ದೆಹಲಿ: ಯೋಗ ಗುರು ಬಾಬಾ ರಾಮ್ದೇವ್ರ ಪ್ರತಿಷ್ಠಿತ ಪತಂಜಲಿ ಆಯುರ್ವೇದ ಕಂಪನಿಯು ಪ್ರಧಾನಿ ಮೋದಿಯ ಆತ್ಮನಿರ್ಭರ ಭಾರತದ ಕರೆಗೆ ಓಗೊಟ್ಟಿದೆ.
ಹೌದು, ಪತಂಜಲಿ ಸಂಸ್ಥೆಯು ಇದೀಗ ಕ್ರಿಕೆಟ್ ಲೋಕದ ಬಹುನಿರೀಕ್ಷಿತ IPL ಪಂದ್ಯಾವಳಿಯ ಮುಖ್ಯ ಪ್ರಾಯೋಜಕತ್ವದ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವ ಯೋಚನೆಯಲ್ಲಿದೆ. ಪಂದ್ಯಾವಳಿಯ ಮುಖ್ಯ ಪ್ರಾಯೋಜಕನಾಗಿದ್ದ ಚೀನಾ ಮೂಲದ ವಿವೋ ಮೊಬೈಲ್ ಕಂಪನಿಯು ಪ್ರಾಯೋಜಕತ್ವದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ನಿರ್ಧಾರದಿಂದ ಸಂಸ್ಥೆಗೆ ಉತ್ತಮ ವೇದಿಕೆ ದೊರಕಲಿದ್ದು ತನ್ನ ಆಯುರ್ವೇದ ಉತ್ಪನ್ನಗಳು ಹಾಗೂ ಔಷಧಿಗಳನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ನೆರವಾಗಬಹುದು ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಖುದ್ದು ಸಂಸ್ಥೆಯ ವಕ್ತಾರ SK ತಿಜಾರವಾಲಾ ಹೇಳಿದ್ದಾರೆ.
ಪ್ರಧಾನಿ ಮೋದಿಯ Vocal for local ನಿಲುವಿಗೆ ಬೆಂಬಲ ಸೂಚಿಸುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ಪರಿಚಯವೂ ಆಗಲಿದೆ ಎಂದು ತಿಜಾರವಾಲಾ ಹೇಳಿದ್ದಾರೆ. ಆದರೆ, ಈ ಕುರಿತು ಸದ್ಯ ಪತಂಜಲಿ ಸಂಸ್ಥೆಯು ಅಂತಿಮ ನಿರ್ಧಾರವನ್ನ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
Published On - 9:01 pm, Mon, 10 August 20