ODI World Cup 2023: ಅತಿಥಿ ದೇವೋ ಭವ: ಪಾಕಿಸ್ತಾನ ಕ್ರಿಕೆಟಿಗರಿಗೆ ನಮ್ಮ ಔತಣ ಹೇಗಿದೆ ನೋಡಿ..
Pakistan Team's food menu in Hyderabad: ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಪಾಕಿಸ್ತಾನದ ಡಯಟ್ ಚಾರ್ಟ್ ಮಟನ್ ಕರಿ, ಬಟರ್ ಚಿಕನ್, ಗ್ರಿಲ್ಡ್ ಮಟನ್ ಚಾಪ್ಸ್ ಮತ್ತು ಗ್ರಿಲ್ಡ್ ಫಿಶ್ ಇತರ ಭಕ್ಷ್ಯಗಳನ್ನು ಒಳಗೊಂಡಿದೆ. 2023 ರ ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಬರುವ ಎಲ್ಲಾ ಹತ್ತು ತಂಡಗಳಿಗೆ ಗೋಮಾಂಸ ಲಭ್ಯವಿರುವುದಿಲ್ಲ. ಆದ್ದರಿಂದ ಪಾಕಿಸ್ತಾನ ತಂಡವು ತಮ್ಮ ಪ್ರೋಟೀನ್ ಅಗತ್ಯಗಳಿಗಾಗಿ ಮಟನ್, ಚಿಕನ್ ಮತ್ತು ಮೀನುಗಳನ್ನು ಅವಲಂಬಿಸಬೇಕಾಗುತ್ತದೆ.
2023ರ ಏಕದಿನ ವಿಶ್ವಕಪ್‌ಗಾಗಿ (World Cup 2023) ಭಾರತಕ್ಕೆ ಬಂದಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ (Pakistan Cricket Team) ನಿರೀಕ್ಷೆಗೂ ಮೀರಿದ ಸತ್ಕಾರ ಸಿಗುತ್ತಿದೆ. ವೀಸಾ ವಿಳಂಬದಿಂದಾದ ಗೊಂದಲಗಳನ್ನು ಪರಿಹರಿಸಿಕೊಂಡು ಭಾರತದ ಹೈದರಾಬಾದ್‌ಗೆ ಕಾಲಿಟ್ಟಿದ್ದ ಬಾಬರ್ ಪಡೆಗೆ ಭಾರತದ ಸ್ವಾಗತ ರೋಮಾಂಚನವನ್ನುಂಟು ಮಾಡಿದೆ. ಸ್ವತಃ ಈ ವಿಚಾರವನ್ನು ಪಾಕ್ ಆಟಗಾರರೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದುಬೈನಿಂದ ಬಂದ ಪಾಕ್ ಆಟಗಾರರಿಗೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಿದರು. ಬಳಿಕ ನಗರ ಪೊಲೀಸರ ಬಿಗಿ ಭದ್ರತೆಯ ನಡುವೆ ಪಾಕಿಸ್ತಾನಿ ತಂಡವನ್ನು ವಿಮಾನ ನಿಲ್ದಾಣದಿಂದ ಬಂಜಾರಾ ಹಿಲ್ಸ್‌ನ ಪಾರ್ಕ್ ಹಯಾತ್ ಹೋಟೆಲ್‌ಗೆ ಸ್ಥಳಾಂತರಿಸಲಾಗಿದ್ದು, 15 ದಿನಗಳವರೆಗೆ ಪಾಕ್ ಆಟಗಾರರು ಹೈದರಾಬಾದ್‌ನಲ್ಲೇ ತಂಗಲ್ಲಿದ್ದಾರೆ. ಇನ್ನು 7 ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಪಾಕ್ ಆಟಗಾರರಿಗೆ ಭೂರಿ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿದೆ.
