US Open: ಮಿಶ್ರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಸೋಲು; ಸಾನಿಯಾ ಮಿರ್ಜಾ ಯುಎಸ್ ಓಪನ್‌ ಪ್ರಯಾಣ ಅಂತ್ಯ

US Open: ಮಿಶ್ರ ಡಬಲ್ಸ್‌ ಮೊದಲ ಸುತ್ತಿನಲ್ಲಿ ಸೋಲು; ಸಾನಿಯಾ ಮಿರ್ಜಾ ಯುಎಸ್ ಓಪನ್‌ ಪ್ರಯಾಣ ಅಂತ್ಯ
ಸಾನಿಯಾ ಮಿರ್ಜಾ

US Open: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್​ನ ಪಯಣ ಅಂತ್ಯಗೊಂಡಿದೆ. ಅವರು ಈಗಾಗಲೇ ಯುಎಸ್ ಓಪನ್ ಮಹಿಳಾ ಡಬಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

TV9kannada Web Team

| Edited By: pruthvi Shankar

Sep 04, 2021 | 7:06 PM

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್​ನ ಪಯಣ ಅಂತ್ಯಗೊಂಡಿದೆ. ಅವರು ಈಗಾಗಲೇ ಯುಎಸ್ ಓಪನ್ ಮಹಿಳಾ ಡಬಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಶನಿವಾರ, ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನಲ್ಲೂ ಕೂಡ ಅವರು ಟೂರ್ನಿಯಿಂದ ಹೊರನಡೆದಿದ್ದಾರೆ.ಸಾನಿಯಾ ಮತ್ತು ರಾಜೀವ್ ರಾಮ್ ಜೋಡಿ ಯುಎಸ್ ಓಪನ್​ ಮಿಶ್ರ ಡಬಲ್ಸ್​ನ ಮೊದಲ ಸುತ್ತಿನಿಂದ ಹೊರನಡೆಯಬೇಕಾಯಿತು. ಭಾರತ-ಯುಎಸ್ ಜೋಡಿ ಮೊದಲ ಸುತ್ತಿನಲ್ಲಿ ಉಕ್ರೇನ್​ನ ಡಯಾನಾ ಯಾಸ್ಟ್ರೆಮ್ಸ್ಕಾ ಮತ್ತು ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಎದುರು ಸೋಲನ್ನು ಎದುರಿಸಬೇಕಾಯಿತು.

ಸಾನಿಯಾ ಮಿರ್ಜಾ ಮಿಶ್ರ ಡಬಲ್ಸ್‌ನಲ್ಲಿ ಸೋತರು ಶ್ರೇಯಾಂಕ ರಹಿತ ಮಿರ್ಜಾ ಮತ್ತು ರಾಮ್ 61 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 3-6, 6-3, 7-10 ರಲ್ಲಿ ಸೋತರು. ಮಿರ್ಜಾ ಮತ್ತು ರಾಮ್ ಮೂರು ಬ್ರೇಕ್ ಪಾಯಿಂಟ್‌ಗಳಲ್ಲಿ ಒಂದನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಾಯಿತು. ಈ ಸೋಲಿನೊಂದಿಗೆ, ಸಾನಿಯಾ ಮಿರ್ಜಾ ಋತುವಿನ ಕೊನೆಯ ಗ್ರ್ಯಾಂಡ್ ಸ್ಲಾಮ್​ನಲ್ಲಿ ಅಭಿಯಾನ ಕೊನೆಗೊಂಡಿತು. ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಅವರು ಈಗಾಗಲೇ ಅಮೆರಿಕದ ಕೊಕೊ ವಂಡೆವೆಜ್ ವಿರುದ್ಧ ಸೋತಿದ್ದಾರೆ. ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊಯೇಷಿಯಾದ ಇವಾನ್ ಡೊಡಿಚ್ ಪುರುಷರ ಡಬಲ್ಸ್​ನ ಎರಡನೇ ಸುತ್ತಿನಲ್ಲಿ ಮೊನಾಕೊದ ಹುಜೊ ನಿಸ್ ಮತ್ತು ಫ್ರಾನ್ಸ್​ನ ಆರ್ಥರ್ ರಿಂಡರ್ನಾಚ್ ಅವರನ್ನು ಎದುರಿಸಲಿದ್ದಾರೆ. ಕಳೆದ ವಾರದ ಆರಂಭದಲ್ಲಿ, ಭಾರತದ ಅನುಭವಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಆಕೆಯ ಯುಎಸ್ ಪಾಲುದಾರ ಕ್ರಿಸ್ಟಿನಾ ಮೆಕ್‌ಹಾಲ್ ಡಬ್ಲ್ಯುಟಿಎ 250 ಟೆನಿಸ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು.

