AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿಗೆ ನ್ಯಾಯ.. ನಟರಾಜನ್​ಗೆ ಅನ್ಯಾಯ.. BCCI ವಿರುದ್ಧ ಕಿಡಿಕಾರಿದ ಸುನಿಲ್ ಗಾವಸ್ಕರ್

ಟಿ ನಟರಾಜನ್​ಗೆ ಐಪಿಎಲ್ ಸಮಯದಲ್ಲಿ ಹೆಣ್ಣು ಮಗುವಾಗಿತ್ತು. ದುಬೈನಲ್ಲಿದ್ದ ನಟರಾಜನ್​ಗೆ, ಐಪಿಎಲ್ ಮುಗಿದ ಬಳಿಕ ಮಗಳನ್ನ ನೋಡೋದಕ್ಕೆ ಅವಕಾಶ ನೀಡಬಹುದಿತ್ತು. ಆದ್ರೆ ಬಿಸಿಸಿಐ ಹಾಗೇ ಮಾಡಲಿಲ್ಲ.

ಕೊಹ್ಲಿಗೆ ನ್ಯಾಯ.. ನಟರಾಜನ್​ಗೆ ಅನ್ಯಾಯ.. BCCI ವಿರುದ್ಧ ಕಿಡಿಕಾರಿದ ಸುನಿಲ್ ಗಾವಸ್ಕರ್
ಸುನಿಲ್ ಗವಾಸ್ಕರ್
Follow us
ಪೃಥ್ವಿಶಂಕರ
|

Updated on:Dec 24, 2020 | 1:49 PM

ವಿರಾಟ್ ತಂದೆಯಾಗ್ತೀರೋದ್ರಿಂದ ಆ ಸಮಯದಲ್ಲಿ ಪತ್ನಿಯ ಜೊತೆ ಇರೋದಕ್ಕಾಗಿ, ಬಿಸಿಸಿಐ ಬಳಿ ಪಿತೃತ್ವದ ರಜೆ ತಗೆದುಕೊಂಡು ಆಸ್ಟ್ರೇಲಿಯಾದಿಂದ ವಾಪಸ್ ಆಗಿದ್ದಾರೆ. ಆದ್ರೀಗ ಕ್ರಿಕೆಟ್ ದಿಗ್ಗಜ ಸುನಿಲ್ ಗಾವಸ್ಕರ್, ಕೊಹ್ಲಿಗೆ ರಜೆ ನೀಡಿರುವ ಬಿಸಿಸಿಐ.. ನಟರಾಜನ್​ಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂದೆಯಾಗ್ತೀರೋ ಹಿನ್ನೆಲೆಯಲ್ಲಿ, ಅಡಿಲೇಡ್ ಟೆಸ್ಟ್ ಪಂದ್ಯದ ಬಳಿಕ ಭಾರತಕ್ಕೆ ವಾಪಸ್ ಆಗಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನ ಅಜಿಂಕ್ಯಾ ರಹಾನೆ ಮುನ್ನಡೆಸಲಿದ್ದಾರೆ. ಆದ್ರೆ ಪಿತೃತ್ವದ ರಜೆ ಕೋರಿ ಭಾರತಕ್ಕೆ ಬಂದಿರೋ ಕೊಹ್ಲಿ, ಈಗ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಟೀಮ್ ಇಂಡಿಯಾ ಮಾಜಿ ನಾಯಕ ಸುನಿಲ್ ಗಾವಸ್ಕರ್, ಕೊಹ್ಲಿಯ ಈ ನಿರ್ಧಾರವನ್ನ ಖಂಡಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಇಬ್ಬಗೆಯ ನೀತಿಯನ್ನ ಅನುಸರಿಸಲಾಗಿತ್ತಿದೆ. ಒಬ್ಬ ಆಟಗಾರನಿಗೊಂದು ನ್ಯಾಯವಾದ್ರೆ, ಮತ್ತೊಬ್ಬ ಆಟಗಾರನಿಗೆ ಅನ್ಯಾಯವಾಗ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಹ್ಲಿಗೆ ನ್ಯಾಯ ನೀಡೋ BCCI.. ನಟರಾಜನ್​ಗೆ ಅನ್ಯಾಯ ಮಾಡಿದೆ ಟಿ ನಟರಾಜನ್​ಗೆ ಐಪಿಎಲ್ ಸಮಯದಲ್ಲಿ ಹೆಣ್ಣು ಮಗುವಾಗಿತ್ತು. ದುಬೈನಲ್ಲಿದ್ದ ನಟರಾಜನ್​ಗೆ, ಐಪಿಎಲ್ ಮುಗಿದ ಬಳಿಕ ಮಗಳನ್ನ ನೋಡೋದಕ್ಕೆ ಅವಕಾಶ ನೀಡಬಹುದಿತ್ತು.

