AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಯಲ್ಲಿ ಬೆಣ್ಣೆ ಇಟ್ಟುಕೊಂಡೆ ಮೈದಾನಕ್ಕಿಳಿವ ಭಾರತೀಯ ಆಟಗಾರರು, ಕಳಪೆ ಫೀಲ್ಡಿಂಗ್​ ಪಂದ್ಯದ ಸೋಲಿಗೆ ಕಾರಣವಾಗುತ್ತಿದೆಯಾ?

2019 ರ ವಿಶ್ವಕಪ್‌ನಿಂದ ಇಲ್ಲಿಯವರೆಗೆ ಭಾರತ 43 ಪಂದ್ಯಗಳಲ್ಲಿ ಎದುರಾಳಿ ತಂಡಗಳಿಗೆ 70 ಬಾರಿ ಜೀವದಾನ ನೀಡಿದೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಚ್ಚು 14 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಭಾರತೀಯ ಕ್ರಿಕೆಟಿಗರು ಕ್ಯಾಚ್​ ಬಿಡುವ ಚಾಳಿಗೆ ದೊಡ್ಡ ಇತಿಹಾಸವೇ ಇದೆ..

ಕೈಯಲ್ಲಿ ಬೆಣ್ಣೆ ಇಟ್ಟುಕೊಂಡೆ ಮೈದಾನಕ್ಕಿಳಿವ ಭಾರತೀಯ ಆಟಗಾರರು, ಕಳಪೆ ಫೀಲ್ಡಿಂಗ್​ ಪಂದ್ಯದ ಸೋಲಿಗೆ ಕಾರಣವಾಗುತ್ತಿದೆಯಾ?
ಪೃಥ್ವಿಶಂಕರ
|

Updated on:Dec 24, 2020 | 1:44 PM

Share

ಹಾಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಕ್ರಿಕೆಟ್ ತಂಡ ಮೂರು ಏಕದಿನ, ಮೂರು ಟಿ 20 ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದೆ. ಈ ಏಳೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ತನ್ನ ಎಡವಟ್ಟುಗಳಿಂದ ಅನೇಕ ಪಂದ್ಯಗಳಲ್ಲಿ ಸೋಲಬೇಕಾಯಿತು. ಇದಕೆಲ್ಲಾ ಪ್ರಮುಖ ಕಾರಣವೆಂದರೆ ಟೀಮ್ ಇಂಡಿಯಾ ಮೈದಾನದಲ್ಲಿ ಕೈಚೆಲ್ಲುತ್ತಿರುವ ಕ್ಯಾಚ್​ಗಳು.

ಹೌದು..ಟೀಮ್ ಇಂಡಿಯಾವನ್ನು ವಿಶ್ವದ ಅತ್ಯುತ್ತಮ ಫೀಲ್ಡಿಂಗ್ ತಂಡ ಎಂದು ಪರಿಗಣಿಸಲಾಗಿದೆ. ಆದರೆ ಕ್ಯಾಚ್ ಹಿಡಿಯುವಲ್ಲಿ ತಂಡ ಹಿಂದೆ ಉಳಿದಿದ್ದು ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಅದ್ಭುತ ಫೀಲ್ಡರ್‌ಗಳು ಸಹ ಕ್ಯಾಚ್‌ಗಳನ್ನು ಕೈಬಿಟ್ಟರು.

ಅವರಲ್ಲಿ ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಇದ್ದಾರೆ ಎಂಬುದು ತಂಡದ ದುರಂತ. ಏಕ ದಿನ ಮತ್ತು ಟಿ 20 ಪಂದ್ಯಗಳ ನಂತರ ಈ ರೋಗ ಟೀಮ್ ಇಂಡಿಯಾವನ್ನ ಬೆಂಬಿಡದಂತೆ ಕಾಡುತ್ತಿದೆ.

ಮೊದಲ ಟೆಸ್ಟ್‌ನಲ್ಲಿ ಭಾರತ ಐದು ಕ್ಯಾಚ್‌ಗಳನ್ನು ಕೈಬಿಟ್ಟಿತು.. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಐದು ಕ್ಯಾಚ್‌ಗಳನ್ನು ಕೈಚೆಲ್ಲಿತು. ಜಸ್ಪ್ರಿತ್ ಬುಮ್ರಾ, ಪೃಥ್ವಿ ಶಾ ಸುಲಭದ ತುತ್ತಾಗಬಹುದಾಗಿದ್ದ ಕ್ಯಾಚ್‌ಗಳನ್ನ ಕೈಚೆಲ್ಲಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಎಲ್ಲಾ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದರೆ, ಆಸ್ಟ್ರೇಲಿಯಾದ ಇನ್ನಿಂಗ್ಸ್ 100 ರನ್‌ಗಳನ್ನು ಸಹ ತಲುಪುತ್ತಿರಲಿಲ್ಲ! ಆದರೆ ಇದು ನಡೆಯಲಿಲ್ಲ ಪರಿಣಾಮವಾಗಿ ಭಾರತವು ಮೊದಲ ಇನ್ನಿಂಗ್ಸ್ ಆಧಾರದ ಮೇಲೆ ತೀರಾ ಕಡಿಮೆ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ 36 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾಗಿ ಪಂದ್ಯ ಸೋಲಬೇಕಾಯಿತು.

