IND vs AUS: ಮೊಹಾಲಿಯಲ್ಲಿ ಮಾಡಿದ ತಪ್ಪಿಗೆ ಇಂದೋರ್‌ನಲ್ಲಿ ಬೆಲೆ ತೆತ್ತ ನಾಯಕ ರಾಹುಲ್..!

KL Rahul: ವಾಸ್ತವವಾಗಿ, ಮೊಹಾಲಿಯಲ್ಲಿ ರಾಹುಲ್ ಬ್ಯಾಟ್‌ ಅರ್ಧಶತಕದ ಇನ್ನಿಂಗ್ಸ್ ಆಡಿತ್ತು. ಆದರೆ ಅದಕ್ಕೂ ಮೊದಲು ರಾಹುಲ್ ವಿಕೆಟ್ ಹಿಂದೆ ಶೋಚನೀಯವಾಗಿ ವಿಫಲವಾಗುತ್ತಿದ್ದರು. ಒಂದು ಕ್ಯಾಚ್ ಮತ್ತು ಒಂದು ರನ್ ಔಟ್ ಬಿಟ್ಟುಕೊಟ್ಟಿದ್ದಲ್ಲದೆ, ರಾಹುಲ್ ತಮ್ಮ ಕೈಗೆ ನೇರವಾಗಿ ಬಂದ ಚೆಂಡುಗಳನ್ನು ಅನೇಕ ಬಾರಿ ಕ್ಯಾಚ್ ಮಾಡಲಿಲ್ಲ. ಇದರಿಂದಾಗಿ ಬೈ ಮೂಲಕ ಕೆಲವು ರನ್​ಗಳು ಆಸೀಸ್ ಪಾಲಾದವು.

IND vs AUS: ಮೊಹಾಲಿಯಲ್ಲಿ ಮಾಡಿದ ತಪ್ಪಿಗೆ ಇಂದೋರ್‌ನಲ್ಲಿ ಬೆಲೆ ತೆತ್ತ ನಾಯಕ ರಾಹುಲ್..!
ಕೆಎಲ್ ರಾಹುಲ್, ಇಶಾನ್ ಕಿಶನ್
Follow us
ಪೃಥ್ವಿಶಂಕರ
|

Updated on:Sep 25, 2023 | 10:17 AM

ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ (KL Rahul) ಟೀಂ ಇಂಡಿಯಾ ಪರ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ (Asia Cup 2023) ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದಾಗಿನಿಂದಲೂ ರಾಹುಲ್ ಅವರ ಬ್ಯಾಟ್‌ನಿಂದ ರನ್‌ಗಳ ಸುರಿಮಳೆಯಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ (India vs Australia) ಸರಣಿಯಲ್ಲೂ ಅವರ ಅದ್ಭುತ ಪ್ರದರ್ಶನ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಲ್ಲದೆ, ತಮ್ಮ ನಾಯಕತ್ವದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಈಗ ಎರಡನೇ ಏಕದಿನ ಪಂದ್ಯದಲ್ಲೂ ನಾಯಕನಾಗಿ ರಾಹುಲ್ ಅರ್ಧಶತಕ ಸಿಡಿಸಿದರು. ಇದರ ಹೊರತಾಗಿಯೂ ರಾಹುಲ್, ತಾವು ಹಿಂದಿನ ಪಂದ್ಯದಲ್ಲಿ ಮಾಡಿದ ದುಬಾರಿ ತಪ್ಪುಗಳಿಗಾಗಿ ಈ ಪಂದ್ಯದಲ್ಲಿ ಬೆಲೆ ತೆರಬೇಕಾಯಿತು.

ನಿನ್ನೆ ಅಂದರೆ, ಸೆಪ್ಟೆಂಬರ್ 24 ರ ಭಾನುವಾರ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 399 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು. ಇದರಲ್ಲಿ ಶುಭ್​ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಶತಕಗಳ ಹೊರತಾಗಿ ನಾಯಕ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಅವರ ತ್ವರಿತ ಅರ್ಧಶತಕದ ಇನ್ನಿಂಗ್ಸ್ ಕೂಡ ತಂಡಕ್ಕೆ ನೆರವಾಯಿತು. ಇದಾದ ಬಳಿಕ ಟೀಂ ಇಂಡಿಯಾ ಬೌಲಿಂಗ್ ಆರಂಭಿಸಿದಾಗ ತಂಡದಲ್ಲಿ ಪ್ರಮುಖ ಬದಲಾವಣೆ ಕಂಡು ಬಂತು. ಅದರ ಪ್ರಕಾರ ನಾಯಕ ರಾಹುಲ್ ಬದಲಿಗೆ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತು ಮೈದಾನಕ್ಕಿಳಿದಿದ್ದರು.