ಆದ್ರೆ ಬಿಸಿಸಿಐ ಹಾಗೇ ಮಾಡಲಿಲ್ಲ. ದುಬೈನಿಂದಲೇ ನಟರಾಜನ್​ನನ್ನ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗೋದಕ್ಕೆ ಬುಲಾವ್ ನೀಡಿತು. ಆದ್ರೀಗ ಕೊಹ್ಲಿ ಮಗುವಾಗೋದಕ್ಕಿಂತ ಮುಂಚೆ, ಭಾರತಕ್ಕೆ ಬರ್ತಿದ್ದಾರೆ. ಕೊಹ್ಲಿಗೆ ನ್ಯಾಯ ನೀಡೋ ಬಿಸಿಸಿಐ.. ನಟರಾಜನ್​ಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.

ನಟರಾಜನ್ ಧ್ವನಿ ಎತ್ತೋ ಹಾಗಿಲ್ಲ.. ಬಿಸಿಸಿಐ ನಿಯಮಗಳ ಬಗ್ಗೆ ಟಿ ನಟರಾಜನ್ ಆಶ್ಚರ್ಯ ಪಡುವ ಆಟಗಾರನಾಗಿದ್ದಾರೆ. ಯಾಕಂದ್ರೆ ನಟರಾಜನ್ ಹೊಸಬನಾಗಿರೋದ್ರಿಂದ, ಅವರಿಗೆ ಇದನ್ನ ಪ್ರಶ್ನೆ ಮಾಡೋ ಹಾಗಿಲ್ಲ. ಐಪಿಎಲ್ ಪ್ಲೇ ಆಫ್ ನಡೆಯುತ್ತಿರುವಾಗಲೇ ತಂದೆಯಾಗಿರೋ ನಟರಾಜನ್​, ಮುಂದಿನ ತಿಂಗಳು ಜನವರಿಯಲ್ಲೇ ತನ್ನ ಮುದ್ದಿನ ಮಗಳ ಮುಖ ನೋಡಬೇಕಾಗಿದೆ. – ಸುನಿಲ್ ಗಾವಸ್ಕರ್, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ..

ಸುನಿಲ್ ಗಾವಸ್ಕರ್ ಹೇಳಿರೋ ಈ ಮಾತುಗಳು ನಿಜಕ್ಕೂ ಅರ್ಥಪೂರ್ಣವಾಗಿದೆ. ಕೊಹ್ಲಿಗಾದ್ರೆ ನ್ಯಾಯ.. ನಟರಾಜನ್​ಗೆ ಮಾತ್ರ ಮತ್ತೊಂದು ನ್ಯಾಯ.. ನಿಜಕ್ಕೂ ಬಿಸಿಸಿಐ ಈ ಇಬ್ಬಗೆಯ ನೀತಿಯಿಂದ ಹೊರಬರಬೇಕಿದೆ. ಇಲ್ಲಾ ಅಂದ್ರೆ ಇದು ಮುಂದೊಂದು ದಿನ ಆಟಗಾರರ ನಡುವೆ ಮನಸ್ತಾಪಕ್ಕೆ ಕಾರಣವಾಗಿ, ಆಂತರಿಕ ಕಲಹಕ್ಕೂ ಕಾರಣವಾಗಬಹುದು.

ಕೈಯಲ್ಲಿ ಬೆಣ್ಣೆ ಇಟ್ಟುಕೊಂಡೆ ಮೈದಾನಕ್ಕಿಳಿವ ಭಾರತೀಯ ಆಟಗಾರರು, ಕಳಪೆ ಫೀಲ್ಡಿಂಗ್​ ಪಂದ್ಯದ ಸೋಲಿಗೆ ಕಾರಣವಾಗುತ್ತಿದೆಯಾ?

Published On - 1:37 pm, Thu, 24 December 20