PBKS vs KKR, IPL 2021 Match 21 Result: ಸುಲಭವಾಗಿ ಗೆದ್ದ ಕೋಲ್ಕತ್ತಾ; ಸೋಲಿನ ಸುಳಿಗೆ ಮತ್ತೆ ಸಿಲುಕಿದ ಪಂಜಾಬ್

| Updated By: ganapathi bhat

Updated on: Sep 05, 2021 | 10:45 PM

PBKS vs KKR Live Score in Kannada: ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 21ನೇ ಪಂದ್ಯದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿದೆ.

PBKS vs KKR, IPL 2021 Match 21 Result: ಸುಲಭವಾಗಿ ಗೆದ್ದ ಕೋಲ್ಕತ್ತಾ; ಸೋಲಿನ ಸುಳಿಗೆ ಮತ್ತೆ ಸಿಲುಕಿದ ಪಂಜಾಬ್
ಸುಲಭವಾಗಿ ಗೆದ್ದ ಕೋಲ್ಕತ್ತಾ

ಅಹಮದಾಬಾದ್: ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 21ನೇ ಪಂದ್ಯವು ಇಂದು ಅಹಮದಾಬಾದ್​ನಲ್ಲಿ ನಡೆಯಿತು. ಸೋಲಿನ ಸುಳಿಗೆ ಸಿಲುಕಿದ ಕೋಲ್ಕತ್ತಾ ಪಂಜಾಬ್ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ನಾಯಕನ ಆಟವಾಡಿದ ಮೋರ್ಗನ್ ಅಜೇಯ 47 ರನ್​ಗಳ ಆಟ ಆಡಿದರು. ಇದರ ಫಲವಾಗಿ ಕೋಲ್ಕತ್ತಾ 5 ವಿಕೆಟ್​ ಕಳೆದುಕೊಂಡು ಗೆಲುವಿನ ಕೆಕೆ ಹಾಕಿತು. ಈ ಮೂಲಕ ಪಾಯಿಂಟ್​ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಕೋಲ್ಕತ್ತಾ ಆರಂಭದಿಂದಲೂ ಪಂಜಾಬ್ ದಾಂಡಿಗರ ಮೇಲೆ ಸವಾರಿ ಮಾಡಿತು. ಪಂಜಾಬ್ ಪರ ಯಾವೊಬ್ಬ ಆಟಗಾರನೂ ಸಹ ನಿಂತು ಆಡುವ ತಾಳ್ಮೆ ತೋರಲಿಲ್ಲ. ಆರಂಭದಲ್ಲಿ ಮಾಯಾಂಕ್​ ಸಿಡಿಸಿದ 31 ರನ್​ಗಳನ್ನು ಬಿಟ್ಟರೆ, ಕೊನೆಯಲ್ಲಿ ಬಂದ ಜೋರ್ಡಾನ್ ಗಳಿಸಿದ 30 ರನ್​ಗಳೇ ತಂಡದ ಸಹಾಯಕ್ಕೆ ಬಂದವು. ಅಂತಿಮವಾಗಿ 9 ವಿಕೆಟ್ ಕಳೆದುಕೊಂಡ ಪಂಜಾಬ್ 124 ರನ್​ಗಳ ಅಲ್ಪ ಮೊತ್ತ ಕಲೆಹಾಕಿತು.

124 ರನ್​ಗಳ ಬೆನ್ನತ್ತಿದ ಕೋಲ್ಕತ್ತಾಕ್ಕೆ ಆರಂಭದಲ್ಲೇ ಪಂಜಾಬ್ ವೇಗಿಗಳು ಶಾಕ್​ ಮೇಲೆ ಶಾಕ್​ ನೀಡಿದರು. ಪ್ರಮುಖ 3 ವಿಕೆಟ್​ಗಳು ಬಹುಬೇಗನೇ ಉರುಳಿದವು. ಆದರೆ ನಂತರ ಜೊತೆಗೂಡಿದ ನಾಯಕ ಮೋರ್ಗನ್ ಹಾಗೂ ರಾಹುಲ್ ತ್ರಿಪಾಠಿ ಪಂಜಾಬ್​ ತಂಡದಿಂದ ಗೆಲುವನ್ನ ಕಿತ್ತುಕೊಳ್ಳಲು ಆರಂಭಿಸಿದರು. ತ್ರಿಪಾಠಿ 41 ರನ್​ಗಳಿಸಿ ಔಟಾದರೆ, ಮೋರ್ಗನ್ 47 ರನ್​ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