ವಿಕೆಟ್ ಕೀಪಿಂಗ್ ಮರೆತ್ರಾ ಕೆಎಲ್ ರಾಹುಲ್? ಟೀಂ ಇಂಡಿಯಾ ನಾಯಕನ ಕಳಪೆ ಕೀಪಿಂಗ್​ಗೆ ಫ್ಯಾನ್ಸ್ ಬೇಸರ

ಮೊಹಾಲಿಯಲ್ಲಿ ದುಬಾರಿ ತಪ್ಪು ಮಾಡಿದ್ದ ರಾಹುಲ್

ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿಯುವ ಮೊದಲು ಮತ್ತು ತಂಡಕ್ಕೆ ಹಿಂದಿರುಗಿದ ನಂತರ, ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಯ್ಕೆಯಾಗಿ ಟೀಂ ಇಂಡಿಯಾದಲ್ಲಿದ್ದಾರೆ. ಹೀಗಾಗಿ ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ಆದರೆ ಇಂದೋರ್‌ನಲ್ಲಿ ಮಾತ್ರ ರಾಹುಲ್ ವಿಕೆಟ್‌ಕೀಪಿಂಗ್ ಅನ್ನು ಇಶಾನ್ ಕಿಶನ್​ಗೆ ಬಿಟ್ಟುಕೊಡಬೇಕಾಯಿತು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಮೊಹಾಲಿಯಲ್ಲಿ ರಾಹುಲ್ ಮಾಡಿದ ಅನೇಕ ತಪ್ಪುಗಳೇ ಇದಕ್ಕೆ ಪ್ರಮುಖ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಾಸ್ತವವಾಗಿ, ಮೊಹಾಲಿಯಲ್ಲಿ ರಾಹುಲ್ ಬ್ಯಾಟ್‌ ಅರ್ಧಶತಕದ ಇನ್ನಿಂಗ್ಸ್ ಆಡಿತ್ತು. ಆದರೆ ಅದಕ್ಕೂ ಮೊದಲು ರಾಹುಲ್ ವಿಕೆಟ್ ಹಿಂದೆ ಶೋಚನೀಯವಾಗಿ ವಿಫಲವಾಗಿದ್ದರು. ಒಂದು ಕ್ಯಾಚ್ ಮತ್ತು ಒಂದು ರನ್ ಔಟ್ ಬಿಟ್ಟುಕೊಟ್ಟಿದ್ದಲ್ಲದೆ, ರಾಹುಲ್ ತಮ್ಮ ಕೈಗೆ ನೇರವಾಗಿ ಬಂದ ಚೆಂಡುಗಳನ್ನು ಅನೇಕ ಬಾರಿ ಕ್ಯಾಚ್ ಮಾಡಲಿಲ್ಲ. ಇದರಿಂದಾಗಿ ಬೈ ಮೂಲಕ ಕೆಲವು ರನ್​ಗಳು ಆಸೀಸ್ ಪಾಲಾದವು. ಹೀಗಾಗಿ ಆ ಪಂದ್ಯದಲ್ಲಿ ರಾಹುಲ್ ಅವರ ಕಳಪೆ ಕೀಪಿಂಗ್ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಹೀಗಾಗಿ ಇಶಾನ್‌ಗೆ ಇಂದೋರ್‌ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನೀಡಲಾಯಿತು.

ಅದ್ಭುತ ಫಾರ್ಮ್​ನಲ್ಲಿರುವ ರಾಹುಲ್

ಕೀಪಿಂಗ್ ಹೊರತುಪಡಿಸಿದರೆ, ರಾಹುಲ್ ಬ್ಯಾಟಿಂಗ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಇನ್ನು ಈ ಪಂದ್ಯದಲ್ಲಿ ಕ್ರೀಸ್​ಗೆ ಬಂದ ತಕ್ಷಣ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಾಹುಲ್, ಇದಾದ ಬಳಿಕವೂ ಇನ್ನೂ ಕೆಲವು ಉತ್ತಮ ಹೊಡೆತಗಳನ್ನು ಬಾರಿಸಿ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ರಾಹುಲ್ 38 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 52 ರನ್‌ಗಳನ್ನು ಕಲೆಹಾಕಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:14 am, Mon, 25 September 23

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