ಪಾಕಿಸ್ತಾನಕ್ಕೆ ತನ್ನ ದೇಶದ ಹೆಸರನ್ನೂ ಬರೆಯೋಕಾಗದ ದುಃಸ್ಥಿತಿ ಬಂತಾ!

|

Updated on: Jun 30, 2020 | 5:12 PM

ಪಾಕಿಸ್ತಾನ ಕ್ರಿಕೆಟಿಗರು ಆಗಾಗ ಎಡವಟ್ಟುಗಳನ್ನ ಮಾಡಿಕೊಂಡು ಟ್ರೋಲ್​ಗೆ ಆಹಾರವಾಗೋದು ಕಾಮನ್ ಬಿಡಿ. ಆದ್ರೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದೆ. ಯಾವ ಮಟ್ಟಿಗೆ ಅಂದ್ರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತನ್ನ ದೇಶದ ಹೆಸರನ್ನು ಸರಿಯಾಗಿ ಬರೆಯೋಕು ಬರೋದಿಲ್ಲ ಅಂತಾ ಟ್ರೋಲ್​ಗೆ ಒಳಗಾಗ್ತಿದೆ. ಜುಲೈ 30 ರಿಂದ ಪಾಕಿಸ್ತಾನ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​​ಗೆ ಪ್ರಯಾಣ ಬೆಳೆಸಿದೆ. ಹಾಗೇ ಇಂಗ್ಲೆಂಡ್​ನಲ್ಲಿ ಪಾಕ್ ಕ್ರಿಕೆಟಿಗರು ಮೊದಲು 14 ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತೆ. ಈ ವಿಚಾರವನ್ನ ಹೇಳೋ ಭರದಲ್ಲಿ ಪಾಕಿಸ್ತಾನ […]

ಪಾಕಿಸ್ತಾನಕ್ಕೆ ತನ್ನ ದೇಶದ ಹೆಸರನ್ನೂ ಬರೆಯೋಕಾಗದ ದುಃಸ್ಥಿತಿ ಬಂತಾ!
Follow us on

ಪಾಕಿಸ್ತಾನ ಕ್ರಿಕೆಟಿಗರು ಆಗಾಗ ಎಡವಟ್ಟುಗಳನ್ನ ಮಾಡಿಕೊಂಡು ಟ್ರೋಲ್​ಗೆ ಆಹಾರವಾಗೋದು ಕಾಮನ್ ಬಿಡಿ. ಆದ್ರೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದೆ. ಯಾವ ಮಟ್ಟಿಗೆ ಅಂದ್ರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತನ್ನ ದೇಶದ ಹೆಸರನ್ನು ಸರಿಯಾಗಿ ಬರೆಯೋಕು ಬರೋದಿಲ್ಲ ಅಂತಾ ಟ್ರೋಲ್​ಗೆ ಒಳಗಾಗ್ತಿದೆ.

ಜುಲೈ 30 ರಿಂದ ಪಾಕಿಸ್ತಾನ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​​ಗೆ ಪ್ರಯಾಣ ಬೆಳೆಸಿದೆ. ಹಾಗೇ ಇಂಗ್ಲೆಂಡ್​ನಲ್ಲಿ ಪಾಕ್ ಕ್ರಿಕೆಟಿಗರು ಮೊದಲು 14 ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತೆ. ಈ ವಿಚಾರವನ್ನ ಹೇಳೋ ಭರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಡವಟ್ಟು ಮಾಡಿಕೊಂಡಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ಗೆ ತೆರಳೋ ಫೋಟೋವನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ಪಾಕಿಸ್ತಾನ ತಂಡ ಇಂಗ್ಲೆಂಡ್​ಗೆ ತೆರಳುತ್ತಿದೆ ಅನ್ನಬೇಕಿತ್ತು. ಆದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವಿಟರ್​ನಲ್ಲಿ ಪಾಕಿಸ್ತಾನ (Pakistan) ಅನ್ನೋ ಬದಲು, ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದೆ. ಪಾಕಿಯಾಟನ್ (Pakiatan) ತಂಡ ಇಂಗ್ಲೆಂಡ್​ಗೆ ತೆರಳುತ್ತಿದೆ ಅಂತಾ ಬರೆದುಕೊಂಡಿದೆ.

ಪಿಸಿಬಿ ಹೀಗೆ ಟ್ವೀಟ್ ಮಾಡುತ್ತಿದ್ದಂತೆ, ನೆಟ್ಟಿಗರು ಸರಿಯಾಗೇ ಟ್ರೋಲ್ ಮಾಡಿದ್ದಾರೆ. ನಿಮಗೆ ನಿಮ್ಮ ದೇಶದ ಹೆಸರು ಬರೆಯೋಕಾಗದಷ್ಟು ದುಸ್ಥಿತಿ ಬಂತಾ? ಅಂತಾ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ತಮಾಷೆ ವಿಷ್ಯ ಅಂದ್ರೆ, ಪಿಸಿಬಿಗೆ ಈ ಫೋಸ್ಟ್ ಮಾಡಿದ ಒಂದು ಗಂಟೆ ಬಳಿಕ ತನ್ನ ತಪ್ಪಿನ ಅರಿವಾಗಿದೆ. ಇದಕ್ಕೂ ನೆಟ್ಟಿಗರು ಪಿಸಿಬಿ ಕಾಲೆಳೆದಿದ್ದಾರೆ. ನಿಮ್ಮ ತಪ್ಪು ಗೊತ್ತಾಗೋಕೆ ಒಂದು ಗಂಟೆ ಬೇಕಾಯ್ತಾ ಅಂತಾ ಕಾಲೆಳೆದಿದ್ದಾರೆ.