ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನ (Tokyo Paralympics) ಕೊನೆಯ ದಿನ ಭಾರತದ ಪದಕದ ಬೇಟೆ ಮುಂದುವರೆದಿದೆ. ದಿನದ ಆರಂಭದಲ್ಲೇ ಭಾರತಕ್ಕೆ ಪದಕ ದಕ್ಕಿದ್ದು, ಪುರುಷರ ಬ್ಯಾಡ್ಮಿಂಟನ್ ಎಸ್ಎಲ್4 ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಭಾರತದ, ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ. ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್ನ ಲೂಕಸ್ ಮಜೂರ್ ವಿರುದ್ಧ ವಿಶ್ವದ ನಂಬರ್ 3 ಆಟಗಾರ ಸುಹಾಸ್ 1-2 ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂದ ಸಾಧನೆಯನ್ನು ಸುಹಾಸ್ ಮಾಡಿದ್ದಾರೆ.
ಸಾಕಷ್ಟು ರೋಚಕತೆ ಸೃಷ್ಟಿಸಿದ ಪಂದ್ಯದ ಮೊದಲ ಸೆಟ್ನಲ್ಲೇ ಸುಹಾಸ್ 21-15 ಮುನ್ನಡೆ ಪಡೆದುಕೊಂಡು ಚೊಚ್ಚಲ ಅಂಕ ಸಂಪಾದಿಸಿದರು. ಎರಡನೇ ರೌಂಡ್ನಲ್ಲೂ ಎದುರಾಳಿ 17-21 ಮುನ್ನಡೆ ಪಡೆದುಕೊಂಡ ಪರಿಣಾಮ 1-1 ಅಂತರದ ಸಮಬಲವಾಯಿತು. ಇಲ್ಲಿಂದ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಅಂತಿಮವಾಗಿ ಮೂರನೇ ಸೆಟ್ನಲ್ಲಿ ಸುಹಾಸ್ 15-21 ಅಂಕಗಳ ಹಿನ್ನಡೆ ಸಾಧಿಸಿ 1-2 ಸೆಟ್ಗಳ ಅಂತರದಿಂದ ಸೋತ ಪರಿಣಾಮ ಬೆಳ್ಳಿ ಪದಕ ತಮ್ಮದಾಗಿಸಿದರು.
It’s 1-1. Decider coming your way. #IND Yathiraj on the roll here ?
LIVE ?https://t.co/PeOBIYSzmH pic.twitter.com/RfKcPGpePg
— Doordarshan Sports (@ddsportschannel) September 5, 2021
ಇದಕ್ಕೂ ಮುನ್ನ ನಿನ್ನೆ ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸುಹಾಸ್ ಅವರು ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದ್ದರು.
ಎಲ್.ವೈ.ಸುಹಾಸ್ ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರು. ಸದ್ಯ ಉತ್ತರಪ್ರದೇಶದ ನೋಯ್ಡಾ ಡಿಸಿ ಆಗಿ ಸುಹಾಸ್ ಸೇವೆ ಸಲ್ಲಿಸುತ್ತಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಐಎಎಸ್ ಅಧಿಕಾರಿ ಸುಹಾಸ್ ಆಗಿದ್ದಾರೆ. ಕರ್ನಾಟಕದ ಹಾಸನದಲ್ಲಿ 1983ರ ಜುಲೈ 2ರಂದು ಹುಟ್ಟಿದ ಸುಹಾಸ್ ಇಂಜಿನಿಯರ್ ಪದವೀಧರರು. ಸುರತ್ಕಲ್ ನ ಎನ್‌ಐಟಿಕೆ ಯಿಂದ ಕಂಪ್ಯೂಟರ್ ಎಂಜಿನಿಯರ್ ಆಗಿ ಪದವಿ ಪಡೆದಿರುವ ಸುಹಾಸ್, ಈ ಹಿಂದೆ ಪ್ರಯಾಗರಾಜ್, ಆಗ್ರಾ, ಅಝಮ್‌ಗಡ, ಜೌನ್‌ಪುರ, ಸೋನ್‌ಭದ್ರಾ ಜಿಲ್ಲೆಗಳ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದಾರೆ.
ಇನ್ನೂ ಇಂದು ನಡೆದ ಬ್ಯಾಡ್ಮಿಂಟನ್ ಎಸ್ಎಲ್4 ವಿಭಾಗದ ಮತ್ತೊಂದು ಪಂದ್ಯದಲ್ಲಿ ತರುಣ್ ದಿಲೊನ್ ಅವರು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೋಲು ಕಂಡರು. ಈ ಮೂಲಕ ಒಟ್ಟಾರೆಯಾಗಿ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಇದರಲ್ಲಿ ಚಿನ್ನ 4 ಗೆದ್ದಿದ್ದರೆ, ಬೆಳ್ಳಿ 8 ಮತ್ತು 6 ಕಂಚಿನ ಪದಕ ಭಾರತ ಬಾಜಿಕೊಂಡಿದೆ.
Published On - 7:39 am, Sun, 5 September 21