ವಿಕೆಟ್ ಕೀಪಿಂಗ್ ಮರೆತ್ರಾ ಕೆಎಲ್ ರಾಹುಲ್? ಟೀಂ ಇಂಡಿಯಾ ನಾಯಕನ ಕಳಪೆ ಕೀಪಿಂಗ್ಗೆ ಫ್ಯಾನ್ಸ್ ಬೇಸರ
KL Rahul: ಈ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಕೆಟ್ನ ಹಿಂದೆ ಅನೇಕ ತಪ್ಪುಗಳನ್ನು ಮಾಡಿದರು. ಅದರಲ್ಲೂ ಅತ್ಯಂತ ಆಶ್ಚರ್ಯಕರವಾದ ಸಂಗತಿಯೆಂದರೆ ಸುಲಭದ ರನೌಟ್ ಅನ್ನು ರಾಹುಲ್ ತಪ್ಪಿಸಿದ್ದು. ಇದರಿಂದಾಗಿ ಆಸೀಸ್ ತಂಡದ ಪ್ರಮುಖ ಬ್ಯಾಟರ್ ಮಾರ್ನಸ್ ಲಬುಶೇನ್ ಆರಂಭದಲ್ಲೇ ಔಟಾಗುವುದರಿಂದ ಬಚಾವ್ ಆದರು.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (India vs Australia) ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 276 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ 5 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಮುಟ್ಟಿತು. ವಿಶ್ವಕಪ್ಗೂ (ODI World cup 2023) ಮುನ್ನ ಟೀಂ ಇಂಡಿಯಾದ ಈ ಗೆಲುವಿನ ಸರಣಿ ತಂಡದ ಆತ್ಮಸ್ಥೈರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಆದರೆ ಇದೆಲ್ಲದರ ಹೊರತಾಗಿ ತಂಡಕ್ಕೆ ಕಳಪೆ ಫಿಲ್ಡಿಂಗ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳಪೆ ಫಿಲ್ಡಿಂಗ್ ಟೀಂ ಇಂಡಿಯಾವನ್ನು (Team India) ಬಹಳ ಹಿಂದಿನಿಂದಲೂ ಕಾಡುತ್ತಿರುವ ಸಮಸ್ಯೆ ಎಂದು ಹೇಳಿದರೆ ತಪ್ಪಿಲ್ಲ. ಆದರೆ ಅದ್ಯಾಕೋ ಏನೋ ಏಷ್ಯಾಕಪ್ (Asia Cup 2023) ಆರಂಭವಾದಾಗಿನಿಂದ ಈ ಸಮಸ್ಯೆ ಸಾಕಷ್ಟು ಉಲ್ಬಣಗೊಂಡಿದೆ. ಈ ಕಾಂಟಿನೆಂಟಲ್ ಈವೆಂಟ್ನಲ್ಲಿ ಭಾರತ ಚಾಂಪಿಯನ್ ಏನೋ ಆಯಿತು. ಆದರೆ ಇಡೀ ಪಂದ್ಯಾವಳಿಯಲ್ಲಿ ಭಾರತ ಫಿಲ್ಡಿಂಗ್ ತೀರ ಸಪ್ಪೆಯಾಗಿತ್ತು. ಹೀಗಾಗಿ ತಂಡ 10ಕ್ಕೂ ಅಧಿಕ ಕ್ಯಾಚ್ಗಳನ್ನು ಕೈಚೆಲ್ಲಿತ್ತು. ಇದೀಗ ಈ ಸಮಸ್ಯೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಮುಂದುವರೆದಿದೆ. ಅದರಲ್ಲೂ ಈ ಸರಣಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿರುವ ಕೆಎಲ್ ರಾಹುಲ್ (KL Rahul) ಅವರ ಕಳಪೆ ಕೀಪಿಂಗ್ ಬಗ್ಗೆ ಈಗ ಎಲ್ಲೆಡೆ ಪ್ರಶ್ನೆಗಳು ಎದ್ದಿವೆ.
ಏಕೆಂದರೆ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಕೆಟ್ನ ಹಿಂದೆ ಅನೇಕ ತಪ್ಪುಗಳನ್ನು ಮಾಡಿದರು. ಅದರಲ್ಲೂ ಅತ್ಯಂತ ಆಶ್ಚರ್ಯಕರವಾದ ಸಂಗತಿಯೆಂದರೆ ಸುಲಭದ ರನೌಟ್ ಅನ್ನು ರಾಹುಲ್ ತಪ್ಪಿಸಿದ್ದು. ಇದರಿಂದಾಗಿ ಆಸೀಸ್ ತಂಡದ ಪ್ರಮುಖ ಬ್ಯಾಟರ್ ಮಾರ್ನಸ್ ಲಬುಶೇನ್ ಆರಂಭದಲ್ಲೇ ಔಟಾಗುವುದರಿಂದ ಬಚಾವ್ ಆದರು. ಆದರೆ ಆ ಬಳಿಕ ಲಬುಶೇನ್ ಅವರನ್ನು ಪೆವಿಲಿಯನ್ಗಟ್ಟುವಲ್ಲಿ ಟೀಂ ಇಂಡಿಯಾ ವೇಗಿಗಳು ಯಶಸ್ವಿಯಾದರಾದರೂ, ರಾಹುಲ್ ತಮ್ಮ ಕಳಪೆ ಕೀಪಿಂಗ್ಗಾಗಿ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದ್ದಾರೆ.
