ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ T20 ಕ್ರಿಕೆಟ್​ ಸೇರ್ಪಡೆ ಆಗಬೇಕು -ರಾಹುಲ್​ ಆಶಯ

|

Updated on: Nov 15, 2020 | 8:23 PM

ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಇಂಡಿಯನ್ ವಾಲ್ ಎಂದೇ ಖ್ಯಾತಿ ಪಡೆದ ರಾಹುಲ್ ದ್ರಾವಿಡ್, ಒಲಿಂಪಿಕ್​ ಕ್ರೀಡಾಕೂಟಕ್ಕೆ ಟಿ20 ಕ್ರಿಕೆಟನ್ನು ಸೇರ್ಪಡೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಟಿ20 ಮಾದರಿಯ ಕ್ರಿಕೆಟ್ ಆಟವು ಒಲಿಂಪಿಕ್​ನ ಭಾಗವಾಗಬೇಕು ಎಂದು ಹೇಳಿದ್ದಾರೆ. 75ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಒಲಿಂಪಿಕ್​ನಲ್ಲಿ ಟಿ20 ಮಾದರಿ ಸೇರ್ಪಡೆಗೊಂಡರೆ ಕ್ರಿಕೆಟ್ ಆಟಕ್ಕೆ ಮತ್ತಷ್ಟು ಜನಪ್ರಿಯತೆ ಸಿಗಲಿದೆ ಎಂದು ದ್ರಾವಿಡ್ ಹೇಳಿದ್ದಾರೆ. 2018ರಲ್ಲಿ ಐಸಿಸಿ ಪ್ರಕಟಿಸಿದ್ದ ಸಮೀಕ್ಷೆಯ ಪ್ರಕಾರ ಶೇಕಡಾ 87ರಷ್ಟು ಅಭಿಮಾನಿಗಳು ಒಲಿಂಪಿಕ್ಸ್​ನಲ್ಲಿ […]

ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ T20 ಕ್ರಿಕೆಟ್​ ಸೇರ್ಪಡೆ ಆಗಬೇಕು -ರಾಹುಲ್​ ಆಶಯ
Follow us on

ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಇಂಡಿಯನ್ ವಾಲ್ ಎಂದೇ ಖ್ಯಾತಿ ಪಡೆದ ರಾಹುಲ್ ದ್ರಾವಿಡ್, ಒಲಿಂಪಿಕ್​ ಕ್ರೀಡಾಕೂಟಕ್ಕೆ ಟಿ20 ಕ್ರಿಕೆಟನ್ನು ಸೇರ್ಪಡೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಟಿ20 ಮಾದರಿಯ ಕ್ರಿಕೆಟ್ ಆಟವು ಒಲಿಂಪಿಕ್​ನ ಭಾಗವಾಗಬೇಕು ಎಂದು ಹೇಳಿದ್ದಾರೆ.

75ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. ಒಲಿಂಪಿಕ್​ನಲ್ಲಿ ಟಿ20 ಮಾದರಿ ಸೇರ್ಪಡೆಗೊಂಡರೆ ಕ್ರಿಕೆಟ್ ಆಟಕ್ಕೆ ಮತ್ತಷ್ಟು ಜನಪ್ರಿಯತೆ ಸಿಗಲಿದೆ ಎಂದು ದ್ರಾವಿಡ್ ಹೇಳಿದ್ದಾರೆ. 2018ರಲ್ಲಿ ಐಸಿಸಿ ಪ್ರಕಟಿಸಿದ್ದ ಸಮೀಕ್ಷೆಯ ಪ್ರಕಾರ ಶೇಕಡಾ 87ರಷ್ಟು ಅಭಿಮಾನಿಗಳು ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಇರಬೇಕು ಎಂದು ಹೇಳಿದ್ದರು. ಈ ಹಿಂದೆ, ಇಂಗ್ಲೆಂಡ್ ಆಟಗಾರ ಇಯಾನ್ ಮಾರ್ಗನ್, ಸ್ಯಾಮ್ ಬಿಲ್ಲಿಂಗ್ಸ್ ಮತ್ತು ವೆಸ್ಟ್ ಇಂಡೀಸ್ ಆಲ್​ ರೌಂಡರ್ ಕಾರ್ಲಸ್ ಬ್ರಾಥ್ವೈಟ್ ಟಿ20 ಕ್ರಿಕೆಟನ್ನು ಒಲಿಂಪಿಕ್​ನಲ್ಲಿ ಸೇರಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕ್ರಿಕೆಟ್ ಆಟವು 1900ರ ಪ್ಯಾರಿಸ್ ಒಲಿಂಪಿಕ್ಸ್​ನ ಭಾಗವಾಗಿತ್ತು. 1988ರ ಕಾಮನ್​ವೆಲ್ತ್ ಕ್ರೀಡಾ ಕೂಟದಲ್ಲಿ, 2010 ಮತ್ತು 2014ರ ಏಷಿಯನ್ ಗೇಮ್ಸ್​ನಲ್ಲಿ ಸಹ ಕ್ರಿಕೆಟ್ ಸ್ಥಾನ ಪಡೆದುಕೊಂಡಿತ್ತು. ಮುಂದೆ, 2022ರ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಮತ್ತು 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.