AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬರ್ 1: ಕ್ರಿಕೆಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ 2ನೇ ತಂಡ ಭಾರತ

Team India: ಟೆಸ್ಟ್ ಹಾಗೂ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಟೀಮ್ ಇಂಡಿಯಾ ಏಕದಿನ ತಂಡಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡವು ಏಕದಿನ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

TV9 Web
| Updated By: ಝಾಹಿರ್ ಯೂಸುಫ್

Updated on:Sep 23, 2023 | 7:32 PM

ಟೆಸ್ಟ್​...ಏಕದಿನ...ಟಿ20...ಐಸಿಸಿಯ ಮೂರು ಸ್ವರೂಪ ಕ್ರಿಕೆಟ್​ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಟೀಮ್ ಇಂಡಿಯಾ (Team India) ಹೊಸ ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಸಾಧನೆಗೈದ ವಿಶ್ವದ 2ನೇ ತಂಡ ಎನಿಸಿಕೊಂಡಿದೆ.

1 / 5
ಅಂದರೆ ಇದಕ್ಕೂ ಮುನ್ನ ಭಾರತ ತಂಡವು ಸೆಪ್ಟೆಂಬರ್ 2023 ರಲ್ಲಿ ಮೂರು ಸ್ವರೂಪಗಳ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತ್ತು. ಇದೀಗ ಮತ್ತೊಮ್ಮೆ ಈ ಸಾಧನೆಯನ್ನು ಪುನರಾವರ್ತಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.

2 / 5
ಈ ಮೂಲಕ ಮೂರು ಸ್ವರೂಪಗಳಲ್ಲೂ ಅಗ್ರ ಶ್ರೇಯಾಂಕ ಅಲಂಕರಿಸಿದ 2ನೇ ತಂಡ ಎಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಇಂತಹದೊಂದು ದಾಖಲೆಯನ್ನು ಸೌತ್ ಆಫ್ರಿಕಾ ನಿರ್ಮಿಸಿತ್ತು.

3 / 5
2012 ರಲ್ಲಿ ಗ್ರೇಮ್ ಸ್ಮಿತ್ ನಾಯಕತ್ವದ ಸೌತ್ ಆಫ್ರಿಕಾ ತಂಡ ಟೆಸ್ಟ್​, ಟಿ20 ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಅಗ್ರಸ್ಥಾನ ಅಲಂಕರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

4 / 5
ಇದೀಗ ಮೂರು ಸ್ವರೂಪಗಳಲ್ಲೂ ನಂಬರ್ 1 ತಂಡವಾಗಿ ಹೊರಹೊಮ್ಮುವ ಮೂಲಕ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಸಾಧನೆಯನ್ನು ಸರಿಗಟ್ಟಿದೆ. ಅಷ್ಟೇ ಅಲ್ಲದೆ ಈ ಸಾಧನೆಯನ್ನು 2 ಬಾರಿ ಮಾಡಿದ ವಿಶ್ವದ ಏಕೈಕ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ.

5 / 5

Published On - 3:59 pm, Sat, 23 September 23

Follow us