LIVE NEWS & UPDATES

The liveblog has ended.
  • 26 Apr 2021 11:06 PM (IST)

    ಸುಲಭವಾಗಿ ಗೆದ್ದ ಕೋಲ್ಕತ್ತಾ

    ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 21ನೇ ಪಂದ್ಯವು ಇಂದು ಅಹಮದಾಬಾದ್​ನಲ್ಲಿ ನಡೆಯಿತು. ಸೋಲಿನ ಸುಳಿಗೆ ಸಿಲುಕಿದ ಕೋಲ್ಕತ್ತಾ ಪಂಜಾಬ್ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

  • 26 Apr 2021 10:53 PM (IST)

    ರಸೆಲ್ ಔಟ್, ಕೆಕೆಆರ್ 98/5

    ಗೆಲುವಿನ ಸನಿಹದಲ್ಲಿ ಕೆಕೆಆರ್​ ಆಟಗಾರರು ಎಡವುದಿದ್ದಾರೆ. ಪಂದ್ಯವನ್ನು ಸುಲಭವಾಗಿ ಗೆಲ್ಲುವ ಅವಕಾಶವಿದ್ದರು ಕೋಲ್ಕತ್ತಾ ಆಟಗಾರರು ಇಲ್ಲದ ರನ್ ಕದಿಯಲು ಹೋಗಿ ರನ್​ಔಟ್​ ಆಗಿದ್ದಾರೆ.


  • 26 Apr 2021 10:49 PM (IST)

    ರಸೆಲ್ ಬೌಂಡರಿ

    14ನೇ ಓವರ್ ಎಸೆಯುತ್ತಿರುವ ಜೋರ್ಡಾನ್ ಅವರ 4ನೇ ಎಸೆತವನ್ನು ರಸೆಲ್ ಕೀಪರ್​ ಹಿಂದೆ ಬೌಂಡರಿ ಬಾರಿಸಿದ್ದಾರೆ. ಪಂಜಾಬ್ ನಾಯಕ ರಾಹುಲ್​ಗೆ ಕೆಕೆಆರ್​ ಆಟಗಾರರ ರನ್​ ವೇಗಕ್ಕೆ ಕಡಿವಾಣ ಹಾಕುವುದು ದೊಡ್ಡ ತಲೆನೋವಾಗಿದೆ.

  • 26 Apr 2021 10:34 PM (IST)

    ತ್ರಿಪಾಠಿ ಔಟ್

    ಮೋರ್ಗನ್ ಜೊತೆ ಗೆಲುವಿನ ಆಟ ಆಡುತ್ತಿದ್ದ ತ್ರಿಪಾಠಿ 41 ರನ್​ ಗಳಿಸಿ ಔಟಾಗಿದ್ದಾರೆ. ಆದರೆ ಗೆಲುವಿನ ಲೆಕ್ಕಾಚಾರ ಈಗ ಕೋಲ್ಕತ್ತಾ ಪರವಾಗಿದೆ. ನಾಯಕ ಮೋರ್ಗನ್ ಜೊತೆ ಈಗ ರಸೆಲ್ ಜೊತೆಯಾಗಿದ್ದಾರೆ

  • 26 Apr 2021 10:28 PM (IST)

    10 ಓವರ್ ಮುಕ್ತಾಯ, ಕೆಕೆಆರ್ 77/3

    ಮೋರ್ಗನ್ ಹಾಗೂ ರಾಹುಲ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ. ಈ ಜೋಡಿ 50 ರನ್​ಗಳ ಜೊತೆಯಾಟ ಸಹ ಆಡಿದೆ. ಈಗಾಗಲೇ ಗೆಲುವಿನ ಸನಿಹಕ್ಕೆ ತಂಡ ಬಂದು ನಿಂತಿದೆ. ವಿಕೆಟ್​ ತೆಗೆಯದೆ ಹೋದರೆ ಪಂಜಾಬ್​​ಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.