4 ವಿದೇಶಿ ಪ್ರವಾಸದಲ್ಲಿ 52 ಕ್ಯಾಚ್‌ಗಳನ್ನ ಕೈಚೆಲ್ಲಿದೆ.. ಅಡಿಲೇಡ್ ಟೆಸ್ಟ್​ಗೂ ಮೊದಲು ಭಾರತ ತಂಡ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಲ್ಲಿ 19 ಕ್ಯಾಚ್​ಗಳನ್ನು ಕೈಚೆಲ್ಲಿದೆ. ಅಂದರೆ ಭಾರತೀಯ ಫೀಲ್ಡರ್‌ಗಳು ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ಮೈದಾನಕ್ಕಿಳಿದ ಮೊದಲ ಸರಣಿ ಇದೇನಲ್ಲ. ಬದಲಿಗೆ 2020 ರ ಆರಂಭದಲ್ಲಿ, ಭಾರತ ತಂಡ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಾಗ 12 ಕ್ಯಾಚ್‌ಗಳನ್ನು ಬಿಟ್ಟಿತ್ತು.

ಅದೇ ಸಮಯದಲ್ಲಿ ಅಂದರೆ 2018 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್​ಗಳಿಂದ ಒಟ್ಟು 10 ಕ್ಯಾಚ್ಗಳನ್ನು ಮತ್ತು 2017-18ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಟೆಸ್ಟ್ಗಳಲ್ಲಿ ಆರು ಕ್ಯಾಚ್ಗಳನ್ನು ಕೈಚೆಲ್ಲಿತ್ತು. ಅಂದರೆ, ಭಾರತದ ಆಟಗಾರರು ಇದುವರೆಗೆ ಈ ನಾಲ್ಕು ದೇಶಗಳಲ್ಲಿ 52 ಕ್ಯಾಚ್‌ಗಳನ್ನು ಬಿಟ್ಟಿದ್ದಾರೆ.

2019 ರ ವಿಶ್ವಕಪ್‌ನಿಂದ ಇಲ್ಲಿಯವರೆಗೆ ಭಾರತ 43 ಪಂದ್ಯಗಳಲ್ಲಿ ಎದುರಾಳಿ ತಂಡಗಳಿಗೆ 70 ಬಾರಿ ಜೀವದಾನ ನೀಡಿದೆ. ಭಾರತ ಈ ಕ್ಯಾಚ್‌ಗಳನ್ನು 15 ಏಕದಿನ, 19 ಟಿ20 ಮತ್ತು ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಕೈಬಿಟ್ಟಿದೆ.

ಕೈಯಲ್ಲಿ ಬೆಣ್ಣೆ ಇಟ್ಟುಕೊಂಡೆ ಮೈದಾನಕ್ಕಿಳಿವ ಕೊಹ್ಲಿ.. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಚ್ಚು 14 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಕೊಹ್ಲಿ ತಂಡದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು. ತಂಡದ ಉಳಿದವರನ್ನು ಕೊಹ್ಲಿಗೆ ಹೋಲಿಸಿದಾಗ ಅವರು ನಾಯಕನಿಗಿಂತ ಬಹಳ ಹಿಂದುಳಿದಿದ್ದಾರೆ.

ಕೊಹ್ಲಿ ನಂತರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ಹೆಸರು ಹೆಚ್ಚಾಗಿ ಕೇಳಿಬಂದಿದೆ. ಇಬ್ಬರೂ ಐದು ಕ್ಯಾಚ್‌ಗಳನ್ನ ಕೈಚೆಲ್ಲಿದ್ದಾರೆ. ಮತ್ತೊಂದೆಡೆ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿಯವರ ಪಾಲು ಸಹ ಇದರಲ್ಲಿದೆ.

ಆರ್ ಶ್ರೀಧರ್ ಭಾರತ ತಂಡದ ವಿಶೇಷ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇನೇ ಇದ್ದರೂ, ಕ್ಯಾಚ್ ಹಿಡಿಯುವಲ್ಲಿ ಭಾರತ ತಂಡ ಹಿಂದುಳಿದಿದೆ. ಈ ತಪ್ಪನ್ನು ಆದಷ್ಟು ಬೇಗ ಸರಿಪಡಿಸದಿದ್ದರೆ, ಟೀಮ್ ಇಂಡಿಯಾ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಟೆಸ್ಟ್​ಗೆ ಪಾದಾರ್ಪಣೆ ಮಾಡಿದ 2ನೇ ಕಿರಿಯ ಭಾರತೀಯ, 4 ವಿಶ್ವ ಕಪ್ ಆಡಿದ ಪಿಯೂಷ್ ಚಾವ್ಲಾಗೆ ಇಂದು ಜನ್ಮ ದಿನ

ಕೊಹ್ಲಿಗೆ ನ್ಯಾಯ.. ನಟರಾಜನ್​ಗೆ ಅನ್ಯಾಯ.. BCCI ವಿರುದ್ಧ ಕಿಡಿಕಾರಿದ ಸುನಿಲ್ ಗಾವಸ್ಕರ್

Published On - 12:23 pm, Thu, 24 December 20

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