ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ.. ಅನುಷ್ಕಾಳ ‘ನಾಯಿ’ ಎಂದ ಕಾಂಗ್ರೆಸ್ ಮುಖಂಡ

ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ.. ಅನುಷ್ಕಾಳ 'ನಾಯಿ' ಎಂದ ಕಾಂಗ್ರೆಸ್ ಮುಖಂಡ

ದೀಪಾವಳಿಗೆ ಪಟಾಕಿ ಹೊಡೆಯಬೇಡಿ, ಪರಿಸರ ಸಂರಕ್ಷಿಸಿ ಎಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಿಂಗ್ ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಕೊಹ್ಲಿ ಅನುಷ್ಕಾಳ ನಾಯಿ ಎಂದು ಕರೆದು ಪೇಚಿಗೆ ಸಿಲುಕಿದ್ದಾರೆ. ಸಾಲುಮರದ ತಿಮ್ಮಕ್ಕರನ್ನು ನೋಡಿ ಕಲೀರಿ -ಪಟಾಕಿ ಹೊಡಿಬೇಡಿ ಅಂದಿದ್ದಕ್ಕೆ ಕೊಹ್ಲಿ​ಗೆ ಫುಲ್​​ ಟ್ರೋಲ್! ಹಿಂದಿಯಲ್ಲಿ ಟ್ವೀಟ್ ಮಾಡಿರುವ ಉದಿತ್ ರಾಜ್, ‘‘ಅನುಷ್ಕಾ ತಮ್ಮ ನಾಯಿ ವಿರಾಟ್ ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆಯಿಲ್ಲ. ನಾಯಿಗಿಂತಲೂ ನಿಯತ್ತಾದ ಪ್ರಾಣಿ ಇನ್ನೊಂದಿಲ್ಲ. ಪಟಾಕಿಯನ್ನು ಹೊಡೆಯಬೇಡಿ ಎಂದಿದ್ದಕ್ಕೆ ಕೊಹ್ಲಿಯನ್ನು ನಿಂದಿಸುತ್ತಿರುವ ಮೂರ್ಖರು ತಮ್ಮ […]

Ayesha Banu

|

Nov 16, 2020 | 1:17 PM

ದೀಪಾವಳಿಗೆ ಪಟಾಕಿ ಹೊಡೆಯಬೇಡಿ, ಪರಿಸರ ಸಂರಕ್ಷಿಸಿ ಎಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಿಂಗ್ ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಕೊಹ್ಲಿ ಅನುಷ್ಕಾಳ ನಾಯಿ ಎಂದು ಕರೆದು ಪೇಚಿಗೆ ಸಿಲುಕಿದ್ದಾರೆ.

ಸಾಲುಮರದ ತಿಮ್ಮಕ್ಕರನ್ನು ನೋಡಿ ಕಲೀರಿ -ಪಟಾಕಿ ಹೊಡಿಬೇಡಿ ಅಂದಿದ್ದಕ್ಕೆ ಕೊಹ್ಲಿ​ಗೆ ಫುಲ್​​ ಟ್ರೋಲ್!

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಉದಿತ್ ರಾಜ್, ‘‘ಅನುಷ್ಕಾ ತಮ್ಮ ನಾಯಿ ವಿರಾಟ್ ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆಯಿಲ್ಲ. ನಾಯಿಗಿಂತಲೂ ನಿಯತ್ತಾದ ಪ್ರಾಣಿ ಇನ್ನೊಂದಿಲ್ಲ. ಪಟಾಕಿಯನ್ನು ಹೊಡೆಯಬೇಡಿ ಎಂದಿದ್ದಕ್ಕೆ ಕೊಹ್ಲಿಯನ್ನು ನಿಂದಿಸುತ್ತಿರುವ ಮೂರ್ಖರು ತಮ್ಮ ಡಿ.ಎನ್.ಎ ಪರೀಕ್ಷೆ ಮಾಡಿಸಿಕೊಂಡು ತಾವು ಭಾರತದವರು ಹೌದೋ, ಅಲ್ಲವೋ ಎಂದು ತಿಳಿದುಕೊಳ್ಳಲಿ’’ ಎಂದಿದ್ದಾರೆ.

ಈ ಹಿಂದೆ ಬಿಜೆಪಿಯಿಂದ ಸಂಸದರಾಗಿದ್ದ ಉದಿತ್ ರಾಜ್ ನಂತರ ಕಮಲ ಪಾಳಯ ತೊರೆದು ಕಾಂಗ್ರೆಸ್ ಸೇರಿದ್ದರು. ಇದೀಗ ಕೊಹ್ಲಿಯ ಕಾಲೆಳೆದ ಬಿಜೆಪಿ ಬೆಂಬಲಿಗರನ್ನು ವಿರೋಧಿಸಲು ಹೋಗಿ ತಾವೇ ಹಳ್ಳಕ್ಕೆ ಬಿದ್ದಿದ್ದಾರೆ. ಇಷ್ಟಕ್ಕೂ ಕೊಹ್ಲಿಯನ್ನು ಸಮರ್ಥಿಸಿಕೊಳ್ಳುವಾಗ ನಾಯಿಯ ವಿಚಾರ ಏಕೆ ಬಂತು ಎಂಬುದೇ ಅರ್ಥವಾಗಿಲ್ಲ. ಈ ಟ್ವೀಟ್ ನಂತರ ಸಿಟ್ಟಾಗಿರುವ ಕೊಹ್ಲಿ ಅಭಿಮಾನಿಗಳು ಉದಿತ್ ರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದೇನೇ ಆದರೂ ನಾಯಿ ಎಂಬ ಪದ ಬಳಸಿದ್ದರಿಂದಲೇ ಉದಿತ್ ರಾಜ್ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆಯೆಂಬುದಂತೂ ಸುಳ್ಳಲ್ಲ.

Follow us on

Related Stories

Most Read Stories

Click on your DTH Provider to Add TV9 Kannada