  • 26 Apr 2021 10:16 PM (IST)

    8ನೇ ಓವರ್ ಮುಕ್ತಾಯ, ಕೆಕೆಆರ್ 59/3

    ಆರಂಭದಲ್ಲಿ ವಿಕೆಟ್​ ಕಳೆದುಕೊಂಡಿದ್ದರು ಸಹ ಕೆಕೆಆರ್​ ನಂತರದಲ್ಲಿ ಉತ್ತಮ ಬ್ಯಾಟಿಂಗ್ ಆಡುತ್ತಿದೆ. ನಾಯಕ ಮೋರ್ಗನ್​ ಜೊತೆಗೂಡಿರುವ ತ್ರಿಪಾಠಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ತಂಡವನ್ನು 50 ರನ್​ಗಳ ಗಡಿ ಸಹ ದಾಟಿಸಿದೆ.

  • 26 Apr 2021 10:02 PM (IST)

    ತ್ರಿಪಾಠಿ ಬ್ಯಾಟಿಂಗ್ ಅಬ್ಬರ

    ಪ್ರಮುಖ 3 ವಿಕೆಟ್​ ಕಳೆದುಕೊಂಡಿದ್ದರು ಸಹ ರಾಹುಲ್ ತ್ರಿಪಾಠಿ ತಮ್ಮ ನೈಜ ಆಟವನ್ನು ಮುಂದುವರೆಸಿದ್ದಾರೆ. ಹರ್ಷ್​ದೀಪ್​ ಓವರ್​ನಲ್ಲಿ ರಾಹುಲ್​ ಬೌಂಡರಿ ಬಾರಿಸಿದರು. ಅದ್ಭುತ ಕ್ಯಾಚ್ ಹಿಡಿದಿದ್ದ ಬಿಷ್ಣೋಯಿ, ಕಳಪೆ ಫಿಲ್ಡಿಂಗ್​ನಿಂದಾಗಿ ಬೌಂಡರಿ ಗಳಿಸಿದರು.

  • 26 Apr 2021 09:54 PM (IST)

    ಸಿಕ್ಸ್​ ಮೂಲಕ ಖಾತೆ ತೆರೆದ ಮೋರ್ಗನ್

    ಪ್ರಮುಖ 3 ವಿಕೆಟ್​ ಕಳೆದುಕೊಂಡ ಬಳಿಕ ಬ್ಯಾಟಿಂಗ್​ಗೆ ಇಳಿದಿರುವ ನಾಯಕ ಮೋರ್ಗನ್​ ತಮ್ಮ ಖಾತೆಯನ್ನು ರನ್ ಮೂಲಕ ತೆರೆದಿದ್ದಾರೆ. ಶಮಿ ಎಸೆತವನ್ನು ಮೋರ್ಗನ್​ ಸಿಕ್ಸರ್​ಗೆ ಅಟ್ಟಿದರು.

  • 26 Apr 2021 09:50 PM (IST)

    3ನೇ ವಿಕೆಟ್ ಪತನ

    ಕೋಲ್ಕತ್ತಾ ಕತೆ ಸಹ ಪಂಜಾಬ್ ಹೊರತಾಗಿಲ್ಲ. ಆರಂಭದಿಂದಲೇ ಕೋಲ್ಕತ್ತಾ ಸಹ ವಿಕೆಟ್​ ಕಳೆದುಕೊಳ್ಳಲು ಆರಂಭಿಸಿದೆ. ಈಗಾಗಲೇ ರಾಣಾ, ಗಿಲ್ ಕಳೆದುಕೊಂಡಿದ್ದ ತಂಡಕ್ಕೆ ಮತ್ತೊಮ್ಮೆ ಆಘಾತವಾಗಿದೆ. ಯಾವುದೇ ರನ್ ಗಳಿಸದೆ ನರೈನ್ ವಿಕೆಟ್​ ಒಪ್ಪಿಸಿದ್ದಾರೆ. ರವಿ ಬಿಷ್ಣೋಯಿ ಅದ್ಭುತ ಕ್ಯಾಚ್​ ಹಿಡಿದು ನರೈನ್​ ಬಲಿಗೆ ಕಾರಣರಾದರು.

