ಏಕದಿನ ವಿಶ್ವಕಪ್‌ನ ಬಹುಮಾನದ ಮೊತ್ತ ಪ್ರಕಟ; ಚಾಂಪಿಯನ್ ತಂಡಕ್ಕೆ ಸಿಗಲಿದೆ 33 ಕೋಟಿ ರೂ..!
ICC World Cup 2023 Prize Money: ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಅದಕ್ಕೂ ಮುನ್ನ ಐಸಿಸಿ ಈ ವಿಶ್ವಕಪ್‌ನ ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಈ ಬಗ್ಗೆ ಐಸಿಸಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. 2019 ರ ವಿಶ್ವಕಪ್ ಬಹುಮಾನದ ಮೊತ್ತವನ್ನೇ ಈ ವಿಶ್ವಕಪ್ನಲ್ಲೂ ಮೀಸಲಿರಿಸಲಾಗಿದೆ. ಈ ವಿಶ್ವಕಪ್‌ನ ಒಟ್ಟಾರೆ ಬಹುಮಾನದ ಗಾತ್ರ ಸರಿಸುಮಾರು 83 ಕೋಟಿ ರೂ. ಆಗಿದೆ.
ಬರೋಬ್ಬರಿ 12 ವರ್ಷಗಳ ನಂತರ ಭಾರತದಲ್ಲಿ ಏಕದಿನ ವಿಶ್ವಕಪ್ (ICC World Cup 2023) ಅನ್ನು ಆಯೋಜಿಸಲಾಗಿದೆ. ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಆಡಲಿವೆ. ಅಕ್ಟೋಬರ್ 5 ರಿಂದ ವಿಶ್ವಕಪ್ ಆರಂಭವಾಗಲಿದ್ದು, ನವೆಂಬರ್ 19 ರಂದು ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಮತ್ತು ಅಂತಿಮ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium in Ahmedabad) ನಡೆಯುತ್ತಿರುವುದು ವಿಶೇಷವಾಗಿದೆ. ಒಟ್ಟು 45 ದಿನಗಳ ಕಾಲ ಈ ವಿಶ್ವಕಪ್ ನಡೆಯಲ್ಲಿದ್ದು, ಈ 45 ದಿನಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಅದಕ್ಕೂ ಮುನ್ನ ಐಸಿಸಿ ಈ ವಿಶ್ವಕಪ್‌ನ ಬಹುಮಾನದ (ICC World Cup 2023 Prize Money) ಮೊತ್ತವನ್ನು ಪ್ರಕಟಿಸಿದೆ. ಈ ಬಗ್ಗೆ ಐಸಿಸಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
2019 ರ ವಿಶ್ವಕಪ್ ಬಹುಮಾನದ ಮೊತ್ತವನ್ನೇ ಈ ವಿಶ್ವಕಪ್ನಲ್ಲೂ ಮೀಸಲಿರಿಸಲಾಗಿದೆ. ಈ ವಿಶ್ವಕಪ್‌ನ ಒಟ್ಟಾರೆ ಬಹುಮಾನದ ಗಾತ್ರ ಸರಿಸುಮಾರು 83 ಕೋಟಿ ರೂ. ಆಗಿದೆ. ಇದರಲ್ಲಿ ವಿಜೇತ ತಂಡಕ್ಕೆ 33,18 ಕೋಟಿ ರೂ. ಬಹುಮಾನವಾಗಿ ಸಿಗಲಿದೆ. ಹಾಗೆಯೇ ಫೈನಲ್ನಲ್ಲಿ ಸೋತ ತಂಡಕ್ಕೆ ಅಂದರೆ ರನ್ನರ್ ಅಪ್ ತಂಡಕ್ಕೆ 16.59 ಕೋಟಿ ರೂ. ಬಹಮಾನ ಸಿಗಲಿದೆ. ಇದಲ್ಲದೆ ಗುಂಪು ಹಂತದಲ್ಲಿ ಪ್ರತಿಯೊಂದು ಪಂದ್ಯದ ಗೆಲುವಿಗೆ 33.18 ಲಕ್ಷ ರೂ. ಬಹುಮಾನವಾಗಿ ಸಿಗಲಿದೆ. ಇನ್ನುಳಿದಂತೆ ನಾಕೌಟ್ ಹಂತವನ್ನು ತಲುಪಲು ವಿಫಲವಾದ ಪ್ರತಿಯೊಂದು ತಂಡಗಳಿಗೂ ತಲಾ 82.94 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
The total prize pool for #CWC23, including the cash prize for the winners, has been announced 💰
Details 👇
— ICC (@ICC) September 22, 2023
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ಆವೃತ್ತಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದೆ. ಇನ್ನು ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿರುವ ಭಾರತಕ್ಕೆ ದಶಕದ ಬರವನ್ನು ಕೊನೆಗೊಳಿಸಲು ಈ ವಿಶ್ವಕಪ್ ಉತ್ತಮ ಅವಕಾಶವಾಗಿದೆ. ಏಕೆಂದರೆ ಮೇಲೆ ಹೇಳಿದಂತೆ ಈ ವಿಶ್ವಕಪ್ ಭಾರತದಲ್ಲೇ ನಡೆಯುತ್ತಿರುವುದರಿಂದ ರೋಹಿತ್ ಪಡೆಗೆ ಇತಿಹಾಸ ಸೃಷ್ಟಿಸುವ ಅವಕಾಶವಿದೆ. ಭಾರತವು ಕೊನೆಯ ಬಾರಿಗೆ 2013 ರಲ್ಲಿ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಗೆದ್ದಿತ್ತು. ಆ ನಂತರ 2013ರಲ್ಲಿ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿದ್ದನ್ನು ಬಿಟ್ಟರೆ, ಭಾರತ ಅಲ್ಲಿಂದ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.
ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಆ ಬಳಿಕ ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Fri, 22 September 23