22 ರನ್​ಗಳಷ್ಟೇ ಬೇಕು; ಏಕದಿನದಲ್ಲಿ ನಂ. 1 ಪಟ್ಟಕ್ಕೇರುವ ತವಕದಲ್ಲಿ ಶುಭ್​ಮನ್ ಗಿಲ್..!

Shubman Gill: ವಾಸ್ತವವಾಗಿ ಏಕದಿನ ಮಾದರಿಯಲ್ಲಿ ನಂಬರ್ 1 ಸ್ಥಾನಕ್ಕೇರಲು 200 ರನ್​ಗಳ ಅಗತ್ಯದೊಂದಿಗೆ ಆಸೀಸ್ ವಿರುದ್ಧದ ಏಕದಿನ ಸರಣಿಗೆ ಕಾಲಿಟ್ಟಿದ ಗಿಲ್, ಇದೀಗ ಶತಕ ಹಾಗೂ ಅರ್ಧಶತಕದ ನೆರವಿನಿಂದ ಈ ದ್ವಿಶತಕದ ಸನಿಹಕ್ಕೆ ಬಂದು ನಿಂತಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಗಿಲ್, ಇದಕ್ಕೆ ಇನ್ನು 22 ರನ್ ಸೇರಿಸಿದ್ದರೆ ಏಕದಿನ ಮಾದರಿಯಲ್ಲಿ ನಂಬರ್ 1 ಪಟ್ಟವನ್ನು ಬಾಬರ್ ಅವರಿಂದ ಕಿತ್ತುಕೊಳ್ಳಬಹುದಿತ್ತು.

22 ರನ್​ಗಳಷ್ಟೇ ಬೇಕು; ಏಕದಿನದಲ್ಲಿ ನಂ. 1 ಪಟ್ಟಕ್ಕೇರುವ ತವಕದಲ್ಲಿ ಶುಭ್​ಮನ್ ಗಿಲ್..!
ಶುಭ್​ಮನ್ ಗಿಲ್
Follow us
ಪೃಥ್ವಿಶಂಕರ
|

Updated on: Sep 25, 2023 | 11:06 AM

ಟೀಂ ಇಂಡಿಯಾದ (Team India) ಭವಿಷ್ಯದ ನಾಯಕನೆಂದೇ ಬಿಂಬಿತವಾಗಿರುವ ಯುವ ಬ್ಯಾಟರ್​ ಶುಭ್​ಮನ್ ಗಿಲ್ (Shubman Gill) ಪ್ರಸ್ತುತ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಶತಕ ಹಾಗೂ ಅರ್ಧಶತಕಳನ್ನು ಬಾರಿಸುತ್ತಿರುವ ಗಿಲ್, ಆಸ್ಟ್ರೇಲಿಯಾ ವಿರುದ್ಧದ (India vs Australia) ಏಕದಿನ ಸರಣಿಯಲ್ಲೂ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಮುಂದುವರೆಸಿದ್ದಾರೆ. ಮೊಹಾಲಿಯ ತನ್ನ ತವರು ಮೈದಾನದಲ್ಲಿ ಆಡಿದ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಅವಕಾಶವನ್ನು ಕಳೆದುಕೊಂಡಿದ್ದ ಗಿಲ್, ಇಂದೋರ್‌ನಲ್ಲಿ ನಡೆದ ಎರಡನೇ ಏಕದಿನದಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಗಿಲ್ ಅವರ ಆರನೇ ಶತಕವಾಗಿದ್ದು, ಅದರಲ್ಲಿ 5 ಶತಕಗಳು 2023 ರಲ್ಲಿ ಮಾತ್ರ ಬಂದಿರುವುದು ವಿಶೇಷವಾಗಿದೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ಗಿಲ್, ಇದೀಗ ಏಕದಿನ ಕ್ರಿಕೆಟ್​ನಲ್ಲಿ ನಂಬರ್ 1 ಬ್ಯಾಟರ್ ಎನಿಸಿಕೊಳ್ಳಲು ಕೇವಲ 22 ರನ್​ಗಳ ದೂರದಲ್ಲಿದ್ದಾರೆ.

