ಆ ಬಳಿಕ ಅರ್ಧಶತಕ ಸಿಡಿಸಿದ್ದ ವಾರ್ನರ್ರನ್ನು ಜಡೇಜಾ ಬೇಟೆಯಾಡಿದರೆ, ಬಿಗ್ ಸ್ಕೋರ್‌ಗಾಗಿ ಎದುರು ನೋಡುತ್ತಿದ್ದ ಸ್ಟೀವ್ ಸ್ಮಿತ್ ಅವರ ವಿಕೆಟ್ ಉರುಳಿಸುವಲ್ಲಿ ಶಮಿ ಯಶಸ್ವಿಯಾದರು. ನಂತರ ಶಮಿ, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್ ಮತ್ತು ಸೀನ್ ಅಬಾಟ್‌ರ ವಿಕೆಟ್ ಉರುಳಿಸಿ ಐದು ವಿಕೆಟ್ ಪಡೆದ ದಾಖಲೆ ಬರೆದರು.