ಭಾರತದ ಭವ್ಯ ಸ್ವಾಗತಕ್ಕೆ ಬೆರಗಾದ ಪಾಕ್ ಕ್ರಿಕೆಟಿಗರು; ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದೇನು ಗೊತ್ತಾ?
World Cup 2023: ಬುಧವಾರ ಸಂಜೆ, ನಾಯಕ ಬಾಬರ್ ಆಝಂ ನೇತೃತ್ವದ ಪಾಕಿಸ್ತಾನಿ ತಂಡವು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭವ್ಯ ಸ್ವಾಗತವನ್ನು ಕಂಡು ಸ್ವತಃ ಪಾಕ್ ಆಟಗಾರರೇ ಮೂಕ ವಿಸ್ಮಿತರಾಗಿದ್ದಾರೆ. ಭಾರತದ ಈ ಆತಿಥ್ಯಕ್ಕೆ ಮಾರು ಹೋಗಿರುವ ಪಾಕ್ ಕ್ರಿಕೆಟಿಗರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಸ್ವಾಗತವನ್ನು ಕೊಂಡಾಡಿದ್ದಾರೆ.
ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್‌ಗಾಗಿ (World Cup 2023) ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್ ತಲುಪಿದ್ದು, ಮುಂದಿನ 15 ದಿನಗಳ ಕಾಲ ಅಲ್ಲಿಯೇ ಇರಲಿದೆ. ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಪಾಕಿಸ್ತಾನ ತಂಡ (Pakistan Cricket Team) ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಸೆಪ್ಟೆಂಬರ್ 29 ರಂದು ಆಡಬೇಕಾಗಿದೆ. ಹೀಗಾಗಿ ಬುಧವಾರ ಸಂಜೆ, ನಾಯಕ ಬಾಬರ್ ಆಝಂ (Babar Azam) ನೇತೃತ್ವದ ಪಾಕಿಸ್ತಾನಿ ತಂಡವು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭವ್ಯ ಸ್ವಾಗತವನ್ನು ಕಂಡು ಸ್ವತಃ ಪಾಕ್ ಆಟಗಾರರೇ ಮೂಕ ವಿಸ್ಮಿತರಾಗಿದ್ದಾರೆ. ಭಾರತದ ಈ ಆತಿಥ್ಯಕ್ಕೆ ಮಾರು ಹೋಗಿರುವ ಪಾಕ್ ಕ್ರಿಕೆಟಿಗರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಸ್ವಾಗತವನ್ನು ಕೊಂಡಾಡಿದ್ದಾರೆ.
ಏಳು ವರ್ಷಗಳ ಬಳಿಕ ಭಾರತಕ್ಕೆ ಬಂದ ಪಾಕ್ ತಂಡ
ವಾಸ್ತವವಾಗಿ ಏಳು ವರ್ಷಗಳ ಬಳಿಕ ಪಾಕಿಸ್ತಾನ ತಂಡ ಕ್ರಿಕೆಟ್ ಪಂದ್ಯ ಆಡಲು ಭಾರತಕ್ಕೆ ಬಂದಿದ್ದು, ಇದಕ್ಕೂ ಮುನ್ನ 2016ರ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿತ್ತು. ಪಾಕಿಸ್ತಾನ ತಂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಹಲವರು ಕ್ರಿಕೆಟಿಗರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದಲ್ಲದೆ, ಎಲ್ಲಾ ಆಟಗಾರರನ್ನು ತಂಡದ ಹೋಟೆಲ್‌ನಲ್ಲಿ ಭಾರತೀಯ ಶೈಲಿಯಲ್ಲಿ ಸ್ವಾಗತಿಸಲಾಯಿತು. ಅಲ್ಲದೆ ಈ ಸಂದರ್ಭದಲ್ಲಿ ಆಟಗಾರರಿಗೆ ಕೇಸರಿ ಬಣ್ಣದ ಶಾಲುಗಳನ್ನು ಹೋದಿಸಿ ಸ್ವಾಗತಿಸಲಾಯಿತು. ನಾಯಕ ಬಾಬರ್ ಆಝಂ ಸೇರಿದಂತೆ ಹಲವು ಆಟಗಾರರು ಕೇಸರಿ ಶಾಲು ಧರಿಸಿರುವ ಕೆಲವು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಏಷ್ಯಾಕಪ್ನಲ್ಲಿ ಪಾಕಿಸ್ತಾನಕ್ಕೆ ಸಿಕ್ಕ ಬಹುಮಾನದ ಮೊತ್ತವೆಷ್ಟು ಗೊತ್ತಾ?
