ಜಡೇಜಾಗೆ ಬಿಟ್ಟೂಬಿಡದೆ ಕಾಡ್ತಿದೆಯಂತೆ ಆ ನೆನಪು?!

| Updated By:

Updated on: Jul 11, 2020 | 2:05 PM

2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮರೆಯೋದಕ್ಕೆ ಸಾಧ್ಯವೇ ಇಲ್ಲ ಬಿಡಿ. ಅಂಥದ್ದೊಂದು ನೋವು ಅಭಿಮಾನಿಗಳ ಮನಸ್ಸಿನಿಂದ ಮಾಸೋದೂ ಇಲ್ಲ. ಯಾಕಂದ್ರೆ ಕೂದಲೆಳೆ ಅಂತರದಲ್ಲಿ ಭಾರತಕ್ಕೆ ವಿಶ್ವಕಪ್ ಕೈ ಜಾರಿ ಹೋಗಿದ್ದು ಆ ಸೆಮಿಫೈನಲ್ ಪಂದ್ಯದಲ್ಲೇ. ಅವತ್ತು ಗೆಲುವಿನಂಚಿನಲ್ಲಿ ರನ್​ ಔಟ್ ಆದ ಧೋನಿಯ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಅವತ್ತು ಫೀಲ್ಡ್​ನಿಂದ ಆಚೆ ಹೋದ ಮಾಹಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.  ಜೊತೆಗೆ, ಮ್ಯಾಂಚೆಸ್ಟರ್​ನಲ್ಲಿ ನೆರೆದಿದ್ದ ಅಭಿಮಾನಿಗಳೂ ಸಹ ಗಳಗಳನೇ ಕಣ್ಣೀರು ಹಾಕಿದ್ರು. […]

ಜಡೇಜಾಗೆ ಬಿಟ್ಟೂಬಿಡದೆ ಕಾಡ್ತಿದೆಯಂತೆ ಆ ನೆನಪು?!
ರವೀಂದ್ರ ಜಡೇಜಾ
Follow us on

2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮರೆಯೋದಕ್ಕೆ ಸಾಧ್ಯವೇ ಇಲ್ಲ ಬಿಡಿ. ಅಂಥದ್ದೊಂದು ನೋವು ಅಭಿಮಾನಿಗಳ ಮನಸ್ಸಿನಿಂದ ಮಾಸೋದೂ ಇಲ್ಲ. ಯಾಕಂದ್ರೆ ಕೂದಲೆಳೆ ಅಂತರದಲ್ಲಿ ಭಾರತಕ್ಕೆ ವಿಶ್ವಕಪ್ ಕೈ ಜಾರಿ ಹೋಗಿದ್ದು ಆ ಸೆಮಿಫೈನಲ್ ಪಂದ್ಯದಲ್ಲೇ.

ಅವತ್ತು ಗೆಲುವಿನಂಚಿನಲ್ಲಿ ರನ್​ ಔಟ್ ಆದ ಧೋನಿಯ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಅವತ್ತು ಫೀಲ್ಡ್​ನಿಂದ ಆಚೆ ಹೋದ ಮಾಹಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.  ಜೊತೆಗೆ, ಮ್ಯಾಂಚೆಸ್ಟರ್​ನಲ್ಲಿ ನೆರೆದಿದ್ದ ಅಭಿಮಾನಿಗಳೂ ಸಹ ಗಳಗಳನೇ ಕಣ್ಣೀರು ಹಾಕಿದ್ರು.

ಹೌದು, ನಾವ್ಯಾಕೆ ಈಗ 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಗ್ಗೆ ಮಾತನಾಡ್ತಿದ್ದೀವಿ ಅಂದುಕೊಂಡ್ರಾ? ಅದಕ್ಕೆ ಕಾರಣ ಅಂದು ಭಾರತದ ಗೆಲುವಿಗಾಗಿ ಕೆಚ್ಚೆದೆಯಿಂದ ಹೋರಾಡಿದ್ದ ಆಲ್​ರೌಂಡರ್ ರವೀಂದ್ರ ಜಡೇಜಾರ ಟ್ವೀಟ್​. ಹೌದು, ಕಡೆಗೂ ಭಗ್ನವಾದ ವಿಶ್ವಕಪ್ ಬಗ್ಗೆ ಜಡೇಜಾ ಬಾಯಿ ಬಿಟ್ಟಿದ್ದಾರೆ. ಅದೊಂದು ನೆನಪು ಮಾತ್ರ ನನ್ನನ್ನ ಇನ್ನೂ ಕಾಡುತ್ತಿದೆ ಅಂತಾ ಹೇಳಿಕೊಂಡಿದ್ದಾರೆ.

ನಾವು ನಮ್ಮ ಶಕ್ತಿ ಮೀರಿ ಗೆಲ್ಲಲು ಪಯತ್ನ ಪಡುತ್ತೇವೆ. ಆದ್ರೆ ಅದು ಕೆಲವೊಮ್ಮೆ ಸಾಕಾಗುವುದಿಲ್ಲ. ನನ್ನನ್ನು ತುಂಬಾ ಕಾಡಿದ ದುಃಖದ ದಿನಗಳಲ್ಲಿ ಅದು ಸಹ ಒಂದು ಎಂದು ರವೀಂದ್ರ ಜಡೇಜಾ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಜಡೇಜಾ ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಅದೊಂದು ದಿನ ದುಃಖದ ದಿನ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಅಂದು ಮಹೇಂದ್ರ ಸಿಂಗ್ ಧೋನಿ ಜೊತೆಗೂಡಿ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿದ್ದ ಜಡೇಜಾ, ಕೇವಲ 59 ಬಾಲ್​ಗಳಲ್ಲಿ 77 ರನ್ ಗಳಿಸಿದ್ರು. ಆದ್ರೆ ಜಡೇಜಾ ಔಟ್​ ಆದ ಬಳಿಕ ಧೋನಿ ಮೇಲೆ ಎಲ್ಲರ ಭರವಸೆ ನೆಟ್ಟಿತ್ತು. ಆದ್ರೆ ಅವರೂ ರನ್​ ಔಟ್ ಆಗುತ್ತಿದ್ದಂತೆ, ಭಾರತದ 2019ರ ವಿಶ್ವಕಪ್ ಕನಸು ಅಂದು ಭಗ್ನವಾಗಿ ಹೋಗಿತ್ತು.

Published On - 10:44 am, Sat, 11 July 20