Tokyo Paralympics: ಫೈನಲ್​ಗೆ ಲಗ್ಗೆಯಿಟ್ಟ ಪ್ರಮೋದ್ ಭಗತ್: ಭಾರತಕ್ಕೆ ಕನಿಷ್ಠ ಬೆಳ್ಳಿ ಖಚಿತ

pramod bhagat: ಪುರುಷರ ಸಿಂಗಲ್ಸ್ ಎಸ್ ಎಲ್ 3 ಸೆಮಿ ಫೈನಲ್ ಪಂದ್ಯದಲ್ಲಿ ಪ್ರಮೋದ ಭಗತ್ ಜಪಾನ್ ನ ಡೈಸುಕೆ ಫುಜಿಹಾರ ಅವರನ್ನು 21-11, 21-16 ರಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು.

Tokyo Paralympics: ಫೈನಲ್​ಗೆ ಲಗ್ಗೆಯಿಟ್ಟ ಪ್ರಮೋದ್ ಭಗತ್: ಭಾರತಕ್ಕೆ ಕನಿಷ್ಠ ಬೆಳ್ಳಿ ಖಚಿತ
pramod bhagat
Edited By:

Updated on: Sep 04, 2021 | 8:27 AM

ಟೋಕಿಯೊದಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ (Tokyo Paralympics) ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರಿದಿದೆ. ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಪುರುಷರ ಸಿಂಗಲ್ಸ್ ಎಸ್ ಎಲ್ 3 ಸೆಮಿ ಫೈನಲ್ ಪಂದ್ಯದಲ್ಲಿ ಪ್ರಮೋದ ಭಗತ್ ಜಪಾನ್ ನ ಡೈಸುಕೆ ಫುಜಿಹಾರ ಅವರನ್ನು 21-11, 21-16 ರಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು. ಬ್ಯಾಡ್ಮಿಂಟನ್ ನಲ್ಲಿ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಪಾದಾರ್ಪಣೆ ಮಾಡುತ್ತಿರುವುದರಿಂದ, ಭಗತ್ ಈಗಾಗಲೇ ಫೈನಲ್ ಹೆಜ್ಜೆ ಇಟ್ಟಿರುವುದರಿಂದ ದೇಶಕ್ಕೆ ಬೆಳ್ಳಿ ಪದಕದ ಭರವಸೆ ನೀಡಿದ್ದಾರೆ.

 

ಪಂದ್ಯದುದ್ದಕ್ಕೂ ಭಗತ್ ಫುಜಿಹಾರಾ ವಿರುದ್ಧ ಪ್ರಬಲ ಪ್ರದರ್ಶನ ನೀಡುವ ಮೂಲಕ ಮೊದಲ ಪಂದ್ಯವನ್ನು 21-11 ರ ಆರೋಗ್ಯಕರ ಅಂತರದಲ್ಲಿ ಭದ್ರಪಡಿಸಿದರು. ಎರಡನೇ ಪಂದ್ಯದಲ್ಲೂ ಪ್ರಮೋದ್ 21-16 ರಿಂದ ಗೆಲುವನ್ನು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದರು. ಈ ಮೂಲಕ 33 ವರ್ಷದ ಏಷ್ಯಾ ಚಾಂಪಿಯನ್ ಭಗತ್, ಕನಿಷ್ಠ ಬೆಳ್ಳಿ ಪದಕವನ್ನು ಖಾತ್ರಿಪಡಿಸಿದ್ದಾರೆ. ಇಂದು ನಡೆಯಲಿರುವ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದ್ದಾರೆ.

ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆ ಪದಾರ್ಪಣೆಯಾಗಿದೆ. ಇದರೊಂದಿಗೆ ಫೈನಲ್‌ಗೆ ತಲುಪಿದ ಭಾರತದ ಪ್ರಥಮ ಆಟಗಾರ ಎಂಬ ಹಿರಿಮೆಗೆ ಭಗತ್ ಭಾಜನರಾಗಿದ್ದಾರೆ. 5ರ ಹರೆಯದಲ್ಲೇ ಪೋಲಿಯೊದಿಂದಾಗಿ ಪ್ರಮೋದ್ ಅವರ ಎಡಗಾಲು ಊನವಾಗಿದೆ. ಆದರೆ ಅದನ್ನು ಮೀರಿ ನಾಲ್ಕು ವಿಶ್ವ ಚಾಂಪಿಯನ್‌ಶಿಪ್ ಸೇರಿದಂತೆ ಒಟ್ಟು 45 ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

Rohit Sharma: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ-ಉಮೇಶ್ ಯಾದವ್

India vs England: ಉಭಯ ತಂಡಗಳ ಸಮಬಲದ ಹೋರಾಟ: ಕುತೂಹಲದತ್ತ ನಾಲ್ಕನೇ ಟೆಸ್ಟ್ ಪಂದ್ಯ

(Tokyo Paralympics Pramod Bhagat storms into SL-3 para badminton final)