ತರಹೇವಾರಿ ಭೋಜನದ ವ್ಯವಸ್ಥೆ
ವಾಸ್ತವವಾಗಿ ಸೆಪ್ಟೆಂಬರ್ 29 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ತನ್ನ ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. ಅದಕ್ಕೂ ಮುನ್ನ ತಂಡದ ಆಟಗಾರರು ಇಂದು ಮೈದಾನದಲ್ಲಿ ತಮ್ಮ ತರಬೇತಿ ಶಿಬಿರವನ್ನು ನಡೆಸಿದರು. ಇನ್ನು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಪಾರ್ಕ್ ಹಯಾತ್ ಹೋಟೆಲ್‌ನಲ್ಲಿ ತಂಗಿರುವ ಪಾಕ್ ಆಟಗಾರರಿಗೆ ತರಹೇವಾರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಹೈದರಾಬಾದ್ ಬಿರಿಯಾನಿ, ಮಟನ್ ಕರಿ ಸೇರಿದಂತೆ ವಿಶೇಷ ಮೆನುವನ್ನು ಏರ್ಪಡಿಸಲಾಗಿದೆ. ಇವುಗಳ ಜೊತೆಗೆ ಗ್ರಿಲ್ಡ್ ಲಂಚ್ ಚಾಪ್ಸ್, ಬಟರ್ ಚಿಕನ್ ಮತ್ತು ಗ್ರಿಲ್ಡ್ ಫಿಶ್ ಕೂಡ ಮೆನುವಿನಲ್ಲಿದೆ. ವಿಶೇಷವಾಗಿ ಪಾಕಿಸ್ತಾನದ ಆಟಗಾರರಿಗಾಗಿ ಬೇಯಿಸಿದ ಬಾಸ್ಮತಿ ಅಕ್ಕಿ, ಬೊಲೊಗ್ನೀಸ್ ಸಾಸ್‌ನೊಂದಿಗೆ ಸ್ಪಾಗೆಟ್ಟಿ ಮತ್ತು ವೆಜ್ ಪುಲಾವ್ ಅನ್ನು ಮೆನುವಿನಲ್ಲಿ ಸೇರಿಸಲಾಗಿದೆ.
ಭಾರತದ ಭವ್ಯ ಸ್ವಾಗತಕ್ಕೆ ಬೆರಗಾದ ಪಾಕ್ ಕ್ರಿಕೆಟಿಗರು; ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದೇನು ಗೊತ್ತಾ?
ಗೋಮಾಂಸ ಲಭ್ಯವಿರುವುದಿಲ್ಲ
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಪಾಕಿಸ್ತಾನದ ಡಯಟ್ ಚಾರ್ಟ್ ಮಟನ್ ಕರಿ, ಬಟರ್ ಚಿಕನ್, ಗ್ರಿಲ್ಡ್ ಮಟನ್ ಚಾಪ್ಸ್ ಮತ್ತು ಗ್ರಿಲ್ಡ್ ಫಿಶ್ ಇತರ ಭಕ್ಷ್ಯಗಳನ್ನು ಒಳಗೊಂಡಿದೆ. 2023 ರ ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಬರುವ ಎಲ್ಲಾ ಹತ್ತು ತಂಡಗಳಿಗೆ ಗೋಮಾಂಸ ಲಭ್ಯವಿರುವುದಿಲ್ಲ. ಆದ್ದರಿಂದ ಪಾಕಿಸ್ತಾನ ತಂಡವು ತಮ್ಮ ಪ್ರೋಟೀನ್ ಅಗತ್ಯಗಳಿಗಾಗಿ ಮಟನ್, ಚಿಕನ್ ಮತ್ತು ಮೀನುಗಳನ್ನು ಅವಲಂಬಿಸಬೇಕಾಗುತ್ತದೆ.
Pakistan Cricket Team have safely reached the team hotel in Hyderabad and straightaway had the famous Hyderabadi Biryani in India. #worldcup2023 #BabarAzam𓃵 #pakistancricket pic.twitter.com/fZAU5uSB06
— King👑 Babar Azam Fans club (@BasitBasit24360) September 27, 2023
ಎರಡು ವಾರಗಳ ಕಾಲ ಹೈದರಾಬಾದ್‌ನಲ್ಲಿ ವಾಸ
ಏತನ್ಮಧ್ಯೆ, ಪಾಕಿಸ್ತಾನ ಕ್ರಿಕೆಟ್ ತಂಡ ಇನ್ನೂ ಎರಡು ವಾರಗಳ ಕಾಲ ಹೈದರಾಬಾದ್‌ನಲ್ಲಿ ಉಳಿಯಲಿದೆ. ಸೆಪ್ಟೆಂಬರ್ 29 ರಂದು ಉಪ್ಪಲ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಅಭ್ಯಾಸ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಕ್ರಮದಲ್ಲಿ ಇಂದು (ಗುರುವಾರ) ಪಾಕ್ ತಂಡ ಅಭ್ಯಾಸ ನಡೆಸಿತು. ಅಕ್ಟೋಬರ್ 6 ರಂದು ಪಾಕಿಸ್ತಾನವು ನೆದರ್ಲೆಂಡ್ಸ್ ತಂಡದ ವಿರುದ್ಧ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದೆ. ಬಳಿಕ ಅಕ್ಟೋಬರ್ 10 ರಂದು ಶ್ರೀಲಂಕಾವನ್ನು ಎರಡನೇ ಪಂದ್ಯದಲ್ಲಿ ಎದುರಿಸಲಿದೆ. ಪಾಕಿಸ್ತಾನವು ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಹು ನಿರೀಕ್ಷಿತ ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Thu, 28 September 23