ಇಂದೋರ್​ನಲ್ಲಿ ಗಿಲ್ ಅದ್ಭುತ ಪ್ರದರ್ಶನ

ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿರುವ ಗಿಲ್, ಸರಿಯಾಗಿ 8 ತಿಂಗಳ ಹಿಂದೆ ಇದೇ ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಶತಕದ ಸಾಧನೆ ಮಾಡಿದ್ದರು. ಜನವರಿ 24, 2023 ರಂದು ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ ಕೇವಲ 78 ಎಸೆತಗಳಲ್ಲಿ 112 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಅದು ಗಿಲ್ ಅವರ ವೃತ್ತಿ ಜೀವನದ ನಾಲ್ಕನೇ ಶತಕವಾಗಿತ್ತು. ಇದೀಗ ಅದೇ ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಭರ್ಜರಿ ಶತಕ ಬಾರಿಸಿರುವ ಈ ಯುವ ಒಪನರ್ ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅವರನ್ನು ಹಿಂದಿಕ್ಕುವ ಸನಿಹದಲ್ಲಿದ್ದಾರೆ.

ಹಾಶಿಮ್ ಆಮ್ಲಾ ನಿರ್ಮಿಸಿದ್ದ ವಿಶ್ವ ದಾಖಲೆ ಮುರಿದ ಶುಭ್​ಮನ್ ಗಿಲ್..!

22 ರನ್​ಗಳಷ್ಟೇ ಬೇಕಿರುವುದು

ವಾಸ್ತವವಾಗಿ ಏಕದಿನ ಮಾದರಿಯಲ್ಲಿ ನಂಬರ್ 1 ಸ್ಥಾನಕ್ಕೇರಲು 200 ರನ್​ಗಳ ಅಗತ್ಯದೊಂದಿಗೆ ಆಸೀಸ್ ವಿರುದ್ಧದ ಏಕದಿನ ಸರಣಿಗೆ ಕಾಲಿಟ್ಟಿದ ಗಿಲ್, ಇದೀಗ ಶತಕ ಹಾಗೂ ಅರ್ಧಶತಕದ ನೆರವಿನಿಂದ ಈ ದ್ವಿಶತಕದ ಸನಿಹಕ್ಕೆ ಬಂದು ನಿಂತಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಗಿಲ್, ಇದಕ್ಕೆ ಇನ್ನು 22 ರನ್ ಸೇರಿಸಿದ್ದರೆ ಏಕದಿನ ಮಾದರಿಯಲ್ಲಿ ನಂಬರ್ 1 ಪಟ್ಟವನ್ನು ಬಾಬರ್ ಅವರಿಂದ ಕಿತ್ತುಕೊಳ್ಳಬಹುದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಗಿಲ್​ಗೆ ವಿಶ್ವಕಪ್​ಗೂ ಮುನ್ನ ಈ ಸಾಧನೆ ಮಾಡುವ ಅವಕಾಶವಿದ್ದು, ರಾಜ್​ಕೋಟ್​ನಲ್ಲಿ ನಡೆಯಲ್ಲಿರುವ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಗಿಲ್ 22 ರನ್ ಅಥವಾ ಅದಕ್ಕೂ ಹೆಚ್ಚು ರನ್ ಬಾರಿಸಿದರೆ, ಏಕದಿನದಲ್ಲಿ ರಾಜನಾಗಿ ಮೇರೆಯಲ್ಲಿದ್ದಾರೆ.

ಪ್ರಸ್ತುತ 2ನೇ ಸ್ಥಾನದಲ್ಲಿರುವ ಗಿಲ್

ಪ್ರಸ್ತುತ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ ಅವರು ಐಸಿಸಿ ಏಕದಿನ ಶ್ರೇಯಾಂಕದಲ್ಲಿ 857 ರೇಟಿಂಗ್ ಅಂಕಗಳೊಂದಿಗೆ ನಂಬರ್ 1 ಬ್ಯಾಟರ್ ಎನಿಸಿಕೊಂಡಿದ್ದಾರೆ. ಶುಭ್​ಮನ್ ಗಿಲ್ 814 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, 2ನೇ ಸ್ಥಾನ ಪಡೆದಿದ್ದಾರೆ. ಇದೀಗ ಶುಭ್​ಮನ್ ಗಿಲ್ ಆಸೀಸ್ ವಿರುದ್ಧದ ಈ ಏಕದಿನ ಸರಣಿಯಲ್ಲಿ ಒಟ್ಟಾರೆ 200 ರನ್ ಕಲೆಹಾಕಿದರೆ, ಬಾಬರ್ ಆಝಂರನ್ನು ಹಿಂದಿಕ್ಕಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