FIFA World Cup Opening Ceremony: ಫಿಫಾ ವಿಶ್ವಕಪ್ 2022 ಆರಂಭಕ್ಕೆ ಕ್ಷಣಗಣನೆ: ಉದ್ಘಾಟನಾ ಸಮಾರಂಭ ಹೇಗಿರಲಿದೆ?: ಎಷ್ಟು ಗಂಟೆಗೆ?

ಫುಟ್​​ಬಾಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಕತಾರ್ (Qatar) ಫಿಫಾ ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧವಾಗಿ ನಿಂತಿದೆ. ನವೆಂಬರ್ 20 ರಂದು ವಿಶ್ವಕಪ್​ ಉದ್ಘಾಟನಾ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9:30ಕ್ಕೆ ಪ್ರಾರಂಭವಾಗುತ್ತದೆ.

FIFA World Cup Opening Ceremony: ಫಿಫಾ ವಿಶ್ವಕಪ್ 2022 ಆರಂಭಕ್ಕೆ ಕ್ಷಣಗಣನೆ: ಉದ್ಘಾಟನಾ ಸಮಾರಂಭ ಹೇಗಿರಲಿದೆ?: ಎಷ್ಟು ಗಂಟೆಗೆ?
FIFA World Cup 2022
Follow us
TV9 Web
| Updated By: Vinay Bhat

Updated on:Nov 17, 2022 | 12:23 PM

ಬಹುನಿರೀಕ್ಷಿತ ಫಿಫಾ ವಿಶ್ವಕಪ್‌ 2022 ಫುಟ್​​ಬಾಲ್‌ (FIFA World Cup 2022) ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ. ಫುಟ್​​ಬಾಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಕತಾರ್ (Qatar) ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧವಾಗಿ ನಿಂತಿದೆ. ಆತಿಥೇಯ ರಾಷ್ಟ್ರ ಎನ್ನುವ ಕಾರಣಕ್ಕೆ ಕತಾರ್​ಗೆ ನೇರ ಪ್ರವೇಶ ದೊರೆಯಿತು. ಈ ಬಾರಿಯ ಫುಟ್​ಬಾಲ್ (Football) ಫೀವರ್​ಗೆ ನವೆಂಬರ್ 20ಕ್ಕೆ ಚಾಲನೆ ಸಿಗಲಿದ್ದು ಡಿಸೆಂಬರ್ 18 ರಂದು ಕೊನೆಗೊಳ್ಳುತ್ತದೆ. ಕಾಲ್ಚೆಂಡಿನ ಕಾದಾಟಕ್ಕೆ 32 ತಂಡಗಳು ಭರದ ಸಿದ್ಧತೆಯಲ್ಲಿ ತೊಡಗಿವೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್‌ ಹಂತಕ್ಕೆ ಪ್ರವೇಶಿಸಲಿವೆ. 8 ಪ್ರಿ ಕ್ವಾರ್ಟರ್‌ ಫೈನಲ್‌, 4 ಕ್ವಾರ್ಟರ್‌ ಫೈನಲ್‌, 2 ಸೆಮಿಫೈನಲ್‌ಗಳ ಬಳಿಕ ಫೈನಲ್‌ಗೇರುವ ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಲಿದೆ.

ನವೆಂಬರ್ 20 ರಂದು ಫಿಫಾ ಫುಟ್​ಬಾಲ್ ವಿಶ್ವಕಪ್​ ಉದ್ಘಾಟನಾ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9:30ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 3.30ಕ್ಕೆ ಮೊದಲ ಪಂದ್ಯ, ಎರಡನೇ ಪಂದ್ಯ ಸಂಜೆ 6.30ಕ್ಕೆ, ಮೂರನೇ ಪಂದ್ಯ 9.30ಕ್ಕೆ ಹಾಗೂ ಮಧ್ಯರಾತ್ರಿ ನಾಲ್ಕನೇ ಪಂದ್ಯ 12.30ಕ್ಕೆ ನಡೆಯಲಿದೆ. ಡಿಸೆಂಬರ್ 18 ರಂದು ಫೈನಲ್ ಏರ್ಪಡಿಸಲಾಗಿದೆ. ಈ ಪಂದ್ಯಗಳನ್ನು ಭಾರತದಲ್ಲಿ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅದೇ ಸಮಯದಲ್ಲಿ Voot ಅಪ್ಲಿಕೇಶನ್ ಡಿಜಿಟಲ್‌ನಲ್ಲಿ ನೇರ ಪ್ರಸಾರವಾಗುತ್ತದೆ.