"Marnus Labuschagne had bought his train ticket back to the pavilion!"
A horrendous fumble from KL Rahul adds to the lengthy list of fielding errors from India today
FOLLOW #INDvAUS LIVE: https://t.co/ndorxcIK9E pic.twitter.com/NBB6GVlinn
— 🏏Flashscore Cricket Commentators (@FlashCric) September 22, 2023
ಕಿಂಗ್ ಕೊಹ್ಲಿಯ 12 ವರ್ಷದ ಹಿಂದಿನ ದಾಖಲೆಯನ್ನು ಸರಿಗಟ್ಟಿದ ಕೆಎಲ್ ರಾಹುಲ್..!
ಲಬುಶೇನ್ ಕ್ಯಾಚ್ ಮಿಸ್
ವಾಸ್ತವವಾಗಿ ಆಸ್ಟ್ರೇಲಿಯಾ ಇನಿಂಗ್ಸ್‌ನ 23ನೇ ಓವರ್‌ನ ಮೊದಲ ಎಸೆತದಲ್ಲಿ ದೊಡ್ಡ ಪ್ರಮಾದವೊಂದು ನಡೆಯಿತು. ರವೀಂದ್ರ ಜಡೇಜಾ ಅವರ ಎಸೆತದಲ್ಲಿ ಮಾರ್ನಸ್ ಲಬುಶೆನ್ ರನ್ ಗಳಿಸಲು ಪ್ರಯತ್ನಿಸಿದರು, ಆದರೆ ಅವರು ತಪ್ಪಿಸಿಕೊಂಡರು. ಈ ವೇಳೆ ಸೂರ್ಯಕುಮಾರ್ ಯಾದವ್ ಕವರ್‌ನಿಂದ ಕೀಪರ್ ಕಡೆಗೆ ಚೆಂಡನ್ನು ಎಸೆದರು. ಆದರೆ ಕೆಎಲ್ ರಾಹುಲ್ಗೆ ಆ ಥ್ರೋ ಅನ್ನು ಹಿಡಿಯಲು ಸಾಧ್ಯವಾಗದೆ ಸುಲಭದ ರನೌಟ್ ಅವಕಾಶವನ್ನು ಕಳೆದುಕೊಂಡರು.
Next Level Cricket ! From KL Rahul and Suryakumar Yadav #INDvsAUS pic.twitter.com/nCmEgUmNuo
— 🚩🚩🚩 (@jephshay) September 22, 2023
ಈ ಸಂದರ್ಭವನ್ನು ಹೊರತುಪಡಿಸಿ, ಕೆಎಲ್ ರಾಹುಲ್ ಈ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುವಾಗ ಹಲವು ತಪ್ಪುಗಳನ್ನು ಮಾಡಿದರು. ಈ ರನೌಟ್ ಮಾತ್ರವಲ್ಲದೆ ಅವರು ಇತರ ಹಲವು ಅವಕಾಶಗಳನ್ನು ಕಳೆದುಕೊಂಡರು. ಈ ಪಂದ್ಯದಲ್ಲಿ ನಾಯಕರಾಗಿದ್ದ ಕೆಎಲ್ ರಾಹುಲ್ ಅವರ ಸರಾಸರಿ ಕೀಪಿಂಗ್ ಬಗ್ಗೆ ಇದೀಗ ಸಾಕಷ್ಟು ಪ್ರಶ್ನೆಗಳು ಎದ್ದಿವೆ.
