ದೆಹಲಿ ಸೆಪ್ಟೆಂಬರ್ 28: ಕೆಲವು ವಿಷಯಗಳು ಎಂದಿಗೂ ಬದಲಾಗುವುದಿಲ್ಲ. ಬುಧವಾರ ಹೈದರಾಬಾದ್‌ನಲ್ಲಿ (Hyderabad) ಪಾಕಿಸ್ತಾನ ಕ್ರಿಕೆಟ್ (Pakistan Cricket) ತಂಡಕ್ಕೆ ಸಿಕ್ಕ ಅದ್ದೂರಿ ಸ್ವಾಗತ ಸಿಕ್ಕಿದ್ದರೂ ಪಿಸಿಬಿ ಅಧ್ಯಕ್ಷರು ಭಾರತದ ವಿರುದ್ಧ ದ್ವೇಷದ ಮಾತುಗಳನ್ನಾಡಿದ್ದಾರೆ. 2016ರ ನಂತರ ಭಾರತಕ್ಕೆ ಪಾಕ್ (Pakistan) ಆಟಗಾರರ ಮೊದಲ ಭೇಟಿಯಲ್ಲಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ಭಾರತೀಯ ಅಭಿಮಾನಿಗಳು ಪಾಕಿಸ್ತಾನಿ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಿ ಪ್ರೀತಿಯ ಮಳೆಗರೆದರು.
ಪಾಕಿಸ್ತಾನಿ ತಂಡವು ಭಾರತಕ್ಕೆ ಆಗಮಿಸಿದ ಒಂದು ದಿನದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಝಾಕಾ ಅಶ್ರಫ್ ನೇರ ಪ್ರಸಾರದಲ್ಲಿ ಭಾರತವನ್ನು “ದುಷ್ಮನ್ ಮುಲ್ಕ್” ಎಂದು ಘೋಷಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ಅಶ್ರಫ್ ಅವರು “ದುಷ್ಮನ್ ಮುಲ್ಕ್” (ಶತ್ರು ದೇಶ) ನಲ್ಲಿ ಆಡಲು ಪಾಕಿಸ್ತಾನಿ ಆಟಗಾರರಿಗೆ ಅಭೂತಪೂರ್ವ ಹಣವನ್ನು ನೀಡಿದ್ದಕ್ಕಾಗಿ ದೇಶದ ಕ್ರಿಕೆಟ್ ಮಂಡಳಿಯ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.
PCB Chairman declares India “Dushman Mulk”, says Pak cricketers have been paid unprecedented money to play in enemy country.
What are Indians doing? Inzi bhai, Shahid Bhai, Shoaib bhai, pls give interview. We are one, same food, lingo, culture, cricket..pic.twitter.com/PPnysbWrtN
— Pakistan Untold (@pakistan_untold) September 28, 2023
ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ಬುಧವಾರ ರಾತ್ರಿ ಭಾರಿ ಸಂಭ್ರಮದಿಂದ ಹೈದರಾಬಾದ್ ತಲುಪಿದ್ದು ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ,ಅಭಿಮಾನಿಗಳ ಸಂಭ್ರಮವನ್ನು ವೀಕ್ಷಿಸಿದ ಪಾಕಿಸ್ತಾನಿ ಆಟಗಾರರು ಖುಷಿಪಟ್ಟರು. ಪೇಸ್ ಬೌಲರ್ ಶಾಹೀನ್ ಶಾ ಆಫ್ರಿದಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದು ಇಲ್ಲಿಯವರೆಗೆ ಸಿಕ್ಕಿದ ಉತ್ತಮ ಸ್ವಾಗತ ಎಂದು ಬರೆದಿದ್ದಾರೆ.
ಇದನ್ನೂ ಓದಿ: ODI World Cup 2023: ಅತಿಥಿ ದೇವೋ ಭವ: ಪಾಕಿಸ್ತಾನ ಕ್ರಿಕೆಟಿಗರಿಗೆ ನಮ್ಮ ಔತಣ ಹೇಗಿದೆ ನೋಡಿ..
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತನ್ನ ಎರಡು ಅಭ್ಯಾಸ ಪಂದ್ಯಗಳಲ್ಲಿ ನ್ಯೂಜಿಲೆಂಡ್ (ಸೆಪ್ಟೆಂಬರ್ 29) ಮತ್ತು ಆಸ್ಟ್ರೇಲಿಯಾ (ಅಕ್ಟೋಬರ್ 3) ವಿರುದ್ಧ ಸೆಣಸಲಿದೆ. ಶುಕ್ರವಾರ, ಅಕ್ಟೋಬರ್ 6 ರಂದು ಹೈದರಾಬಾದ್‌ನಲ್ಲಿ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲ್ಯಾಂಡ್ಸ್ ವಿರುದ್ಧ ಪಾಕಿಸ್ತಾನ ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಬಾಬರ್ ಅಜಮ್ ತಂಡವು ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ಭಾರತವನ್ನು ಎದುರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