  • 26 Apr 2021 09:42 PM (IST)

    ಗಿಲ್ ಔಟ್

    ಪಂಜಾಬ್ ಬೌಲರ್​ಗಳು ಕರಾರುವಕ್ಕಾದ ಬೌಲಿಂಗ್ ಆರಂಭಿಸಿದ್ದಾರೆ. ಮೊದಲ ಓವರ್​ನಲ್ಲಿ ರಾಣಾ ಶೂನ್ಯಕ್ಕೆ ಔಟಾದರೆ, 2ನೇ ಓವರ್​ನಲ್ಲಿ ಗಿಲ್​ ಅವರನ್ನು ಶಮಿ ಕ್ಲಿನ್​ ಎಲ್​ಬಿಡ್ಬ್ಲ್ಯೂ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ಕೆಕೆಆರ್​ನ 2ನೇ ವಿಕೆಟ್​ ಉರುಳಿದೆ.

  • 26 Apr 2021 09:35 PM (IST)

    ರಾಣಾ ಶೂನ್ಯಕ್ಕೆ ಔಟ್, ಕೋಲ್ಕತ್ತಾ 5/1

    ಬ್ಯಾಟಿಂಗ್ ಆರಂಭಿಸಿರುವ ಕೋಲ್ಕತ್ತಾಗೆ ಆಘಾತ ಎದುರಾಗಿದೆ. ಹೆನ್ರಿಕ್ಸ್​ ಎಸೆದ ಮೊದಲ ಓವರ್​ನಲ್ಲಿ ಖಾತೆ ತೆರೆಯದೆ ಕೋಲ್ಕತ್ತಾದ ಆರಂಭಿಕ ಆಟಗಾರ ರಾಣಾ ಔಟಾಗಿದ್ದಾರೆ.

  • 26 Apr 2021 09:33 PM (IST)

    ಬ್ಯಾಟಿಂಗ್ ಆರಂಭಿಸಿದ ಕೆಕೆಆರ್

    ಪಂಜಾಬ್ ನೀಡಿರುವ ಅಲ್ಪಮೊತ್ತವನ್ನು ಬೆನ್ನಟ್ಟಿರುವ ಕೆಕೆಆರ್​ ತಂಡದ ಗಿಲ್ ಹಾಗೂ ರಾಣಾ ಉತ್ತಮ ಆರಂಭ ಪಡೆದಿದ್ದಾರೆ. ತಾವು ಎದುರಿಸಿದ ಮೊದಲ ಎಸೆತವನ್ನೇ ಗಿಲ್ ಬೌಂಡರಿಗಟ್ಟಿದ್ದಾರೆ.

  • 26 Apr 2021 09:17 PM (IST)

    ಪಂಜಾಬ್ 124 ರನ್​

    ತನ್ನ ಇನ್ನಿಂಗ್ಸ್​ನ ಎಲ್ಲಾ ಓವರ್​ಗಳನ್ನು ಮುಗಿಸಿರುವ ಪಂಜಾಬ್ ಕೋಲ್ಕತ್ತಾಕ್ಕೆ ಗೆಲ್ಲಲು 124 ರನ್​ಗಳ ಗುರಿ ನೀಡಿದೆ. ಅಂತಿಮ ಓವರ್​ಗಳಲ್ಲಿ ಜೋರ್ಡಾನ್ ಅವರ ಪ್ರಮುಖ 2 ಸಿಕ್ಸರ್​ಗಳ ನೆರವಿನಿಂದಾಗಿ ಪಂಜಾಬ್ ಶತಕ ಪೂರ್ಣಗೊಳಿಸಲು ಕಾರಣವಾಯ್ತು.

  • 26 Apr 2021 09:12 PM (IST)

    ಜೋರ್ಡಾನ್ ಸಿಕ್ಸರ್

    ಅಂತಿಮ ಓವರ್​ಗಳಲ್ಲಿ ಪಂಜಾಬ್​ ತಂಡ ಕೊಂಚ ಲಯಕ್ಕೆ ಮರಳಿದೆ. ತಂಡದ ಆಲ್​ರೌಂಡರ್​ ಜೋರ್ಡಾನ್ ಅಂತಿಮ ಓವರ್​ಗಳಲ್ಲಿ ಸಿಕ್ಸರ್​ ಸಿಡಿಸಲು ಆರಂಭಿಸಿದ್ದಾರೆ. ಅಂತಿಮ ಓವರ್​ ಬ್ಯಾಟಿಂಗ್ ಮಾಡುತ್ತಿರುವ ಜೋರ್ಡಾನ್ ಮೊದಲ ಎಸೆತದಲ್ಲೆ ಸಿಕ್ಸರ್ ಸಿಡಿಸಿದ್ದಾರೆ.

