ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ; ಬೆಂಗಳೂರಿನಲ್ಲಿ ಪಂದ್ಯ ಯಾವಾಗ?

|

Updated on: Oct 19, 2023 | 7:46 PM

Pro Kabaddi 2023 Schedule: ದೇಶೀ ಕ್ರೀಡೆ ಪ್ರೋ ಕಬಡ್ಡಿ ಲೀಗ್‌ನ 10 ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ ಡಿಸೆಂಬರ್ 2 ರಿಂದ ಆರಂಭವಾಗಲಿರುವ ಲೀಗ್​ನಲ್ಲಿ, ಫೆಬ್ರವರಿ 21, 2024 ರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲ್ಲಿವೆ.

ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ; ಬೆಂಗಳೂರಿನಲ್ಲಿ ಪಂದ್ಯ ಯಾವಾಗ?
ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿ
Follow us on

ದೇಶೀ ಕ್ರೀಡೆ ಪ್ರೋ ಕಬಡ್ಡಿ ಲೀಗ್‌ನ (Pro Kabaddi League) 10 ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ ಡಿಸೆಂಬರ್ 2 ರಿಂದ ಆರಂಭವಾಗಲಿರುವ ಲೀಗ್​ನಲ್ಲಿ, ಫೆಬ್ರವರಿ 21, 2024 ರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲ್ಲಿವೆ. ಈ ಬಾರಿಯ ಪ್ರೋ ಕಬಡ್ಡಿ ಲೀಗ್‌ ತನ್ನ ಹಳೆಯ ಸ್ವರೂಪಕ್ಕೆ ಮರಳಿದೆ. ಅಂದರೆ ಈಗ 12 ನಗರಗಳಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆಯಲಿವೆ. ಈ ಬ್ಲಾಕ್‌ಬಸ್ಟರ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್, ತೆಲುಗು ಟೈಟಾನ್ಸ್ (Gujarat Giants vs Telugu Titans) ತಂಡವನ್ನು ಎದುರಿಸಲಿದೆ.

12 ನಗರಗಳಲ್ಲಿ ಪಂದ್ಯ

ಪ್ರೊ ಕಬಡ್ಡಿ ಲೀಗ್‌ನ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್ ಈ ಹತ್ತನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 10ನೇ ಆವೃತ್ತಿಯೂ ದೇಶದ 12 ನಗರಗಳಲ್ಲಿ ನಡೆಯಲ್ಲಿದೆ. ಹಾಗೆಯೇ ಡಿಸೆಂಬರ್ 2 ರಿಂದ ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನ ಅರೆನಾದಲ್ಲಿ ಮೊದಲ ಪಂದ್ಯ ನಡೆಯಲ್ಲಿದೆ. ಆ ಬಳಿಕ ಪ್ರತಿ ಫ್ರಾಂಚೈಸಿಯೂ ತಮ್ಮ ತಮ್ಮ ತವರು ನಗರಗಳಲ್ಲಿ ಪಂದ್ಯಗಳನ್ನಾಡಲಿವೆ. ಲೀಗ್ ಹಂತವು 2 ಡಿಸೆಂಬರ್ 2023 ರಿಂದ 21 ಫೆಬ್ರವರಿ 2024 ರವರೆಗೆ ನಡೆಯಲಿದೆ. ಪ್ಲೇಆಫ್ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.

PKL 2023: ದಾಖಲೆಯ ಬೆಲೆ ಪಡೆದ ಪವನ್; ಪ್ರೊ ಕಬಡ್ಡಿ ಲೀಗ್ ಹರಾಜಿನ ಬಳಿಕ ಎಲ್ಲಾ 12 ತಂಡಗಳು ಇಂತಿವೆ

ಪ್ರತಿ ನಗರಗಳ ವೇಳಾಪಟ್ಟಿ

  • ಅಹಮದಾಬಾದ್: ಡಿಸೆಂಬರ್ 2 ರಿಂದ 7 ರವರೆಗೆ ಪಂದ್ಯಗಳು ನಡೆಯಲಿವೆ.
  • ಬೆಂಗಳೂರು: ಡಿಸೆಂಬರ್ 8 ರಿಂದ 13 ರವರೆಗೆ ಪಂದ್ಯಗಳು ನಡೆಯಲಿವೆ.
  • ಪುಣೆ: ಡಿಸೆಂಬರ್ 15 ರಿಂದ 20 ರವರೆಗೆ ಪಂದ್ಯಗಳು ನಡೆಯಲಿವೆ.
  • ಚೆನ್ನೈ: ಡಿಸೆಂಬರ್ 22 ರಿಂದ 27 ರವರೆಗೆ ಪಂದ್ಯಗಳು ನಡೆಯಲಿವೆ.
  • ನೋಯ್ಡಾ: ಡಿಸೆಂಬರ್ 29 ರಿಂದ ಜನವರಿ 3 ರವರೆಗೆ ಪಂದ್ಯಗಳು ನಡೆಯಲಿವೆ.
  • ಮುಂಬೈ: 2024 ರ ಜನವರಿ 5 ರಿಂದ ಜನವರಿ 10 ರವರೆಗೆ ಪಂದ್ಯಗಳು ನಡೆಯಲಿವೆ.
  • ಜೈಪುರ: 2024 ರ ಜನವರಿ 12 ರಿಂದ ಜನವರಿ 17 ರವರೆಗೆ ಪಂದ್ಯಗಳು ನಡೆಯಲಿವೆ.
  • ಹೈದರಾಬಾದ್: 2024 ರ ಜನವರಿ 19 ರಿಂದ ಜನವರಿ 24 ರವರೆಗೆ ಪಂದ್ಯಗಳು ನಡೆಯಲಿವೆ.
  • ಪಾಟ್ನಾ: 2024 ರ ಜನವರಿ 26 ರಿಂದ ಜನವರಿ 32 ರವರೆಗೆ ಪಂದ್ಯಗಳು ನಡೆಯಲಿವೆ.
  • ದೆಹಲಿ: 2024 ರ ಫೆಬ್ರವರಿ 2 ರಿಂದ ಜನವರಿ 7 ರವರೆಗೆ ಪಂದ್ಯಗಳು ನಡೆಯಲಿವೆ.
  • ಪಂಚಕುಲ: 2024 ರ ಫೆಬ್ರವರಿ 16 ರಿಂದ ಜನವರಿ 21 ರವರೆಗೆ ಪಂದ್ಯಗಳು ನಡೆಯಲಿವೆ.

ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಸೀಸನ್ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಹಣಾಹಣಿಯೊಂದಿಗೆ ಪ್ರಾರಂಭವಾಗುತ್ತದೆ. ಪವನ್ ಸೆಹ್ರಾವತ್, ಫಜಲ್ ಅತ್ರಾಚಲಿ, ಅಜಿಂಕ್ಯ ಪವಾರ್ ಮತ್ತು ನವೀನ್ ಕುಮಾರ್ ಅವರಂತಹ ಟಾಪ್ ಸ್ಟಾರ್‌ಗಳು ಆರಂಭಿಕ ವಾರಾಂತ್ಯದಲ್ಲಿ ಅಭಿಮಾನಿಗಳನ್ನು ಆಕರ್ಷಿಸಲು ಸಿದ್ಧರಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Thu, 19 October 23