
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಂಬರುವ ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಯುವ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಈ ಪ್ರತಿಷ್ಠಿತ ಏಕದಿನ ಟೂರ್ನಿಯು 2026ರ ನವೆಂಬರ್ 19 ರಿಂದ ನವೆಂಬರ್ 29 ರವರೆಗೆ ಖತಾರ್‌ನ ದೋಹಾದಲ್ಲಿ ಜರುಗಲಿದೆ. ಈ ಮಹತ್ವದ ಟೂರ್ನಿಯ ಸಂಪೂರ್ಣ ವಿವರಗಳು, ಭಾಗವಹಿಸುವ ತಂಡಗಳು ಮತ್ತು ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…
ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಅವುಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ:
ದೋಹಾದ ಎರಡು ಪ್ರಮುಖ ಕ್ರೀಡಾಂಗಣಗಳಲ್ಲಿ ಈ ಎಲ್ಲ 15 ಪಂದ್ಯಗಳು ನಡೆಯಲಿವೆ:
ಕ್ರಿಕೆಟ್ ಜಗತ್ತಿನ ಹೈ-ವೋಲ್ಟೇಜ್ ಪಂದ್ಯವಾದ ಭಾರತ ‘ಎ’ ಮತ್ತು ಪಾಕಿಸ್ತಾನ್ ‘ಎ’ ನಡುವಿನ ಮುಖಾಮುಖಿ ನವೆಂಬರ್ 22 ರಂದು ವೆಸ್ಟ್ ಎಂಡ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯವು ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ.
| ದಿನಾಂಕ | ಪಂದ್ಯಗಳು | ಸಮಯ | ಸ್ಥಳ |
|---|---|---|---|
| ನವೆಂಬರ್ 19, ಗುರುವಾರ | ಬಾಂಗ್ಲಾದೇಶ್ ಎ vs ಹಾಂಗ್ ಕಾಂಗ್ | ಬೆಳಿಗ್ಗೆ 9:00 | UDST |
| ನವೆಂಬರ್ 19, ಗುರುವಾರ | ಶ್ರೀಲಂಕಾ ಎ vs ಅಫ್ಘಾನಿಸ್ತಾನ್ ಎ | ಮಧ್ಯಾಹ್ನ 1:00 ಕ್ಕೆ | WEICS |
| ನವೆಂಬರ್ 20, ಶುಕ್ರವಾರ | ಪಾಕಿಸ್ತಾನ್ ಎ vs ಯುಎಇ | ಬೆಳಿಗ್ಗೆ 9:00 | UDST |
| ನವೆಂಬರ್ 20, ಶುಕ್ರವಾರ | ಭಾರತ ಎ vs ನೇಪಾಳ | ಮಧ್ಯಾಹ್ನ 1:00 ಕ್ಕೆ | WEICS |
| ನವೆಂಬರ್ 21, ಶನಿವಾರ | ಶ್ರೀಲಂಕಾ ಎ vs ಹಾಂಗ್ ಕಾಂಗ್ | ಬೆಳಿಗ್ಗೆ 9:00 | UDST |
| ನವೆಂಬರ್ 21, ಶನಿವಾರ | ಬಾಂಗ್ಲಾದೇಶ್ ಎ vs ಅಫ್ಘಾನಿಸ್ತಾನ್ ಎ | ಮಧ್ಯಾಹ್ನ 1:00 ಕ್ಕೆ | WEICS |
| ನವೆಂಬರ್ 22, ಭಾನುವಾರ | ಯುಎಇ vs ನೇಪಾಳ | ಬೆಳಿಗ್ಗೆ 9:00 | UDST |
| ನವೆಂಬರ್ 22, ಭಾನುವಾರ | ಭಾರತ ಎ vs ಪಾಕಿಸ್ತಾನ್ ಎ | ಮಧ್ಯಾಹ್ನ 1:00 ಕ್ಕೆ | WEICS |
| ನವೆಂಬರ್ 23, ಸೋಮವಾರ | ಅಫ್ಘಾನಿಸ್ತಾನ್ ಎ vs ಹಾಂಗ್ ಕಾಂಗ್ | ಬೆಳಿಗ್ಗೆ 9:00 | UDST |
| ನವೆಂಬರ್ 23, ಸೋಮವಾರ | ಶ್ರೀಲಂಕಾ ಎ vs ಬಾಂಗ್ಲಾದೇಶ್ ಎ | ಮಧ್ಯಾಹ್ನ 1:00 ಕ್ಕೆ | WEICS |
| ನವೆಂಬರ್ 24, ಮಂಗಳವಾರ | ಭಾರತ ಎ vs ಯುಎಇ | ಬೆಳಿಗ್ಗೆ 9:00 | UDST |
| ನವೆಂಬರ್ 24, ಮಂಗಳವಾರ | ಪಾಕಿಸ್ತಾನ್ ಎ vs ನೇಪಾಳ | ಮಧ್ಯಾಹ್ನ 1:00 ಕ್ಕೆ | WEICS |
| ನವೆಂಬರ್ 26, ಗುರುವಾರ | ಸೆಮಿಫೈನಲ್ 1 (A1 vs B2) | ಮಧ್ಯಾಹ್ನ 1:00 ಕ್ಕೆ | WEICS |
| ನವೆಂಬರ್ 27, ಶುಕ್ರವಾರ | ಸೆಮಿಫೈನಲ್ 2 (B1 vs A2) | ಮಧ್ಯಾಹ್ನ 1:00 ಕ್ಕೆ | WEICS |
| ನವೆಂಬರ್ 29, ಭಾನುವಾರ | ಫೈನಲ್ | ಮಧ್ಯಾಹ್ನ 1:00 ಕ್ಕೆ | WEICS |
ಇದನ್ನೂ ಓದಿ: ಇದು ವಿಂಟೇಜ್ ಕಾರ್… ಐಪಿಎಲ್ ಭವಿಷ್ಯದ ಬಗ್ಗೆ ಮೌನ ಮುರಿದ ಧೋನಿ!
ಈ ಬಾರಿಯ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯು ಯುವ ಹಾಗೂ ಅನುಭವಿ ಆಟಗಾರರ ನಡುವಿನ ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ. ಟೆಸ್ಟ್ ಆಡುವ ರಾಷ್ಟ್ರಗಳ ಉದಯೋನ್ಮುಖ ‘ಎ’ ತಂಡಗಳಿಗೆ, ಯುಎಇ ಮತ್ತು ಹಾಂಗ್ ಕಾಂಗ್‌ನಂತಹ ಪ್ರಮುಖ ಅಂತರರಾಷ್ಟ್ರೀಯ ತಂಡಗಳು ಎಷ್ಟರಮಟ್ಟಿಗೆ ಸವಾಲಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.