Road Safety World Series 2021: ಇಂದು ಇಂಡಿಯಾ ಲೆಜೆಂಡ್ಸ್ – ಬಾಂಗ್ಲಾ ಲೆಜೆಂಡ್ಸ್ ನಡುವೆ ಹಣಾಹಣಿ.. ಪಂದ್ಯ ಪ್ರಸಾರವಾಗುವ ಚಾನೆಲ್, ಸಮಯದ ಮಾಹಿತಿ ಇಲ್ಲಿದೆ

|

Updated on: Mar 05, 2021 | 1:28 PM

Road Safety World Series 2021: ಸರಣಿಯ ಮೊದಲ ಪಂದ್ಯ ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ನಡುವೆ ನಡೆಯಲಿದೆ. ಶುಕ್ರವಾರದಿಂದ ಪ್ರಾರಂಭವಾಗುವ ಈ ಸರಣಿಯು ಮುಂದಿನ 11 ದಿನಗಳವರೆಗೆ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲಿದೆ.

Road Safety World Series 2021: ಇಂದು ಇಂಡಿಯಾ ಲೆಜೆಂಡ್ಸ್ - ಬಾಂಗ್ಲಾ ಲೆಜೆಂಡ್ಸ್ ನಡುವೆ ಹಣಾಹಣಿ.. ಪಂದ್ಯ ಪ್ರಸಾರವಾಗುವ ಚಾನೆಲ್, ಸಮಯದ ಮಾಹಿತಿ ಇಲ್ಲಿದೆ
ರಸ್ತೆ ಸುರಕ್ಷತೆ ವಿಶ್ವ ಸರಣಿ
Follow us on

ಛತ್ತೀಸ್​ಗಡ್: ರಸ್ತೆ ಸುರಕ್ಷತೆ ವಿಶ್ವ ಸರಣಿಯು ಇಂದಿನಿಂದ ನಡೆಯುತ್ತಿದೆ. ಈ ಸರಣಿಯ ಎಲ್ಲಾ ಪಂದ್ಯಗಳು ಛತ್ತೀಸ್​ಗಡ್​ನ ರಾಜಧಾನಿ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯ ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ನಡುವೆ ನಡೆಯಲಿದೆ. ಶುಕ್ರವಾರದಿಂದ ಪ್ರಾರಂಭವಾಗುವ ಈ ಸರಣಿಯು ಮುಂದಿನ 11 ದಿನಗಳವರೆಗೆ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲಿದೆ.

ಈ ಸರಣಿಯನ್ನು ಆಯೋಜಿಸುತ್ತಿರುವುದು ಇದು ಎರಡನೇ ಬಾರಿಗೆ. ಈ ಸರಣಿಯನ್ನು ಕಳೆದ ವರ್ಷವೂ ಆಡಲಾಗುತ್ತಿತ್ತು, ಆದರೆ ಕೋವಿಡ್ -19 ಕಾರಣ, ಅದನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯಿತು. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರು ಈ ಸರಣಿಯಲ್ಲಿ ಆಡುತ್ತಾರೆ. ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು ಸರಣಿಯನ್ನು ಆಯೋಜಿಸುವ ಉದ್ದೇಶವಾಗಿದೆ.

ಇಂಡಿಯಾ ಲೆಜೆಂಡ್ಸ್, ಬಾಂಗ್ಲಾದೇಶ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಗಳು ಈ ಸರಣಿಯಲ್ಲಿ ಭಾಗವಹಿಸುತ್ತಿವೆ. ಪ್ರಸಿದ್ಧ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಕೆವಿನ್ ಪೀಟರ್ಸನ್, ತಿಲಕರತ್ನ ದಿಲ್ಶನ್, ಯುವರಾಜ್ ಸಿಂಗ್ ಈ ಸರಣಿಯಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲಾ ಸರಣಿ ಪಂದ್ಯಗಳನ್ನು ಟಿ 20 ಸ್ವರೂಪದಲ್ಲಿ ಆಡಲಾಗುತ್ತದೆ

ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ನಡುವಿನ ಮೊದಲ ಪಂದ್ಯ ಎಲ್ಲಿ ನಡೆಯಲಿದೆ?
ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ನಡುವಿನ ರೋಡ್ ಸೇಫ್ಟಿ ವರ್ಲ್ಡ್ ಸರಣಿಯ ಮೊದಲ ಪಂದ್ಯ ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೊದಲ ಪಂದ್ಯ ಯಾವಾಗ?
ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ನಡುವಿನ ಮೊದಲ ಪಂದ್ಯ ಮಾರ್ಚ್ 5 ರಂದು (ಶುಕ್ರವಾರ) ನಡೆಯುತ್ತಿದೆ.

ಮೊದಲ ಪಂದ್ಯ ಪ್ರಾರಂಭವಾಗುವ ಸಮಯ?
ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ನಡುವಿನ ಮೊದಲ ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ.

ಮೊದಲ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?
ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ವೂಟ್ ಮತ್ತು ಜಿಯೋ ಆಪ್‌ನಲ್ಲಿಯೂ ನೋಡಬಹುದಾಗಿದೆ.

ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?
ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ನಡುವಿನ ಪಂದ್ಯದ ನೇರ ಪ್ರಸಾರವು ಕಲರ್ಸ್ ಸಿನೆಪ್ಲೆಕ್ಸ್, ಕರ್ಲಸ್ ಕನ್ನಡ ಸಿನೆಮಾ, ರಿಶ್ಟೆ ಸಿನೆಪ್ಲೆಕ್ಸ್​ನಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ: Road Safety World Series 2021: ಇಂಡಿಯಾ ಲೆಜೆಂಡ್ಸ್ ತಂಡ ಸೇರಿದ ದಾವಣಗೆರೆ ಎಕ್ಸ್​ಪ್ರೆಸ್​ ಆರ್​. ವಿನಯ್​ ಕುಮಾರ್​