  • 26 Apr 2021 09:08 PM (IST)

    ಶತಕ ಪೂರೈಸಿದ ಪಂಜಾಬ್

    8 ವಿಕೆಟ್​ ಕಳೆದುಕೊಂಡು ಅಲ್ಪ ರನ್​ಗಳಿಗೆ ಸೊರಗುತ್ತಿರುವ ಪಂಜಾಬ್ 100 ರನ್​ ಪೂರ್ಣಗೊಳಿಸಿದೆ. ಆದರೆ ಈಗಾಗಲೆ ಪ್ರಮುಖ ವಿಕೆಟ್​ಗಳು ಉರುಳಿದ್ದು, 19ನೇ ಓವರ್​ ಚಾಲ್ತಿಯಲ್ಲಿದೆ.

  • 26 Apr 2021 09:01 PM (IST)

    ಶಾರುಖ್ ಔಟ್, ಪಂಜಾಬ್ 96/7

    ಒಂದು ಭರ್ಜರಿ ಸಿಕ್ಸರ್ ಸಿಡಿಸಿ ತಂಡಕ್ಕೆ ರನ್ ಹೆಚ್ಚಿಸುತ್ತಿದ್ದ ಶಾರುಖ್ ಖಾನ್, ಕನ್ನಡಿಗ ಪ್ರಸಿದ್ದ್ ಕೃಷ್ಣ ಬೌಲಿಂಗ್​ನಲ್ಲಿ ಬಿಗ್​ ಶಾಟ್​ಗೆ ಯತ್ನಿಸಿ ವಿಕೆಟ್ ಕೈಚೆಲ್ಲಿದ್ದಾರೆ.ವಿಕೆಟ್​ಗೂ ಮುನ್ನ ಶಾರುಖ್ 13 ರನ್​ ಗಳಿಸಿದ್ದರು.

  • 26 Apr 2021 08:47 PM (IST)

    ಪೂರನ್ ಔಟ್, ಪಂಜಾಬ್ 80/6

    ಆರಂಭದಿಂದಲೂ ಪೆವಿಲಿಯನ್ ಪರೆಡ್​ ನಡೆಸುತ್ತಿರುವ ಪಂಜಾಬ್ ದಾಂಡಿಗರು ತಾವು ಬ್ಯಾಟಿಂಗ್​ಗೆ ಬಂದಷ್ಟೇ ವೇಗವಾಗಿ ಕ್ರಿಸ್​ಗೆ ಮರಳುತ್ತಿದ್ದಾರೆ. ಪಂಜಾಬ್​ ತಂಡದ ಬ್ಯಾಟಿಂಗ್​ ಆಧಾರವಾಗಿದ್ದ ಪೂರನ್​ ವರುಣ್​ ಬೌಲಿಂಗ್​ನಲ್ಲಿ ಕ್ಲಿನ್​ ಬೌಲ್ಡ್​ ಆಗಿದ್ದಾರೆ. ಔಟಾಗುವುದಕ್ಕೂ ಮುನ್ನ ಪೂರನ್ 19 ರನ್ ಗಳಿಸಿದ್ದರು.

  • 26 Apr 2021 08:41 PM (IST)

    5ನೇ ವಿಕೆಟ್ ಪತನ, ಪಂಜಾಬ್ 77/5

    ತಂಡ ಕೊಂಚ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಪಂಜಾಬ್​ಗೆ ನರೈನ್ ಶಾಕ್​ ನೀಡಿದ್ದಾರೆ. ಪೂರನ್ ಜೊತೆಯಾಗಿದ್ದ ಹೆನ್ರಿಕ್ಸ್​ ಅವರನ್ನು ನರೈನ್​ ತಮ್ಮ ಗೂಗ್ಲಿ ಇಂದ ಕ್ಲೀನ್ ಬೌಲ್ಡ್​ ಮಾಡಿದ್ದಾರೆ.

  • 26 Apr 2021 08:38 PM (IST)

    ಪೂರನ್ ಸಿಕ್ಸರ್

    4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿರುವ ಪಂಜಾಬ್​ಗೆ ಪೂರನ್ ಆಸರೆಯಾಗಿದ್ದಾರೆ. 13ನೇ ಓವರ್ ಎಸೆಯಲು ಬಂದ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ತಂಡದ ರನ್ ಹೆಚ್ಚಿಸಿದ್ದಾರೆ.

