- Kannada News Photo gallery Cricket photos India Second Team In Men's Cricket History To Be Ranked No. 1
ನಂಬರ್ 1: ಕ್ರಿಕೆಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ 2ನೇ ತಂಡ ಭಾರತ
Team India: ಟೆಸ್ಟ್ ಹಾಗೂ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಟೀಮ್ ಇಂಡಿಯಾ ಏಕದಿನ ತಂಡಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡವು ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
Updated on:Sep 23, 2023 | 7:32 PM

ಟೆಸ್ಟ್...ಏಕದಿನ...ಟಿ20...ಐಸಿಸಿಯ ಮೂರು ಸ್ವರೂಪ ಕ್ರಿಕೆಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಟೀಮ್ ಇಂಡಿಯಾ (Team India) ಹೊಸ ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಸಾಧನೆಗೈದ ವಿಶ್ವದ 2ನೇ ತಂಡ ಎನಿಸಿಕೊಂಡಿದೆ.

ಅಂದರೆ ಇದಕ್ಕೂ ಮುನ್ನ ಭಾರತ ತಂಡವು ಸೆಪ್ಟೆಂಬರ್ 2023 ರಲ್ಲಿ ಮೂರು ಸ್ವರೂಪಗಳ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತ್ತು. ಇದೀಗ ಮತ್ತೊಮ್ಮೆ ಈ ಸಾಧನೆಯನ್ನು ಪುನರಾವರ್ತಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.

ಈ ಮೂಲಕ ಮೂರು ಸ್ವರೂಪಗಳಲ್ಲೂ ಅಗ್ರ ಶ್ರೇಯಾಂಕ ಅಲಂಕರಿಸಿದ 2ನೇ ತಂಡ ಎಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಇಂತಹದೊಂದು ದಾಖಲೆಯನ್ನು ಸೌತ್ ಆಫ್ರಿಕಾ ನಿರ್ಮಿಸಿತ್ತು.

2012 ರಲ್ಲಿ ಗ್ರೇಮ್ ಸ್ಮಿತ್ ನಾಯಕತ್ವದ ಸೌತ್ ಆಫ್ರಿಕಾ ತಂಡ ಟೆಸ್ಟ್, ಟಿ20 ಹಾಗೂ ಏಕದಿನ ಕ್ರಿಕೆಟ್ನಲ್ಲಿ ಅಗ್ರಸ್ಥಾನ ಅಲಂಕರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

ಇದೀಗ ಮೂರು ಸ್ವರೂಪಗಳಲ್ಲೂ ನಂಬರ್ 1 ತಂಡವಾಗಿ ಹೊರಹೊಮ್ಮುವ ಮೂಲಕ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಸಾಧನೆಯನ್ನು ಸರಿಗಟ್ಟಿದೆ. ಅಷ್ಟೇ ಅಲ್ಲದೆ ಈ ಸಾಧನೆಯನ್ನು 2 ಬಾರಿ ಮಾಡಿದ ವಿಶ್ವದ ಏಕೈಕ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ.
Published On - 3:59 pm, Sat, 23 September 23



