ಸ್ಟೆಫಾನೋಸ್ ಸಿಟ್ಸಿಪಾಸ್ ಔಟ್ ಈ ಮೊದಲು, ಗಾರ್ಬೈನ್ ಮುಗುರುಜಾ, ಸಿಮೋನಾ ಹಲೆಪ್ ಮತ್ತು ಏಂಜೆಲಿಕ್ ಕೆರ್ಬರ್ ಮೂರನೇ ಸುತ್ತಿನಲ್ಲಿ ಗೆದ್ದರು. ಮುಗುರುಜಾ ಮೂರು ಬಾರಿ ರನ್ನರ್ ಅಪ್ ಆಗಿರುವ ವಿಕ್ಟೋರಿಯಾ ಅಜರೆಂಕಾ ಅವರನ್ನು 6-4, 3-6, 6-2 ಸೆಟ್ ಗಳಿಂದ ಸೋಲಿಸಿದರು. ಈಗ ಅವರು ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಬೊರಾ ಕ್ರೀಸಿಕೋವಾ ಅವರನ್ನು ಎದುರಿಸಲಿದ್ದಾರೆ. ಐದು ವರ್ಷಗಳ ಹಿಂದೆ ಇಲ್ಲಿ ಪ್ರಶಸ್ತಿ ಗೆದ್ದಿದ್ದ ಕೆರ್ಬರ್ 2017 ರ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಅವರನ್ನು 5-7, 6-2, 6-3ರಿಂದ ಸೋಲಿಸಿದರು. ಹಾಲೆಪ್ ಎಲೆನಾ ರಿಬಕಿನಾ ಅವರನ್ನು 7-6, 4-6, 6-3ರಿಂದ ಸೋಲಿಸಿದರು.

ರಾಫೆಲ್ ನಡಾಲ್ ಉತ್ತರಾಧಿಕಾರಿ ಎಂದು ಹೇಳಲಾದ ಸ್ಪೇನ್ ನ 18 ವರ್ಷದ ಕಾರ್ಲೋಸ್ ಅಲ್ಕರೆಜ್, ಯುಎಸ್ ಓಪನ್​ನ ಮೂರನೇ ಸುತ್ತಿನಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು ಸೋಲಿಸುವ ಮೂಲಕ ತನ್ನ ಪ್ರತಿಭೆಯನ್ನು ತೋರಿದ್ದಾರೆ. ಅಲ್ಕರೆಜ್ ನಾಲ್ಕು ಗಂಟೆಗಳ ಪಂದ್ಯವನ್ನು 6-3, 4 -6, 7-6, 0-6, 7-6 ರಲ್ಲಿ ಗೆದ್ದರು. ಅವರು 1989 ರಿಂದ ಯುಎಸ್ ಓಪನ್ ನ ನಾಲ್ಕನೇ ಸುತ್ತನ್ನು ತಲುಪಿದ ಅತ್ಯಂತ ಕಿರಿಯ ಪುರುಷ ಆಟಗಾರರಾದರು. ಪೀಟ್ ಸಾಂಪ್ರಾಸ್ ಮತ್ತು ಮೈಕೆಲ್ ಚಾಂಗ್ 1989 ರಲ್ಲಿ ಈ ಸಾಧನೆ ಮಾಡಿದರು.

Follow us on

Related Stories

Most Read Stories

Click on your DTH Provider to Add TV9 Kannada