AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದ ಮೇಲೆ ಕಣ್ಣು: ಚೀನಾಕ್ಕೆ ಹೊರಟ ಭಾರತ ಕ್ರಿಕೆಟ್ ತಂಡದ ಆಟಗಾರರು

Team India in Asian Games: ಏಷ್ಯನ್ ಗೇಮ್ಸ್ 2023 ಕ್ಕಾಗಿ ಟೀಮ್ ಇಂಡಿಯಾ ಮುಂಬೈ ವಿಮಾನ ನಿಲ್ದಾಣದಿಂದ ಹ್ಯಾಂಗ್‌ಝೌಗೆ ಹೊರಟಿತು ಎಂದು SAI ಮೀಡಿಯಾ ಗುರುವಾರ ದೃಢಪಡಿಸಿದೆ. ನಾಯಕ ರುತುರಾಜ್ ಗಾಯಕ್ವಾಡ್ ಹೊರತುಪಡಿಸಿ, ಎಲ್ಲರ ಕಣ್ಣುಗಳು ಯಶಸ್ವಿ ಜೈಸ್ವಾಲ್, ಪ್ರಭಾಸಿಮ್ರಾನ್ ಸಿಂಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ತ್ರಿಫಾಟಿ ಮೇಲೆ ಇದೆ.

ಚಿನ್ನದ ಮೇಲೆ ಕಣ್ಣು: ಚೀನಾಕ್ಕೆ ಹೊರಟ ಭಾರತ ಕ್ರಿಕೆಟ್ ತಂಡದ ಆಟಗಾರರು
Team India
Vinay Bhat
|

Updated on:Sep 28, 2023 | 11:05 AM

Share

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games) ಭಾರತ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಇದೀಗ ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಕ್ರಿಕೆಟ್ ಏಷ್ಯನ್ ಗೇಮ್ಸ್‌ಗಾಗಿ ಚೀನಾಕ್ಕೆ ಹೊರಟಿದೆ. ಮಹಿಳಾ ಕ್ರಿಕೆಟ್ ತಂಡ ಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಚಿನ್ನದ ಪದಕ ಗೆದ್ದ ಬಳಿಕ ಭಾರತ ಪುರುಷರ ತಂಡ ಕೂಡ ಬಂಗಾರದ ಮೇಲೆ ಕಣ್ಣಿಟ್ಟಿದೆ. ಪುರುಷರ ತಂಡವು ಕ್ವಾರ್ಟರ್-ಫೈನಲ್ ಹಂತದಿಂದ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.

ಏಷ್ಯನ್ ಗೇಮ್ಸ್ 2023 ಕ್ಕಾಗಿ ಟೀಮ್ ಇಂಡಿಯಾ ಮುಂಬೈ ವಿಮಾನ ನಿಲ್ದಾಣದಿಂದ ಹ್ಯಾಂಗ್‌ಝೌಗೆ ಹೊರಟಿತು ಎಂದು SAI ಮೀಡಿಯಾ ಗುರುವಾರ ದೃಢಪಡಿಸಿದೆ. ನಾಯಕ ರುತುರಾಜ್ ಗಾಯಕ್ವಾಡ್ ಹೊರತುಪಡಿಸಿ, ಎಲ್ಲರ ಕಣ್ಣು ಯಶಸ್ವಿ ಜೈಸ್ವಾಲ್, ಪ್ರಭಾಸಿಮ್ರಾನ್ ಸಿಂಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ತ್ರಿಫಾಟಿ ಮೇಲೆ ಇದೆ. ಎನ್‌ಸಿಎ ಮುಖ್ಯಸ್ಥ ಮತ್ತು ತಂಡದ ಮುಖ್ಯ ತರಬೇತುದಾರ ವಿವಿಎಸ್ ಲಕ್ಷ್ಮಣ್ ಅವರು ಕೋಚ್ ಆಗಿ ಭಾರತ ತಂಡದ ಜೊತೆ ಪ್ರಯಾಣಿಸಿದ್ದಾರೆ.

ಇಂದು ಸಂಜೆ ವೇಳೆಗೆ ಟೀಮ್ ಇಂಡಿಯಾ ಆಟಗಾರರು ಚೀನಾ ತಲುಪಲಿದ್ದು, ನಾಳೆಯಿಂದ ಅಭ್ಯಾಸ ಆರಂಭಿಸಲಿದ್ದಾರೆ. ರುತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್ ಇತ್ತೀಚೆಗೆ ಮುಕ್ತಾಯಗೊಂಡ ಭಾರತ – ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದರು. ಈ ಸರಣಿಯಲ್ಲಿ ಇವರಿಬ್ಬರು ಉತ್ತಮ ಪ್ರದರ್ಶನ ನೀಡಿದ್ದು, ತಮ್ಮ ಫಾರ್ಮ್ ಅನ್ನು ಮುಂದುವರೆಸಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ
Image
ಬಾಬರ್​ಗೆ ಕೇಸರಿ ಶಾಲು ಹೊದಿಸಿ ಅದ್ಧೂರಿ ಸ್ವಾಗತ ನೀಡಿದ ಭಾರತ
Image
ಕೊಹ್ಲಿ ಜೊತೆ ಜಗಳವಾಡಿದ್ದ 24 ವರ್ಷದ ನವೀನ್ ಉಲ್ ಹಖ್ ದಿಢೀರ್ ನಿವೃತ್ತಿ
Image
ಪೋಸ್ಟ್ ಮ್ಯಾಚ್​ನಲ್ಲಿ ಟ್ರೋಫಿ ಪಡೆದುಕೊಳ್ಳಲು ನಿರಾಕರಿಸಿದ ರೋಹಿತ್ ಶರ್ಮಾ
Image
ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ

ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಪುರುಷರಿಗೆ ಬಂಗಾರ

ಭಾರತ ಕ್ರಿಕೆಟ್ ತಮ್ಮ ಏಷ್ಯನ್ ಗೇಮ್ಸ್ ಅಭಿಯಾನವನ್ನು ಅಕ್ಟೋಬರ್ 3 ರಂದು ಕ್ವಾರ್ಟರ್ ಫೈನಲ್‌ನಲ್ಲಿ ಪ್ರಾರಂಭಿಸಲಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾ ನಾಲ್ಕು ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸಲಿವೆ. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಕ್ರಿಕೆಟ್ ಪಂದ್ಯವು ಬೆಳಗ್ಗೆ 6:30 ಕ್ಕೆ ಪ್ರಾರಂಭವಾಗಲಿದೆ. ನೇರ ಪ್ರಸಾರವನ್ನು ಸೋನಿ ಸ್ಪೋರ್ಟ್ಸ್ 5 HD/SD ಮತ್ತು ಸೋನಿ ಟೆನ್ 3 HD/SD ನಲ್ಲಿ ವೀಕ್ಷಿಸಬಹುದು.

ಏಷ್ಯಾನ್ ಗೇಮ್ಸ್​ಗೆ ಪುರುಷರ ಭಾರತ ಕ್ರಿಕೆಟ್ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:03 am, Thu, 28 September 23