಾಯಿ ಕಿಶೋರ್, ಜಯಂತ್ ಯಾದವ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ದಾಸುನ್ ಶಾನಕ, ಓಡನ್ ಸ್ಮಿತ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:18 am, Fri, 26 May 23