ಬಿಗಿ ಭದ್ರತೆಯ ನಡುವೆ ತೆರಳಿದ ಪಾಕ್ ತಂಡ
ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಆತ್ಮೀಯ ಸ್ವಾಗತ ನೀಡಿದರು. ನಗರ ಪೊಲೀಸರ ಬಿಗಿ ಭದ್ರತೆಯ ನಡುವೆ ಪಾಕಿಸ್ತಾನಿ ತಂಡವನ್ನು ವಿಮಾನ ನಿಲ್ದಾಣದಿಂದ ಬಂಜಾರಾ ಹಿಲ್ಸ್‌ನ ಪಾರ್ಕ್ ಹಯಾತ್ ಹೋಟೆಲ್‌ಗೆ ಸ್ಥಳಾಂತರಿಸಲಾಯಿತು. ಮೊಹಮ್ಮದ್ ನವಾಜ್ ಮತ್ತು ಆಘಾ ಸಲ್ಮಾನ್ ಹೊರತುಪಡಿಸಿ ಉಳಿದ ಪಾಕಿಸ್ತಾನಿ ಸದಸ್ಯರು ಭಾರತಕ್ಕೆ ಬಂದಿರುವುದು ಇದೇ ಮೊದಲು. ಇಲ್ಲಿ ಸಿಕ್ಕ ಸೌಜನ್ಯಕ್ಕೆ ಪಾಕ್ ಕ್ರಿಕೆಟಿಗರು ಫಿದಾ ಆಗಿದ್ದಾರೆ.
ಭಾರತದ ಆತಿಥ್ಯಕ್ಕೆ ಮನಸೋತ ಪಾಕ್ ಆಟಗಾರರು
ಹೈದರಾಬಾದ್‌ನಲ್ಲಿ ತಮಗೆ ದೊರೆತ ಆತ್ಮೀಯ ಸ್ವಾಗತದಿಂದ ವಿಸ್ಮಿತರಾಗಿರುವ ಪಾಕಿಸ್ತಾನಿ ಕ್ರಿಕೆಟಿಗರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಯಾವ ಕ್ರಿಕೆಟಿಗರು ಯಾವ ರೀತಿಯ ಪೋಸ್ಟ್ಗಳನ್ನು ಹಾಕಿದ್ದಾರೆ ಎಂಬುದರ ಪಟ್ಟಿ ಹೀಗಿದೆ.
Amazing reception from the people here. Everything was super smooth. Looking forward to the next 1.5 months 😇
— Muhammad Rizwan (@iMRizwanPak) September 27, 2023
Pakistan cricket team in Hyderabad Look at their gestures 👇 pic.twitter.com/qZcRi9Ehuv
— mukarram (@mukarram3) September 27, 2023
Thanks to Indians for a warm welcome of Pakistan Cricket Team 🇵🇰 That was totally unexpected & so mesmerising 😭❤️ #Hyderabad pic.twitter.com/DqBZxgBtKQ
— SAAD 🇵🇰 (@SaadIrfan258) September 27, 2023
A warm welcome in Hyderabad as we land on Indian shores 👏#WeHaveWeWill | #CWC23 pic.twitter.com/poyWmFYIwK
— Pakistan Cricket (@TheRealPCB) September 27, 2023
ಇನ್ನೊಂದು ವಾರದಲ್ಲಿ ಏಕದಿನ ವಿಶ್ವಕಪ್ ಶುರುವಾಗಲಿದೆ. ಕಳೆದ ವರ್ಷದ ವಿಶ್ವಕಪ್ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಈ ಮೆಗಾ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ಮುಖಾಮುಖಿಯಾಗಲಿವೆ. ಎಲ್ಲಾ ತಂಡಗಳು ಈಗಾಗಲೇ ಭಾರತವನ್ನು ತಲುಪಿವೆ. ಪ್ರತಿ ತಂಡವು ಮೆಗಾ ಟೂರ್ನಮೆಂಟ್‌ಗೆ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಡುತ್ತವೆ. ಇದರ ಭಾಗವಾಗಿ ಪಾಕಿಸ್ತಾನ ಕೂಡ ಸೆಪ್ಟೆಂಬರ್ 29 ರಂದು ನ್ಯೂಜಿಲೆಂಡ್ ಮತ್ತು ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Thu, 28 September 23