- Kannada News Photo gallery Cricket photos Kannada News | IPL 2023: I didn't get chances at RCB, then I joined MI-Akash Madhwal
IPL 2023: RCB ಯವರು ಚಾನ್ಸ್ ನೀಡಿಲ್ಲ, ಆ ಬಳಿಕ ನಾ ಮುಂಬೈ ಇಂಡಿಯನ್ಸ್ ಸೇರಿದೆ: ಆಕಾಶ್ ಮಧ್ವಾಲ್
IPL 2023 Kannada: ಕೇವಲ 5 ರನ್ಗಳನ್ನು ನೀಡಿದ ಆಕಾಶ್ ಮಧ್ವಾಲ್ 5 ವಿಕೆಟ್ಗಳನ್ನು ಕಬಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು.
Updated on: May 25, 2023 | 10:08 PM

IPL 2023: ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸಿ ಆಕಾಶ್ ಮಧ್ವಾಲ್ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 3.3 ಓವರ್ಗಳನ್ನು ಎಸೆದ ಆಕಾಶ್ ನೀಡಿದ್ದು ಕೇವಲ 5 ರನ್ ಮಾತ್ರ.

ಕೇವಲ 5 ರನ್ಗಳನ್ನು ನೀಡಿದ ಆಕಾಶ್ ಮಧ್ವಾಲ್ 5 ವಿಕೆಟ್ಗಳನ್ನು ಕಬಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು. ಈ ಅಮೋಘ ಪ್ರದರ್ಶನದಿಂದಾಗಿ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿ ಇದೀಗ 2ನೇ ಕ್ವಾಲಿಫೈಯರ್ಗೆ ಪ್ರವೇಶಿಸಿದೆ.

ವಿಶೇಷ ಎಂದರೆ ಮುಂಬೈ ಇಂಡಿಯನ್ಸ್ ಪರ ಅತ್ಯುತ್ತಮವಾಗಿ ಬೌಲಿಂಗ್ ಸಂಘಟಿಸುತ್ತಿರುವ ಇದೇ ಆಕಾಶ್ ಮಧ್ವಾಲ್ ಈ ಹಿಂದೆ ಆರ್ಸಿಬಿ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಅಂದರೆ 2019 ರಲ್ಲಿ ಆರ್ಸಿಬಿ ತಂಡದ ನೆಟ್ ಬೌಲರ್ ಆಗಿದ್ದರು.

ಆರ್ಸಿಬಿ ತಂಡದ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಪ್ರಮುಖ ಬ್ಯಾಟ್ಸ್ಮನ್ಗಳಿಗೆ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ಇದಾಗ್ಯೂ ಆರ್ಸಿಬಿ ಫ್ರಾಂಚೈಸಿ ಆಕಾಶ್ ಮಧ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.

ಇತ್ತ ಆರ್ಸಿಬಿ ಪರ ನೆಟ್ ಬೌಲರ್ ಆಗಿ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟರೂ ಅವಕಾಶ ಸಿಗದ ಕಾರಣ ಆಕಾಶ್ ಮಧ್ವಾಲ್ ಮುಂಬೈ ಇಂಡಿಯನ್ಸ್ನತ್ತ ಮುಖ ಮಾಡಿದ್ದರು. ಅದರಂತೆ ಮುಂಬೈ ಬಳಗದಲ್ಲಿ ಕಾಣಿಸಿಕೊಂಡ ಯುವ ಬೌಲರ್ನನ್ನು ಈ ಬಾರಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 20 ಲಕ್ಷ ರೂ. ನೀಡಿ ಖರೀದಿಸಿತು.

ಅದರಂತೆ ಈ ಬಾರಿ ಒಟ್ಟು 7 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಆಕಾಶ್ ಮಧ್ವಾಲ್ ಒಟ್ಟು 129 ಎಸೆತಗಳನ್ನು ಎಸೆದು ಕೇವಲ 167 ರನ್ ನೀಡಿದ್ದಾರೆ. ಅಲ್ಲದೆ ಒಟ್ಟು 13 ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದಾರೆ. ಅದರಲ್ಲೂ ಎಲಿಮಿನೇಟರ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ.

ಈ ದಾಖಲೆಯ ಬೌಲಿಂಗ್ ಪ್ರದರ್ಶನದ ಬಳಿಕ ಮಾತನಾಡಿದ ಆಕಾಶ್ ಮಧ್ವಾಲ್, ತಾನು 2019 ರಲ್ಲಿ ಆರ್ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ತನಗೆ ಚಾನ್ಸ್ ಸಿಗದ ಕಾರಣ ಆ ಬಳಿಕ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡೆ ಎಂದು ತಿಳಿಸಿದ್ದಾರೆ.
