ಸತತ ವೈಫಲ್ಯಗಳ ಹೊರತಾಗಿಯೂ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಆಡುವ ಇಲೆವೆನ್ನಲ್ಲಿ ಮುಂದುವರಿಸಿ ಕಾಮೆಂಟೇಟರ್ ಮತ್ತು ಮಾಜಿ ಆಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ ಎಲ್ ರಾಹುಲ್, ಆಸ್ಸೀಯನ್ನು ಯಾಕೆ ಮುಂದುವರಿಸಲಾಯಿತೆಂದು ಕೊನೆಗೂ ಬಹಿರಂಗಪಡಿಸಿದ್ದಾರೆ.
13ನೇ ಅವೃತಿಯ ಐಪಿಎಲ್ನಲ್ಲಿ ಅತ್ಯಂ
ಸತತವಾಗಿ ಮೂರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಸೆಯನ್ನು ಜಿವಂವಾಗಿರಿಸಿಕೊಂಡಿರುವ ರಾಹುಲ್, ಮಂಗಳವಾರದ ಪಂದ್ಯದ ನಂತರ ಮ್ಯಾಕ್ಸ್ವೆಲ್ ಅವರ ಉಪಯುಕ್ತತೆಯನ್ನು ಮುಕ್ತವಾಗಿ ಹೊಗಳಿದರು.
‘‘ಮ್ಯಾಕ್ಸಿ ಒಬ್ಬ ಅತ್ಯುತ್ತಮ ಟೀಮ್ ಪ್ಲೇಯರ್. ಅವರು ಟೀಮಿಗೆ ಒದಗಿಸುವ ಬ್ಯಾಲೆನ್ಸ್ ಮತ್ತು ಭದ್ರತೆ ಅಸಾಮಾನ್ಯವಾದದ್ದು. ತಂಡದ ಎಲ್ಲ 11 ಆಟಗಾರರು ಕಾಂಟ್ರಿಬ್ಯೂಟ್ ಮಾಡುವುದು ಸಾಧ್ಯವಾಗುವುದಿಲ್ಲ. ಕೆಲವರು ವಿಫಲರಾಗುವುದು ಆಟದ ಅವಿಭಾಜ್ಯ ಅಂಗ
ಗಮನಿಸಬೇಕಾದ ಸಂಗತಿಯೇನೆಂದರೆ, ಪರಿಣಿತರ ಪ್ಯಾನೆಲ್ನಲ್ಲಿರುವ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕಥೆ ಬ್ರಿಯಾನ್ ಲಾರಾ, ತಮ್ಮೊಂದಿಗಿರುವ ಇತರ ಪರಿಣಿತರು, ಮ್ಯಾಕ್ಸ್ವೆಲ್ ಅವರನ್ನು ಆಡಿಸುತ್ತಿರುವ ಕುರಿತು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರೂ ತಾವು ಮಾತ್ರ ಆಸ್ಸೀಗೆ ಬೆಂಬಲ ಸೂಚಿಸಿದ್ದರು. ಮ್ಯಾಕ್ಸ್ವೆಲ್ ಅವರ ಆಫ್ ಸ್ಪಿನ್ ಬೌಲಿಂಗ್ ಟೀಮಿಗೆ ನೆರವಾಗುತ್ತದೆ ಎಂದು ಲಾರಾ ಹೇಳಿದ್ದರು.
ಮಂಗಳವಾರದ ಪಂದ್ಯದಲ್ಲಿ ರಾಹುಲ್, ಮ್ಯಾಕ್ಸ್ವೆಲ್ ಅವರಿಂದಲೇ ಬೌಲಿಂಗ್ ದಾಳಿ ಆರಂಭಿಸಿದರು. ನಾಯಕನ ವಿಶ್ವಾಸವನ್ನು ಉಳಿಸಿಕೊಂಡ ಮ್ಯಾಕ್ಸ್ವೆಲ್ 4 ಓವರ್ಗಳಲ್ಲಿ ಕೇವಲ 31 ರನ್ ನೀಡಿ ರಿಷಬ್ ಪಂತ್ ಅವರ ಅಮೂಲ್ಯ ವಿಕೆಟ್ ಪಡೆದರು.
‘‘ಸಂತೋಷದ ವಿಷಯವೆಂದರೆ, ಇದುವರೆಗೆ ಫಾರ್ಮ್ನಲ್ಲಿರದ ಆಟಗಾರರು ಸರಿಯಾದ ಸಮಯದಲ್ಲಿ ಅದನ್ನು ಕಂಡುಕೊಳ್ಳುತ್ತಿದ್ದಾರೆ. ನೆಟ್ಸ್ನಲ್ಲಿ ಕೋಚ್ಗಳು ಸುರಿಸುವ ಬೆವರು ಫಲ ನೀಡಿ ಈಗ ಎಲ್ಲವೂ ಸರಿಯಾಗುತ್ತಿದೆ, ನಮ್ಮ ಹುಡುಗರು ಮುಂದಿನ ಹಣಾಹಣಿಗಳಿಗೆ ಅದ್ಭುತವಾಗಿ ಅಣಿಯಾಗುತ್ತಿದ್ದಾರೆ,’’ ಎಂದು ರಾಹುಲ್ ಹೇಳಿದರು.