AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Paralympics: ಭಾರತ ಭರ್ಜರಿ ಬೇಟೆ: ಡಿಸ್ಕಸ್ ಥ್ರೋ ನಲ್ಲಿ ಬೆಳ್ಳಿ ಪದಕ ಗೆದ್ದ ಯೋಗೇಶ್​

Yogesh Kathuniya: ಪುರುಷರ ಡಿಸ್ಕಸ್ ಥ್ರೋನ ಎಫ್ 56 ವಿಭಾಗದಲ್ಲಿ ಯೋಗೇಶ್ ಕಥುನಿಯಾ ಬೆಳ್ಳೆ ಪದಕಕ್ಕೆ ಮುತ್ತಿಕ್ಕಿದ್ದಾರೆ. 44.38 ಮೀಟರ್​ ಎಸೆದು ಭಾರತಕ್ಕೆ 5ನೇ ಪದಕ ತಂದುಕೊಟ್ಟಿದ್ದಾರೆ.

Tokyo Paralympics: ಭಾರತ ಭರ್ಜರಿ ಬೇಟೆ: ಡಿಸ್ಕಸ್ ಥ್ರೋ ನಲ್ಲಿ ಬೆಳ್ಳಿ ಪದಕ ಗೆದ್ದ ಯೋಗೇಶ್​
yogesh kathuniya
TV9 Web
| Edited By: |

Updated on:Aug 30, 2021 | 8:47 AM

Share

ಟೋಕಿಯೊ ಪ್ಯಾರಾಲಿಂಪಿಕ್​ನಲ್ಲಿಂದು ಭಾರತಕ್ಕೆ ಶುಭ ಸೋಮವಾರ ಎಂದೇ ಹೇಳಬಹುದು. ದಿನದ ಆರಂಭದಲ್ಲೇ ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಅವನಿ ಲೆಕೇರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ ಸದ್ಯ ಪುರುಷರ ಡಿಸ್ಕಸ್ ಥ್ರೋನ ಎಫ್ 56 ವಿಭಾಗದಲ್ಲಿ ಯೋಗೇಶ್ ಕಥುನಿಯಾ ಬೆಳ್ಳೆ ಪದಕಕ್ಕೆ ಮುತ್ತಿಕ್ಕಿದ್ದಾರೆ. 44.38 ಮೀಟರ್​ ಎಸೆದು ಭಾರತಕ್ಕೆ 5ನೇ ಪದಕ ತಂದುಕೊಟ್ಟಿದ್ದಾರೆ.

24 ವರ್ಷದ ಯೋಗೀಶ್ ಕಥುನಿಯಾ ಈ ಹಿಂದೆ ದುಬೈನಲ್ಲಿ ವರ್ಲ್ಡ್ ಪ್ಯಾರಾ ಅಥ್ಲಿಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಕಂಚು ಗೆದ್ದಿದ್ದರು. ಇನ್ನು ಯೋಗೇಶ್ ಕಥುನಿಯಾ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೋಗೇಶ್ ಕಥುನಿಯಾ ಅವರದ್ದು ಔಟ್​ಸ್ಟ್ಯಾಂಡಿಂಗ್ ಪ್ರದರ್ಶನ.. ಅವರು ಚಿನ್ನ ಗೆದ್ದಿದ್ದು ಹೆಮ್ಮೆಯ ವಿಷಯ.. ಅವರ ಆಟ ಇತರರನ್ನೂ ಹುರಿದುಂಬಿಸುತ್ತದೆ. ಅವರ ಭವಿಷ್ಯ ಉತ್ತಮವಾಗಿರಲಿ ಎಂದಿದ್ದಾರೆ.

ನಿನ್ನೆಯಷ್ಟೆ ವಿನೋದ್ ಕುಮಾರ್ ಡಿಸ್ಕಸ್ ಥ್ರೋನ ಎಫ್ 52 ವಿಭಾಗದಲ್ಲಿ 19.98 ಮೀಟರ್ ಎಸೆದು ಏಷ್ಯನ್ ದಾಖಲೆ ಬರೆದರು. ವಿನೋದ್ ತನ್ನ ಆರು ಪ್ರಯತ್ನಗಳಲ್ಲಿ 17.46 ಮೀಟರ್ ಎಸೆತದಿಂದ ಆರಂಭಿಸಿದರು. ಇದರ ನಂತರ, ಅವರು 18.32 ಮೀಟರ್, 17.80 ಮೀಟರ್, 19.20 ಮೀಟರ್, 19.91 ಮೀಟರ್, 19.81 ಮೀಟರ್ ಎಸೆದರು. ಅವರ ಐದನೇ ಎಸೆತವನ್ನು 19.91 ಮೀಟರ್‌ಗಳ ಅತ್ಯುತ್ತಮ ಎಸೆತವೆಂದು ಪರಿಗಣಿಸಲಾಗಿದೆ. ಈ ಅಂತರದಿಂದ ವಿನೋದ್ ಕುಮಾರ್ ಏಷ್ಯನ್ ದಾಖಲೆ ಬರೆದರು.

ಇವರ ಬೆಳ್ಳಿಯ ಪದಕದೊಂದಿಗೆ ಭಾರತ ಈ ವರೆಗೆ 1 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಒಟ್ಟು 5 ಪದಕ ಗೆದ್ದಂತಾಗಿದೆ.

Published On - 8:33 am, Mon, 30 August 21

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