ಆರ್​ಸಿಬಿಗೆ ಸಿಎಸ್​ಕೆಯ ಹಳದಿ ಜರ್ಸಿ ನೀಡಿ ಎಡವಟ್ಟು; ಟ್ವಿಟರ್​ನಲ್ಲಿ ಫುಲ್​ ಟ್ರೋಲ್​

|

Updated on: Apr 03, 2021 | 11:17 PM

ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ. ಸಿಎಸ್​ಕೆಗೆ ಧೋನಿ. ಧೋನಿ ಅಭಿಮಾನಿಗಳು ಎಂದಿಗೂ ಕೊಹ್ಲಿಯನ್ನು ಒಪ್ಪಿಕೊಂಡಿಲ್ಲ. ಕೊಹ್ಲಿ ಅಭಿಮಾನಿಗಳು ಕೂಡ ಅದೇ ರೀತಿ.

ಆರ್​ಸಿಬಿಗೆ ಸಿಎಸ್​ಕೆಯ ಹಳದಿ ಜರ್ಸಿ ನೀಡಿ ಎಡವಟ್ಟು; ಟ್ವಿಟರ್​ನಲ್ಲಿ ಫುಲ್​ ಟ್ರೋಲ್​
ಆರ್​ಸಿಬಿಗೆ ಹಳದಿ ಎಮೋಜಿ ನೀಡಿರುವುದು
Follow us on

ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಮ್ಯಾಚ್​ ಎಂದರೆ ತುಂಬಾನೇ ಹೈ ವೋಲ್ಟೇಜ್​ನಿಂದ ಕೂಡಿರುತ್ತದೆ. ಇದಕ್ಕೆ ನಾನಾ ಕಾರಣಗಳಿವೆ. ಸಿಎಸ್​ಕೆ ಹಾಗೂ ಆರ್​​​​​​​​​​​​​​ಸಿಬಿ ಅಭಿಮಾನಿಗಳ ನಡುವೆ ಹೊಂದಾಣಿಕೆ ಆದ ದಾಖಲೆಯೇ ಇಲ್ಲ. ಹೀಗಿರುವಾಗಲೇ ಒಂದು ಎಡವಟ್ಟು ನಡೆದು ಹೋಗಿದೆ! ಆರ್​ಸಿಬಿಯವರಿಗೆ ಹಳದಿ ಬಣ್ಣದ ಜರ್ಸಿ ನೀಡಲಾಗಿದೆ. ಸದ್ಯ ಈ ವಿಚಾರ ಸಾಕಷ್ಟು ಟ್ರೋಲ್​ ಆಗಿದೆ.

ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ. ಸಿಎಸ್​ಕೆಗೆ ಧೋನಿ. ಧೋನಿ ಅಭಿಮಾನಿಗಳು ಎಂದಿಗೂ ಕೊಹ್ಲಿಯನ್ನು ಒಪ್ಪಿಕೊಂಡಿಲ್ಲ. ಕೊಹ್ಲಿ ಅಭಿಮಾನಿಗಳು ಕೂಡ ಅದೇ ರೀತಿ. ಇದಕ್ಕಾಗಿಯೇ ಎರಡೂ ತಂಡಗಳ ನಡುವಿನ ಮ್ಯಾಚ್​ ಹೈ ವೋಲ್ಟೇಜ್​ ಎನಿಸಿಕೊಳ್ಳುತ್ತದೆ. ಆದರೆ, ಈಗ ಟ್ವಿಟರ್ ಮಾಡಿದ ತಪ್ಪೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಏಪ್ರಿಲ್​ 9ರಿಂದ ಐಪಿಎಲ್​ ಮ್ಯಾಚ್​ ಆರಂಭವಾಗಲಿದೆ. ಪ್ರತಿ ಬಾರಿ ಐಪಿಎಲ್​ ನಡೆಯುವುದಕ್ಕೂ ಮೊದಲು ಟ್ವಿಟರ್​ ಪ್ರತಿ ತಂಡದ ಹ್ಯಾಶ್​ಟ್ಯಾಗ್ ಎದುರು ಆಯಾ ತಂಡದ ಟೀಶರ್ಟ್​ ಎಮೋಜಿ ನೀಡುತ್ತದೆ. ಈ ಬಾರಿ ಆರ್​ಸಿಬಿಗೆ ಕೆಂಪು ಬಣ್ಣದ ಟೀ ಶರ್ಟ್​ ನೀಡುವ ಬದಲು ಹಳದಿ ಬಣ್ಣದ ಟಿ-ಶರ್ಟ್​ ಎಮೋಜಿ ನೀಡಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಈ ಬಗ್ಗೆ ಚೆನ್ನೈ ಸೂಪರ್​ ಕಿಂಗ್ಸ್ ಕೂಡ ಟ್ವೀಟ್​ ಮಾಡಿದೆ. ರಜನಿಕಾಂತ್​ ಹಳೆಯ ಸಿನಿಮಾವೊಂದರ ಫೋಟೋ ಪೋಸ್ಟ್​ ಮಾಡಿದ್ದು, ಅದರಲ್ಲಿ ರಜನಿಕಾಂತ್ ಕೆಂಪು ಬಣ್ಣದ ಸೀರೆ ಮೇಲೆ ಹಳದಿ ಬಣ್ಣ ಚಲ್ಲುತ್ತಿದ್ದಾರೆ.

ಆರ್​ಸಿಬಿ ಕೂಡ ಈ ಬಗ್ಗೆ ಅಸಮಾಧಾನ ಹೊರ ಹಾಕಿದೆ.

ಇದನ್ನೂ ಓದಿ: IPL 2021: ಕೊರೊನಾ ಕಪಿಮುಷ್ಠಿಯಲ್ಲಿ ಐಪಿಎಲ್​.. ಕೊಲ್ಕತ್ತಾ, ಡೆಲ್ಲಿ ನಂತರ ಚೆನ್ನೈ ಮೇಲೆ ದಾಳಿ ನಡೆಸಿದ ಮಹಾಮಾರಿ!

Published On - 11:12 pm, Sat, 3 April 21