  • 26 Apr 2021 08:33 PM (IST)

    ಮಾಯಾಂಕ್ ಔಟ್, ಪಂಜಾಬ್ 60/4

    31 ರನ್ ಗಳಿಸಿದ್ದ ಕನ್ನಡಿಗ ಮಾಯಾಂಕ್​ ಪಂಜಾಬ್​ ತಂಡದ ಬ್ಯಾಟಿಂಗ್ ಆದಾರವಾಗಿದ್ದರು. ಆದರೆ ರನ್​ ಕೊರೆತಯಿದ್ದುದ್ದರಿಂದ ರನ್​ ವೇಗ ಹೆಚ್ಚಿಸಲು ಹೋದ ಮಾಯಾಂಕ್ ನರೈನ್ ಬೌಲಿಂಗ್​ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿ ಸೀದಾ ರಾಹುಲ್ ತ್ರಿಪಾಠಿ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 26 Apr 2021 08:25 PM (IST)

    ಕೆಕೆಆರ್ ಮೇಲುಗೈ

    ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿರುವ ಕೆಕೆಆರ್​, ಪಂಜಾಬ್​ ಬ್ಯಾಟಿಂಗ್​ ಪಡೆಯ ಮೇಲೆ ಪ್ರಬಲ ದಾಳಿ ನಡೆಸುತ್ತಿದ್ದಾರೆ. ಈಗಾಗಲೇ 10 ಓವರ್ ಮುಗಿಸಿರುವ ಕೋಲ್ಕತ್ತಾ ಕೇವಲ 55 ರನ್ ನೀಡಿದೆ. ಮಾಯಾಂಕ್ ಹಾಗೂ ಪೂರನ್ ಬ್ಯಾಟಿಂಗ್​ನಲ್ಲಿದ್ದಾರೆ.

  • 26 Apr 2021 08:12 PM (IST)

    3ನೇ ವಿಕೆಟ್ ಪತನ

    ಪಂಜಾಬ್ ಪಾಳಯದ ದಾಂಡಿಗರು ಪೆವಿಲಿಯನ್ ಪರೆಡ್​ ಆರಂಭಿಸಿದ್ದಾರೆ. ಗೇಲ್​ ಶೂನ್ಯಕ್ಕೆ ಔಟಾದ ಬಳಿಕ ಮೈದಾನಕ್ಕೆ ಬಂದಿದ್ದ ದೀಪಕ್ ಹೂಡ ಕೂಡ ಗೇಲ್ ದಾರಿ ಹಿಡಿದಿದ್ದಾರೆ. ಕೇವಲ ಒಂದು ರನ್ ಗಳಿಸಿದ್ದ ಹೂಡ ಕನ್ನಡಿಗ ಪ್ರಸಿದ್ದ್ ಕೃಷ್ಣ ಬೌಲಿಂಗ್​ನಲ್ಲಿ ಮೋರ್ಗನ್​ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 26 Apr 2021 08:05 PM (IST)

    ಪಂಜಾಬ್​ಗೆ 2ನೇ ಆಘಾತ ಗೇಲ್ ಔಟ್, 39/2

    ನಾಯಕ ರಾಹುಲ್ ವಿಕೆಟ್​ ಬಳಿಕ ಬ್ಯಾಟಿಂಗ್​ಗೆ ಬಂದಿದ್ದ ಗೇಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಮಾವಿ ಎಸೆದ ಎಸೆತವನ್ನು ಡಿಫೆಂಡ್ ಮಾಡಲು ಹೋದ ಗೇಲ್ ಕೀಪರ್​ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 26 Apr 2021 08:01 PM (IST)

    ಪಂಜಾಬ್ ಮೊದಲ ವಿಕೆಟ್ ಪತನ

    ಉತ್ತಮವಾಗಿ ಆಡುತ್ತಿದ್ದ ರಾಹುಲ್ ಪ್ಯಾಟ್ ಕಮಿನ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕಮಿನ್ಸ್ ಎಸೆತವನ್ನು ಬಾರಿಸಲು ಯತ್ನಿಸಿದ ರಾಹುಲ್ ನರೈನ್​ಗೆ ಕ್ಯಾಚಿತ್ತು ಔಟಾಗಿದ್ದಾರೆ. ಔಟಾಗುವುದಕ್ಕೂ ಮುನ್ನ ರಾಹುಲ್ 19 ರನ್ ಗಳಿಸಿದ್ದರು.

