IPL 2023: ಚೆನ್ನೈ ತಂಡದಲ್ಲಿ ಎಲ್ಲವೂ ಸರಿಯಿಲ್ಲ: ಜಡೇಜಾ ಮನವೊಲಿಸಲು ಮುಂದಾದ CSK ಸಿಇಒ

IPL 2023 Kannada: ಈ ಹಿಂದೆ ಕೂಡ ಜಡೇಜಾ ಸಿಎಸ್​ಕೆ ಫ್ರಾಂಚೈಸಿ ಜೊತೆ ಮುನಿಸಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್​ನಲ್ಲಿ ನಾಯಕತ್ವ ನೀಡಿ ಕೆಲ ಪಂದ್ಯಗಳ ಬಳಿಕ ಕಪ್ತಾನನ ಸ್ಥಾನದಿಂದ ಕೆಳಗಿಳಿಸಿದ್ದು.

TV9 Web
| Updated By: ಝಾಹಿರ್ ಯೂಸುಫ್

Updated on: May 25, 2023 | 8:28 PM

IPL 2023: ಐಪಿಎಲ್​ ಸೀಸನ್ 16 ಇನ್ನೇನು ಮುಗಿಯಲಿದೆ ಅನ್ನುವಷ್ಟರಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದೆ. ಈ ಸುದ್ದಿಗಳನ್ನು ಪುಷ್ಠೀಕರಿಸುವಂತಹ ಸನ್ನಿವೇಶಗಳು ಕೂಡ ಕಂಡು ಬರಲಾರಂಭಿಸಿದೆ.

1 / 9
ಹೌದು, ಕೆಲ ದಿನಗಳ ಹಿಂದೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ನಡುವೆ ಮೈದಾನದಲ್ಲೇ ವಾಕ್ಸಮರ ನಡೆದಿತ್ತು. ಎಲ್ಲಾ ಆಟಗಾರರು ಪ್ಲೇಆಫ್ ಪ್ರವೇಶಿಸಿದ ಸಂಭ್ರಮದಲ್ಲಿದ್ದರೆ ಇತ್ತ ಧೋನಿ ಜಡೇಜಾಗೆ ಕ್ಲಾಸ್ ತೆಗೆದುಕೊಂಡಿದ್ದರು.

2 / 9
ಅಲ್ಲದೆ ಸಿಎಸ್​ಕೆ ನಾಯಕನ ಮಾತುಗಳನ್ನು ಆಲಿಸುತ್ತಿದ್ದ ಜಡೇಜಾ ಅವರ ಮುಖದಲ್ಲಿ ಯಾವುದೇ ನಗು ಇರಲಿಲ್ಲ. ಅಲ್ಲದೆ ನಿರಾಶಭಾವದೊಂದಿಗೆ ಅವರು ಡಗೌಟ್​ಗೆ ತೆರಳಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ  ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಕರ್ಮ ರಿಟರ್ನ್ಸ್ ಎನ್ನುವ ಪೋಸ್ಟ್ ಹಂಚಿಕೊಂಡಿದ್ದರು.

3 / 9
ಕರ್ಮವು ನಿಮ್ಮ ಬಳಿಗೆ ಬಂದೇ ಬರುತ್ತದೆ. ಅದು ಬೇಗನೆ ಬರಬಹುದು ಅಥವಾ ತಡವಾಗಬಹುದು. ಆದರೆ ಅದು ಖಂಡಿತವಾಗಿಯೂ ಬಂದೇ ಬರುತ್ತದೆ ಎಂಬ ಪೋಸ್ಟ್​ ಅನ್ನು ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ಪೋಸ್ಟ್​ ಅನ್ನು ಶೇರ್ ಮಾಡಿರುವ ಜಡೇಜಾ ಅವರ ಪತ್ನಿ ರಿವಾಬಾ..ನಿಮ್ಮ ಸ್ವಂತ ಹಾದಿಯನ್ನು ಅನುಸರಿಸಿ ಎಂದು ಬರೆದುಕೊಂಡಿದ್ದರು.

4 / 9
ಇದು ಅಲ್ಲಿಗೆ ಮುಗಿಯಿತು ಅಂದುಕೊಂಡರೆ, ಐಪಿಎಲ್​ ಮೊದಲ ಕ್ವಾಲಿಫೈಯರ್ ಪಂದ್ಯದ ಬಳಿಕ ಮತ್ತೊಂದು ಘಟನೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಯಿತು. ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್​ಕೆ ಗೆದ್ದ ಬಳಿಕ ಎಲ್ಲರೂ ಸಂಭ್ರಮದಲ್ಲಿದ್ದರೆ, ಇತ್ತ ರವೀಂದ್ರ ಜಡೇಜಾ ಏಕಾಂಗಿಯಾಗಿ ತೆರಳಿದ್ದರು.

5 / 9
ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಅವರು ಜಡೇಜಾ ಅವರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಕೆಲ ಕ್ಷಣಗಳ ಕಾಲ ಕಾಸಿ ವಿಶ್ವನಾಥನ್ ಅವರು ಜಡೇಜಾ ಜೊತೆ ಮಾತನಾಡಿದರು.

6 / 9
ಆದರೆ ಸಿಎಸ್​ಕೆ ಸಿಇಒ ಅವರ ಮಾತುಗಳನ್ನು ಆಲಿಸಿದ ಜಡೇಜಾ ನಿರಾಸಕ್ತಿಯಿಂದಲೇ ಸಾಗಿದರು. ಇದೀಗ ಎಲ್ಲಾ ಆಟಗಾರರು ಫೈನಲ್ ಪ್ರವೇಶಿಸಿದ ಸಂಭ್ರಮದಲ್ಲಿರುವಾಗ ಕಾಸಿ ವಿಶ್ವನಾಥನ್ ಅವರು ಜಡೇಜಾ ಅವರನ್ನು ಸಮಾಧಾನಪಡಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

7 / 9
ಇದರ ಬೆನ್ನಲ್ಲೇ ಸಿಎಸ್​ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಮತ್ತೆ ಕೇಳಿ ಬರಲಾರಂಭಿಸಿದೆ. ಏಕೆಂದರೆ ಈ ಹಿಂದೆ ಕೂಡ ಜಡೇಜಾ ಸಿಎಸ್​ಕೆ ಫ್ರಾಂಚೈಸಿ ಜೊತೆ ಮುನಿಸಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್​ನಲ್ಲಿ ನಾಯಕತ್ವ ನೀಡಿ ಕೆಲ ಪಂದ್ಯಗಳ ಬಳಿಕ ಕಪ್ತಾನನ ಸ್ಥಾನದಿಂದ ಕೆಳಗಿಳಿಸಿದ್ದು.

8 / 9
ಇದಾದ ಬಳಿಕ ಜಡೇಜಾ ಸಿಎಸ್​ಕೆ ಪರ ಆಡುವುದಿಲ್ಲ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಅಂತಿಮವಾಗಿ ಸಿಎಸ್​ಕೆ ಫ್ರಾಂಚೈಸಿಯು ಸ್ಟಾರ್ ಆಲ್​ರೌಂಡರ್​ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಐಪಿಎಲ್​ನ ಮುಕ್ತಾಯದ ಹಂತದಲ್ಲೇ ರವೀಂದ್ರ ಜಡೇಜಾ ಹಾಗೂ ಸಿಎಸ್​ಕೆ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಕೇಳಿ ಬರಲಾರಂಭಿಸಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

9 / 9
Follow us