ಕತಾರ್ ಈ ಬಾರಿಯ ವಿಶ್ವಕಪ್‌ಗಾಗಿ ಒಟ್ಟು 7 ಅತ್ಯಾಧುನಿಕ ಸ್ಟೇಡಿಯಂಗಳನ್ನು ನಿರ್ಮಿಸಿದೆ. 64 ಪಂದ್ಯಗಳು ಅಲ್ ಬೇತ್ ಸ್ಟೇಡಿಯಂ, ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂ, ಅಲ್ ಥುಮಾಮಾ ಸ್ಟೇಡಿಯಂ, ಅಹ್ಮದ್ ಬಿನ್ ಅಲಿ ಸ್ಟೇಡಿಯಂ, ಲುಸೈಲ್ ಸ್ಟೇಡಿಯಂ, ಸ್ಟೇಡಿಯಂ 974, ಎಜುಕೇಶನ್ ಸಿಟಿ ಸ್ಟೇಡಿಯಂ ಮತ್ತು ಅಲ್ ಜನೌಬ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ
Image
India vs New Zealand: ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯ ಅನುಮಾನ: ಇಲ್ಲಿದೆ ವೆಲ್ಲಿಂಗ್ಟನ್ ಹವಾಮಾನ ವರದಿ
Image
Glenn Maxwell: ಐಪಿಎಲ್ ಮಿನಿ ಹರಾಜಿಗೂ ಮುನ್ನ ಆರ್​ಸಿಬಿ ತಂಡಕ್ಕೆ ಸಿಕ್ತು ಬಂಪರ್ ಸುದ್ದಿ: ಏನದು ನೋಡಿ
Image
IND vs AUS: ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ: ಬರೋಬ್ಬರಿ 5 ವರ್ಷಗಳ ಬಳಿಕ ಡೆಲ್ಲಿಯಲ್ಲಿ ಟೆಸ್ಟ್ ಪಂದ್ಯ ಆಯೋಜನೆ
Image
Bigg Boss OTT Kannada: ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಇವರೇ..!

ಅಲ್ ಬೇತ್ ಸ್ಟೇಡಿಯಂನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಇಲ್ಲಿ ಸುಮಾರು 60,000 ಆಸನ ಸಾಮರ್ಥ್ಯವನ್ನು ಏರ್ಪಡಿಸಲಾಗಿದೆ. ಉದ್ಘಾಟನಾ ಸಮಾರಂಭವು ನವೆಂಬರ್ 20 ರಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತದೆ. ಭಾರತೀಯ ಕಾಲ ಮಾನದ ಪ್ರಕಾರ ಸಂಜೆ 7:30ಕ್ಕೆ ಶುರುವಾಗಲಿದೆ. ಉದ್ಘಾಟನಾ ಸಮಾರಂಭಕ್ಕಾಗಿ ಪ್ರಸಿದ್ಧ ಬಾಯ್ ಬ್ಯಾಂಡ್‌ನ ಏಳು ಸದಸ್ಯರಲ್ಲಿ ಒಬ್ಬರಾದ ಜಂಗ್‌ಕುಕ್ ಪ್ರದರ್ಶನ ನೀಡಲಿದ್ದಾರೆ ಎಂದು ದಕ್ಷಿಣ ಕೊರಿಯಾದ ಬಿಟಿಎಸ್ ಹೇಳಿದೆ.

ಇನ್ನು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿರುವ ಹೆಸರುಗಳಲ್ಲಿ ಕೊಲಂಬಿಯಾದ ಪಾಪ್ ತಾರೆ ಶಕೀರಾ ಕೂಡ ಇದ್ದಾರೆ. ಇವರು 2010 ರ ವಿಶ್ವಕಪ್‌ನ ಅಧಿಕೃತ ಹಾಡು, ಬ್ಲ್ಯಾಕ್ ಐಡ್ ಪೀಸ್, ರಾಬಿ ವಿಲಿಯಮ್ಸ್ ಮತ್ತು ನೋರಾ ಫತೇಹಿ ಹಾಡಿದ್ದಾರೆ. ಅಂತೆಯೆ ಬ್ರಿಟಿಷ್ ಗಾಯಕಿ ದುವಾ ಲಿಪಾ ಅವರು ಸಮಾರಂಭದಲ್ಲಿ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಉದ್ಘಾಟನಾ ಸಮಾರಂಭದ ಹೊರತಾಗಿ, ದೋಹಾದ ಅಲ್ ಬಿದ್ದಾ ಪಾರ್ಕ್ ವಿಶ್ವದ ಅನೇಕ ಕಲಾವಿದರನ್ನು ಫಿಫಾ ಫ್ಯಾನ್ ಫೆಸ್ಟಿವಲ್‌ಗೆ ಆಹ್ವಾನಿಸಿದೆ. ಇದು ನವೆಂಬರ್ 19 ರಂದು ನಡೆಯಲಿದೆ. ಅಲ್ಲದೆ ವಿಶ್ವಕಪ್‌ಗಾಗಿ ಕತಾರ್‌ಗೆ ಪ್ರಯಾಣಿಸುವ ಅಭಿಮಾನಿಗಳಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಹೇಳಿದೆ.

Published On - 12:21 pm, Thu, 17 November 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