  • 26 Apr 2021 07:50 PM (IST)

    ಪಂಜಾಬ್ ಉತ್ತಮ ಆರಂಭ

    ಇನ್ನಿಂಗ್ಸ್ ಆರಂಭಿಸಿರುವ ರಾಹುಲ್ ಹಾಗೂ ಮಾಯಾಂಕ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ. ಈಗಾಗಲೇ 4 ಓವರ್ ಆಡಿರುವ ಈ ಜೋಡಿ 27 ರನ್ ಗಳಿಸಿದೆ. ರಾಹುಲ್, ಮಾಯಾಂಕ್​ಗೆ ಉತ್ತಮ ಸಾಥ್​ ನೀಡುತ್ತಿದ್ದಾರೆ. ಮಾಯಾಂಕ್ 13 ರನ್​ ಗಳಿಸಿದ್ದರೆ ರಾಹುಲ್ 12 ರನ್ ಗಳಿಸಿದ್ದಾರೆ.

  • 26 Apr 2021 07:39 PM (IST)

    ಮಾಯಾಂಕ್ ಸಿಕ್ಸರ್, ಪಂಜಾಬ್ 10/0

    ಇನ್ನಿಂಗ್ಸ್​ನ ಮೊದಲ ಸಿಕ್ಸರ್​ ಮಾಯಾಂಕ್ ಅವರ ಬ್ಯಾಟ್​ನಿಂದ ಬಂದಿದೆ. 2ನೇ ಓವರ್​ ಎಸೆದ ಕಮಿನ್ಸ್ ಅವರ ಮೊದಲ ಎಸೆತವನ್ನು ಕೀಪರ್​ ತಲೆ ಮೇಲೆ ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ತಂಡಕ್ಕೆ ಮೊದಲ ಸಿಕ್ಸರ್ ತಂದುಕೊಟ್ಟಿದ್ದಾರೆ.

  • 26 Apr 2021 07:31 PM (IST)

    ಬೌಲಿಂಗ್ ಆರಂಭಿಸಿದ ಕೋಲ್ಕತ್ತಾ

    ಟಾಸ್ ಗೆದ್ದ ಕೋಲ್ಕತ್ತಾ ಬೌಲಿಂಗ್ ಆಯ್ದುಕೊಂಡಿದ್ದು, ಇದರ ಫಲವಾಗಿ ವೇಗದ ಬೌಲರ್​ ಶಿವಂ ಮಾವಿ ಬೌಲಿಂಗ್ ಆರಂಬಿಸಿದ್ದಾರೆ. ಪಂಜಾಬ್ ಪರ ರಾಹುಲ್ ಹಾಗೂ ಮಾಯಾಂಕ್ ಬ್ಯಾಟಿಂಗ್ ಆರಂಭಿಸಿದ್ದಾರೆ.

  • 26 Apr 2021 07:20 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್

    ನಿತೀಶ್ ರಾಣಾ, ಶುಬ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಸುನಿಲ್ ನರೈನ್, ಇಯೊನ್ ಮೋರ್ಗಾನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಪ್ರಸಾದ್ ಕೃಷ್ಣ, ವರುಣ್ ಚಕ್ರವರ್ತಿ

  • 26 Apr 2021 07:15 PM (IST)

    ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

    ಕೆ.ಎಲ್. ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಮೊಯಿಸಸ್ ಹೆನ್ರಿಕ್ಸ್, ಶಾರುಖ್ ಖಾನ್, ಕ್ರಿಸ್ ಜೋರ್ಡಾನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್

  • 26 Apr 2021 07:07 PM (IST)

    ನಿಮ್ಮ ಕರ್ತವ್ಯ ಮರೆಯಬೇಡಿ!

    ಕೊರೊನಾ ವಿರುದ್ಧ ಗೆಲ್ಲಲು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಲಸಿಕೆ ಪಡೆದುಕೊಳ್ಳಿ.

  • 26 Apr 2021 07:05 PM (IST)

    ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್

    ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - 11:06 pm, Mon, 26 April 21

Follow us on