ಕೊಹ್ಲಿ ಜೊತೆ ಜಗಳವಾಡಿದ್ದ 24 ವರ್ಷದ ನವೀನ್ ಉಲ್ ಹಖ್ ಏಕದಿನ ಕ್ರಿಕೆಟ್ಗೆ ದಿಢೀರ್ ನಿವೃತ್ತಿ
Naveen-ul-Haq shocking retirement: ಇತ್ತೀಚೆಗಷ್ಟೆ ಮೊಣಕಾಲಿನ ಗಾಯದಿಂದಾಗಿ ನವೀನ್ ಅವರು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ಕಳೆದುಕೊಂಡಿದ್ದರು. ಸದ್ಯ ವೈದ್ಯರ ಸಲಹೆಯ ಮೇರೆಗೆ ಏಕದಿನ ಕ್ರಿಕೆಟ್ನಿಂದ ದೂರ ಉಳಿಯಲು ತೀರ್ಮಾನಿಸಿದ್ದೇನೆ ಎಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮನ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಜಗಳವಾಡಿದ್ದ ಲಖನೌ ಸೂಪರ್ ಜೇಂಟ್ಸ್ ತಂಡದ, ಅಫ್ಘಾನಿಸ್ತಾನ ಸ್ಟಾರ್ ವೇಗಿ ನವೀನ್-ಉಲ್-ಹಕ್ (Naveen-ul-Haq) ಆಘಾತಕಾರಿ ಘೋಷಣೆ ಮಾಡಿದ್ದು, ಮುಂಬರುವ ಏಕದಿನ ವಿಶ್ವಕಪ್ 2023 ರ ಬಳಿಕ ತಾನು 50-ಓವರ್ ಮಾದರಿಯ ಕ್ರಿಕೆಟ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತನ್ನ 23ನೇ ವರ್ಷಕ್ಕೆ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಆದಾಗ್ಯೂ, ನವೀನ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದಾಗಿ ಹೇಳಿದ್ದಾರೆ.
ಇತ್ತೀಚೆಗಷ್ಟೆ ಮೊಣಕಾಲಿನ ಗಾಯದಿಂದಾಗಿ ನವೀನ್ ಅವರು ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ಕಳೆದುಕೊಂಡಿದ್ದರು. ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ತೆರಳಿದ್ದರು. ಸದ್ಯ ವೈದ್ಯರ ಸಲಹೆಯ ಮೇರೆಗೆ ಏಕದಿನ ಕ್ರಿಕೆಟ್ನಿಂದ ದೂರ ಉಳಿಯಲು ತೀರ್ಮಾನಿಸಿದ್ದೇನೆ ಎಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮನ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿಯ ಆರ್ಭಟಕ್ಕೆ ಪಂಟರ್ ಪಾಂಟಿಂಗ್ ದಾಖಲೆ ಬ್ರೇಕ್
“ನನ್ನ ದೇಶವನ್ನು ಪ್ರತಿನಿಧಿಸುವುದು ಒಂದು ಗೌರವದ ವಿಷಯವಾಗಿದೆ. ಈ ವಿಶ್ವಕಪ್‌ನ ಕೊನೆಯಲ್ಲಿ ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಆದರೆ, ನನ್ನ ದೇಶಕ್ಕಾಗಿ ಟಿ20 ಕ್ರಿಕೆಟ್‌ನಲ್ಲಿ ಈ ನೀಲಿ ಜೆರ್ಸಿಯನ್ನು ಧರಿಸುವುದನ್ನು ಮುಂದುವರಿಸುತ್ತೇನೆ. ಇದು ಸುಲಭದ ನಿರ್ಧಾರವಲ್ಲ. ಆದರೆ ನನ್ನ ಆಟದ ವೃತ್ತಿಜೀವನವನ್ನು ಮುಂದುವರಿಸಲು ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ನನ್ನ ಎಲ್ಲಾ ಅಭಿಮಾನಿಗಳು ಅವರ ಬೆಂಬಲ ಮತ್ತು ಅಚಲವಾದ ಪ್ರೀತಿಗಾಗಿ ಧನ್ಯವಾದ ಹೇಳಲು ಬಯಸುತ್ತೇನೆ,” ಎಂದು ನವೀನ್-ಉಲ್-ಹಕ್ ಬರೆದುಕೊಂಡಿದ್ದಾರೆ.
ನವೀನ್ ಉಲ್ ಹಖ್ ನಿವೃತ್ತಿ ಕುರಿತು ಮಾಡಿರುವ ಪೋಸ್ಟ್:
View this post on Instagram
ಐಪಿಎಲ್ 2023 ರ ಆರ್ಸಿಬಿ ಮತ್ತು ಎಲ್ಎಸ್ಜಿ ನಡುವಣ 2023 ಪಂದ್ಯದ ನಂತರ ನವೀನ್-ಉಲ್-ಹಕ್, ವಿರಾಟ್ ಕೊಹ್ಲಿಯೊಂದಿಗೆ ಜಗಳವಾಡಿದ್ದರು. ಆ ಬಳಿಕ ನವೀನ್ ಹೆಸರು ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡ ತೊಡಗಿತು. ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಇವರು 8 ಪಂದ್ಯಗಳಿಂದ 11 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು.
ನವೀನ್ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ, ಏಳು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 25.42 ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಜನವರಿ 2021 ರಲ್ಲಿ ಅಬುಧಾಬಿಯಲ್ಲಿ ಐರ್ಲೆಂಡ್ ವಿರುದ್ಧ ಇವರು ಅಫ್ಘಾನ್ ಪರ ಕೊನೆಯದಾಗಿ ಏಕದಿನ ಪಂದ್ಯ ಆಡಿದ್ದರು. ಸೆಪ್ಟೆಂಬರ್ 2016 ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್ಗೆ ಕಾಲಿಟ್ಟರು.
ಅಫ್ಘಾನಿಸ್ತಾನ ವಿಶ್ವಕಪ್ ತಂಡ: ಹಶ್ಮತುಲ್ಲಾ ಶಾಹಿದಿ, ಇಬ್ರಾಹಿಂ ಝದ್ರಾನ್, ರಹಮಾನುಲ್ಲಾ ಗುರ್ಬಾಜ್, ರಹಮತ್ ಶಾ, ರಿಯಾಜ್ ಹಸನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಅಬ್ದುಲ್ ರಹಮಾನ್, ನೂರ್ ರಹಮಾನ್, ಎಫ್ ಉರ್ಕ್ಮಾನ್, ನವೀನ್ ಉಲ್-ಹಕ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