ನನಗೆ ಕಿಟ್ ಬ್ಯಾಗ್ ಪ್ಯಾಕ್ ಮಾಡಲು ಹೇಳುತ್ತಿದ್ದರು; ಅಮಿತಾಬ್ ಶೋನಲ್ಲಿ ಗಂಗೂಲಿಯ ದಾದಾಗಿರಿಯನ್ನು ನೆನೆದ ಸೆಹ್ವಾಗ್
ದಾದಾ ಪಂದ್ಯದ ನಂತರ ಪತ್ರಿಕಾಗೋಷ್ಠಿಗೆ ಹೋಗುತ್ತಿದ್ದಾಗ, ಕಿಟ್ ಬ್ಯಾಗ್ ಪ್ಯಾಕ್ ಮಾಡಲು ಸಹ ಆಟಗಾರರನ್ನು ಕೇಳುತ್ತಿದ್ದರು. ಏಕೆಂದರೆ ಅದು ಅವರಿಗೆ ಇಷ್ಟವಾಗದ ವಿಚಾರವಾಗಿತ್ತು ಎಂದಿದ್ದಾರೆ
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ದೇಶದ ಅತ್ಯಂತ ಆಕ್ರಮಣಕಾರಿ ಮತ್ತು ಯಶಸ್ವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಟೀಮ್ ಇಂಡಿಯಾಕ್ಕೆ ವಿದೇಶದಲ್ಲೂ ಗೆಲ್ಲುವ ಪರಿಪಾಠ ಕಲಿಸಿದರು. ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕ ಸ್ಟಾರ್ ಆಟಗಾರರು ಅವರನ್ನು ತಮ್ಮ ವೃತ್ತಿಜೀವನದ ಅತ್ಯುತ್ತಮ ನಾಯಕ ಎಂದು ಪರಿಗಣಿಸಿದ್ದಾರೆ.
ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಅವರು ಅಮಿತಾಬ್ ಬಚ್ಚನ್ ಅವರ ಶೋ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿ ಸೆಹ್ವಾಗ್ ತಮ್ಮ ಅಭಿಮಾನಿಗಳಿಗೆ ಗಂಗೂಲಿ ಬಗ್ಗೆ ಹೇಳಿದರು. ಇಬ್ಬರೂ ಆಟಗಾರರು ತಮ್ಮ ವೃತ್ತಿ ಜೀವನದ ಹಳೆಯ ದಿನಗಳನ್ನು ನೆನಪಿಸಿಕೊಂಡರು ಮತ್ತು ಅನೇಕ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡರು. ಚಾರಿಟಿಗಾಗಿ ಹಣ ಸಂಗ್ರಹಿಸಲು ಈ ಇಬ್ಬರೂ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಗಂಗೂಲಿ ಕಿಟ್ ಅನ್ನು ಸೆಹ್ವಾಗ್ ಪ್ಯಾಕ್ ಮಾಡುತ್ತಿದ್ದರು ವೀರೇಂದ್ರ ಸೆಹ್ವಾಗ್ ‘ಬಂಗಾಳದ ನವಾಬ್’ ಕಿಟ್ ಬ್ಯಾಗ್ ಅನ್ನು ಪ್ಯಾಕ್ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ ಎಂದು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ಗಂಗೂಲಿ ನನಗೆ ಮತ್ತು ತಂಡದ ಕಿರಿಯ ಆಟಗಾರರಿಗೆ ಕಿಟ್ ಬ್ಯಾಗ್ ಅನ್ನು ಪ್ಯಾಕ್ ಮಾಡಲು ಆಗಾಗ್ಗೆ ಕೇಳುತ್ತಿದ್ದರಂತೆ. ಈ ಬಗ್ಗೆ ಹೇಳಿದ ಸೆಹ್ವಾಗ್, ದಾದಾ ಪಂದ್ಯದ ನಂತರ ಪತ್ರಿಕಾಗೋಷ್ಠಿಗೆ ಹೋಗುತ್ತಿದ್ದಾಗ, ಕಿಟ್ ಬ್ಯಾಗ್ ಪ್ಯಾಕ್ ಮಾಡಲು ಸಹ ಆಟಗಾರರನ್ನು ಕೇಳುತ್ತಿದ್ದರು. ಏಕೆಂದರೆ ಅದು ಅವರಿಗೆ ಇಷ್ಟವಾಗದ ವಿಚಾರವಾಗಿತ್ತು ಎಂದಿದ್ದಾರೆ. ಆದರೆ ಸೆಹ್ವಾಗ್ ಆರೋಪವನ್ನು ದಾದಾ ಸಾರಾಸಗಟಾಗಿ ನಿರಾಕರಿಸಿದರು. ಸೆಹ್ವಾಗ್ ಸುಳ್ಳು ಹೇಳುತ್ತಿದ್ದಾರೆ ಎಂದು ಗಂಗೂಲಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದಾದಾ, ಸೆಹ್ವಾಗ್ ಸುಳ್ಳು ಹೇಳುತ್ತಿದ್ದಾರೆ. ಈ ಬಗ್ಗೆ ನೀವು ಜಹೀರ್ ಖಾನ್, ಆಶಿಶ್ ನೆಹ್ರಾ, ಯುವರಾಜ್ ಸಿಂಗ್ ಅಥವಾ ಹರ್ಭಜನ್ ಸಿಂಗ್ ಅವರನ್ನು ಕೇಳಬಹುದು ಎಂದರು.
ವೀರೇಂದ್ರ ಸೆಹ್ವಾಗ್ ಗಂಗೂಲಿಯನ್ನು ಹೊಗಳಿದರು ಇದರ ನಂತರ, ಸೆಹ್ವಾಗ್ ಸೌರವ್ ಗಂಗೂಲಿ ಅವರನ್ನು ಕಾರ್ಯಕ್ರಮದಲ್ಲಿಯೇ ಹೊಗಳಿದರು. ಅವರು ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅವರಿಗೆ, ‘ನನ್ನ ವೃತ್ತಿ ಜೀವನದಲ್ಲಿ ಸೌರವ್ ಗಂಗೂಲಿಗಿಂತ ಉತ್ತಮ ನಾಯಕನನ್ನು ನಾನು ನೋಡಿಲ್ಲ. ನಾನು ಅನೇಕ ನಾಯಕರ ಅಡಿಯಲ್ಲಿ ಆಡಿದ್ದೇನೆ ಆದರೆ ಗಂಗೂಲಿಗಿಂತ ಯಾರೂ ಉತ್ತಮವಾಗಿಲ್ಲ. ಗಂಗೂಲಿ ಟೀಮ್ ಇಂಡಿಯಾವನ್ನು ವಿದೇಶದಲ್ಲಿ ಗೆಲ್ಲುವಂತೆ ಮಾಡಿದರು. ಈ ಹಿಂದೆ ಟೀಮ್ ಇಂಡಿಯಾ ವಿದೇಶದಲ್ಲಿ ಸರಣಿ ಸೋತು ಬರುತ್ತಿತ್ತು. ಆದರೆ ದಾದಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಡ್ರಾ ಮಾಡಿತು ಎಂದು ಹೇಳಿಕೊಂಡರು.