ಕ್ರಿಕೆಟ್‌ನ ಕಾರಿಡಾರ್‌ನಲ್ಲಿ ಆ ಆಟಗಾರ ಸ್ಪಿನ್ ಆಲ್‌ರೌಂಡರ್ ಎಂದು ಗುರುತಿಸಿಕೊಂಡಿದ್ದ. ಆತ 14 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗ, ಭಾರತೀಯ ಕ್ರಿಕೆಟ್ ತನ್ನ ಮುಂದಿನ ಅನಿಲ್ ಕುಂಬ್ಳೆಯನ್ನು ಕಂಡುಕೊಂಡಿದೆ ಎಂದು ಜನರು ಹೇಳಿದ್ದೂ ಉಂಟು.
ಹೌದು, ನಾವು ಆಲ್ರೌಂಡರ್ ಪಿಯೂಷ್ ಚಾವ್ಲಾ ಅವರ ಬಗ್ಗೆ ಮಾತನಾಡುತ್ತಿದ್ದೇವೆ, ಚಾವ್ಲಾ ಟೀಮ್ ಇಂಡಿಯಾ ಪರ ಎದುರಾಳಿ ತಂಡದ ಆಟಗಾರರಿಗೆ ತಮ್ಮ ಗೂಗ್ಲಿಯಿಂದ ಅಥವಾ ಕೆಲವೊಮ್ಮೆ ಅವರ ಬ್ಯಾಟಿಂಗ್ ಮೂಲಕ ಉತ್ತರ ನೀಡುತ್ತಿದ್ದರು. 32 ವರ್ಷಗಳ ಹಿಂದೆ ಉತ್ತರ ಪ್ರದೇಶದ ಅಲಿಗಢದಲ್ಲಿ ಜನಿಸಿದ ಭಾರತೀಯ ಕ್ರಿಕೆಟಿಗ ಪಿಯೂಷ್ ಚಾವ್ಲಾ ಅವರ ಜನ್ಮದಿನ ಇಂದು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 6 ಶತಕ ಮತ್ತು 445 ವಿಕೆಟ್‌ಗಳನ್ನು ಪಡೆದಿರುವ ಪಿಯೂಷ್ ಚಾವ್ಲಾ, ಮಾರ್ಚ್ 9, 2006 ರಂದು ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಕೇವಲ 17 ವರ್ಷ ವಯಸ್ಸಿನ ಚಾವ್ಲಾ, ಸಚಿನ್ ತೆಂಡೂಲ್ಕರ್ ನಂತರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎರಡನೇ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
4 ವಿಶ್ವ ಕಪ್ ಆಡಿರುವ ಚಾವ್ಲಾ
ಕೇವಲ 15 ವರ್ಷದವನಿದ್ದಾಗಿನಿಂದ ಭಾರತದ ಅಂಡರ್ -19 ತಂಡದ ಭಾಗವಾಗಿದ್ದ ಚಾವ್ಲಾ 2006 ರಲ್ಲಿ ಮೊದಲ ಬಾರಿಗೆ 19 ವರ್ಷದೊಳಗಿನವರ ವಿಶ್ವ ಕಪ್ ಆಡಿದ್ದರು. ಈ ವಿಶ್ವ ಕಪ್‌ನಲ್ಲಿ 13 ವಿಕೆಟ್ ಪಡೆದ ಅತ್ಯುನ್ನತ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರ ನಂತರ, 2007 ರಲ್ಲಿ ಟಿ 20 ವಿಶ್ವ ಕಪ್‌ನ ಮೊದಲ ಬಾರಿಗೆ ಗೆದ್ದ ಭಾರತ ತಂಡದ ಭಾಗವಾಗಿದ್ದರು. ನಂತರ 2010 ರ ವಿಶ್ವ ಟಿ 20 ಮತ್ತು 2011 ರ ಏಕದಿನ ವಿಶ್ವ ಕಪ್‌ನಲ್ಲಿ ಭಾರತ ಪರ ಆಡಿದ್ದರು.
9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಶತಕ ಗಳಿಸಿದ್ದ ಚಾವ್ಲಾ..
ಭಾರತಕ್ಕಾಗಿ 3 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳನ್ನು ಆಡಿದ ಪಿಯೂಷ್ ಚಾವ್ಲಾ ಅವರು 2009 ರಲ್ಲಿ ಇಂಗ್ಲೆಂಡ್‌ನ ಕೌಂಟಿ ತಂಡ ಸಸೆಕ್ಸ್ಗೆ ಸೇರ್ಪಡೆಗೊಂಡಿದ್ದರು. ಆದರೆ ಚಾವ್ಲಾ ಪಾಕಿಸ್ತಾನದ ಸ್ಪಿನ್ನರ್ ಯಾಸಿರ್ ಅರಾಫತ್‌ಗೆ ಬ್ಯಾಕ್ ಅಪ್ ಆಗಿ ತೆಗೆದುಕೊಳ್ಳಲ್ಪಟ್ಟಿದ್ದರಿಂದ ಈ ಒಪ್ಪಂದ ಕೇವಲ 1 ತಿಂಗಳಿಗೆ ಮಾತ್ರ ಸೀಮಿತವಾಗಿತ್ತು.
ನಂತರದ ದಿನಗಳಲ್ಲಿ ಸೋಮರ್‌ಸೆಟ್ ತಂಡ ಸೇರಿಕೊಂಡ ಚಾವ್ಲಾ 2013ರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಅದ್ಭುತ ಶತಕ ಗಳಿಸಿದರು. ಮಿಡ್ಲ್‌ಸೆಕ್ಸ್ ವಿರುದ್ಧದ ಆ ಪಂದ್ಯದಲ್ಲಿ 140 ಎಸೆತಗಳನ್ನು ಎದುರಿಸಿದ ಚಾವ್ಲಾ 112 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಪಿಯೂಷ್ ಚಾವ್ಲಾ ಐಪಿಎಲ್‌ನ ಸ್ಟಾರ್ ಪ್ಲೇಯರ್. 2008 ರಿಂದ 2013 ರವರೆಗೆ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಭಾಗವಾಗಿದ್ದರು. ನಂತರ ಐಪಿಎಲ್ 7 ರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪ್ರಾಂಚೈಸಿಗೆ 4 ಕೋಟಿ 75 ಲಕ್ಷಕ್ಕೆ ಸೇಲ್ ಆಗಿದ್ದರು.
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಚಾವ್ಲಾ ಐಪಿಎಲ್‌ನಲ್ಲಿ 100 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಹರ್ಭಜನ್, ಮಾಲಿಂಗ ಮತ್ತು ಅಮಿತ್ ಮಿಶ್ರಾ ನಂತರ ಈ ಸಾಧನೆ ಮಾಡಿದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲೇ ಶೂನ್ಯ ಸುತ್ತಿದ್ದ ಧೋನಿ.. ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿ ಇಂದಿಗೆ 16 ವರ್ಷ
ಕೊಹ್ಲಿಗೆ ನ್ಯಾಯ.. ನಟರಾಜನ್ಗೆ ಅನ್ಯಾಯ.. BCCI ವಿರುದ್ಧ ಕಿಡಿಕಾರಿದ ಸುನಿಲ್ ಗಾವಸ್ಕರ್
Published On - 11:27 am, Thu, 24 December 20