ಕ್ಯಾಚ್ ಕೈಬಿಟ್ಟ ರಾಹುಲ್
ಇದಾದ ನಂತರ 33ನೇ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಲಬುಶೇನ್ ನೀಡಿದ ಕ್ಯಾಚ್ ಅನ್ನು ಕೆಎಲ್ ರಾಹುಲ್ ಕೈಬಿಟ್ಟರು. ಆದರೆ, ಇದರ ಹೊರತಾಗಿಯೂ ಟೀಂ ಇಂಡಿಯಾ ಲಬುಶೇನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಯಿತು. ವಾಸ್ತವವಾಗಿ, ಅಶ್ವಿನ್ ಅವರ ನಾಲ್ಕನೇ ಎಸೆತದಲ್ಲಿ ಲಬುಶೇನ್ ರಿವರ್ಸ್ ಸ್ವೀಪ್ ಆಡಿದರು. ಚೆಂಡು ಅವರ ಗ್ಲೌಸ್‌ಗೆ ಬಡಿದು ರಾಹುಲ್ ಅವರ ಕೈಗೆ ಹೋಯಿತು. ಆದರೆ ರಾಹುಲ್ ಕ್ಯಾಚ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಚೆಂಡು ರಾಹುಲ್ ಅವರ ಕೈಗವಸುಗಳಿಂದ ಪುಟಿದು, ವಿಕೆಟ್‌ಗೆ ಬಡಿಯಿತು. ಈ ಸಮಯದಲ್ಲಿ ಲಬುಶೇನ್ ಅವರ ಕಾಲು ಕ್ರೀಸ್‌ನ ಹೊರಗೆ ಇದ್ದಿದ್ದರಿಂದ ಅವರು ಸ್ಟಂಪ್ ಔಟ್ ಆದರು.
But KL Rahul is in no mood to wear the keeping gloves today. Looks like someone forced him.#KLRahul #INDvsAUS #AUSvsIND #CricketTwitter pic.twitter.com/R4VbuHSE4H
— 𝘚𝘢𝘵𝘩𝘺𝘢 𝘚𝘩𝘢𝘳𝘰𝘯𝘪𝘴𝘵 (@Team_Sharon_) September 22, 2023
40ನೇ ಓವರ್ನಲ್ಲೂ ಇದೇ ಕಥೆ
ಆಸ್ಟ್ರೇಲಿಯಾ ಇನ್ನಿಂಗ್ಸ್ನ 40ನೇ ಓವರ್‌ನಲ್ಲಿ ಕ್ಯಾಮರೂನ್ ಗ್ರೀನ್ ವಿಕೆಟ್ ಕಳೆದುಕೊಂಡಿತು. ಇಲ್ಲಿ ವಿಚಿತ್ರವಾದ ಸಂಗತಿಯೆಂದರೆ ಕೆಎಲ್ ರಾಹುಲ್ ಚೆಂಡನ್ನು ಹಿಡಿಯದ ಕಾರಣ ಗ್ರೀನ್ ರನ್ ಔಟ್ ಆದರು. ಶಮಿ ಬೌಲ್ ಮಾಡಿದ ಚೆಂಡನ್ನು ಗ್ರೀಲ್ಗೆ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಕೆಎಲ್ ರಾಹುಲ್ ಬಳಿ ಹೋಯಿತು. ಆದರೆ ರಾಹುಲ್ಗೆ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಗ್ರೀನ್ ರನ್ಗಾಗಿ ಓಡಿದರು. ನಂತರ ರುತುರಾಜ್ ಗಾಯಕ್ವಾಡ್ ಚೆಂಡನ್ನು ತ್ವರಿತವಾಗಿ ನಾನ್ ಸ್ಟ್ರೈಕರ್ ಎಂಡ್‌ಗೆ ಎಸೆದರು. ಈ ವೇಳೆ ಚೆಂಡನ್ನು ಹಿಡಿದ ಸೂರ್ಯಕುಮಾರ್ ಯಾದವ್ ಗ್ರೀನ್ ಅವರನ್ನು ಅದ್ಭುತ ರೀತಿಯಲ್ಲಿ ರನ್ ಔಟ್ ಮಾಡಿದರು.
ಇದೀಗ ರಾಹುಲ್ ಅವರ ಸರಾಸರಿ ಕೀಪಿಂಗ್ ಬಗ್ಗೆ ಬಿಸಿಸಿಐ ಎಷ್ಟು ದಿನ ಮೌನವಾಗಿರುತ್ತದೆ ಎಂದು ನೆಟ್ಟಿಗರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಇದು ಟಿ20 ಅಲ್ಲ ಆದರೆ ಏಕದಿನದಲ್ಲಿ ಸ್ಪೆಷಲಿಸ್ಟ್ ಕೀಪರ್ ಅಗತ್ಯವಿದೆ. ತಂಡವು ಇಶಾನ್ ಕಿಶನ್ ರೂಪದಲ್ಲಿ ಸ್ಪೆಷಲಿಸ್ಟ್ ಕೀಪರ್ ಅನ್ನು ಹೊಂದಿದ್ದರೂ ರಾಹುಲ್ಗೆ ಏಕೆ ಕೀಪಿಂಗ್ ಮಾಡಲು ಅವಕಾಶ ನೀಡಲಾಗುತ್ತಿದೆ ಎಂಬ ಪ್ರಶ್ನೆಯನ್ನು ಟೀಂ ಇಂಡಿಯಾ ಅಭಿಮಾನಿಗಳು ಕೇಳಲಾರಂಭಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:36 am, Sat, 23 September 23