ಸಚಿನ್ ತೆಂಡೂಲ್ಕರ್​ಗೆ ಇಂದು 48ರ ವಸಂತ! ಎಂದೂ ಮುರಿಯದ ಸಾಧನೆಗಳ ಕಿರುಪರಿಚಯ ತೆಂಡೂಲ್ಕರ್ ಅಭಿಮಾನಿಗಳಿಗಾಗಿ

|

Updated on: Apr 24, 2021 | 11:57 AM

Sachin Tendulkar 48th birthday: ಸಚಿನ್ ತೆಂಡೂಲ್ಕರ್ ಕಿರಿಯ ವಯಸ್ಸಿಗೆ ಸಾಧನೆಗೈದ ವಾಮನಮೂರ್ತಿ. ಅಪರೂಪದ ಸಂಗತಿಯೆಂದ್ರೆ ಭಾರತೀಯ ಕ್ರಿಕೆಟ್​ ಆಯ್ಕೆ ಮಂಡಳಿ ತೆಂಡೂಲ್ಕರ್ ಅವರನ್ನು 19 ವರ್ಷ ವಯಸ್ಸಿನ ದೇಶೀಯ ಟೂರ್ನಿಯಲ್ಲಿ ಕಡ್ಡಾಯವಾಗಿ ಆಡುವಂತೆ ಸೂಚಿಸಲಿಲ್ಲ. ಸಚಿನ್ ತೆಂಡೂಲ್ಕರ್ ಭಾರತದ ಪರ ಟೆಸ್ಟ್​ ಕ್ರಿಕೆಟ್​ ಕ್ಯಾಪ್​ ಧರಿಸಿದಾಗ ಆ ಹುಡುಗನಿಗೆ ಕೇವಲ 16 ವರ್ಷ 205 ದಿನ ವಯಸ್ಸಾಗಿತ್ತಷ್ಟೇ!

ಸಚಿನ್ ತೆಂಡೂಲ್ಕರ್​ಗೆ ಇಂದು 48ರ ವಸಂತ! ಎಂದೂ ಮುರಿಯದ ಸಾಧನೆಗಳ ಕಿರುಪರಿಚಯ ತೆಂಡೂಲ್ಕರ್ ಅಭಿಮಾನಿಗಳಿಗಾಗಿ
ಸಚಿನ್ ತೆಂಡೂಲ್ಕರ್​ಗೆ ಇಂದು 48ರ ವಸಂತ! ಎಂದಿಗೂ ಮುರಿಯದ ಅಮೋಘ ಸಾಧನೆ/ ದಾಖಲೆಗಳ ಕಿರುಪರಿಚಯ
Follow us on

ಭಾರತೀಯ ಕ್ರಿಕೆಟ್​ ರಂಗದಲ್ಲಿ ದೇವರು ಎಂದೇ ಪರಿಗಣಿತವಾಗಿರುವ ಸಚಿನ್ ತೆಂಡೂಲ್ಕರ್​ ಇಂದಿಗೆ (April 24) 48 ವಸಂತಗಳನ್ನು ಕಂಡಿದ್ದಾರೆ.. ಈ ಸಂದರ್ಭದಲ್ಲಿ ಎಂದಿಗೂ ಮುರಿಯದ ಅವರ ಅಮೋಘ ಸಾಧನೆಗಳು/ ದಾಖಲೆಗಳ ಕಿರುಪರಿಚಯಾತ್ಮಕ ಲೇಖನ ತೆಂಡೂಲ್ಕರ್ ಅಭಿಮಾನಿಗಳಿಗಾಗಿ ಇಲ್ಲಿದೆ.. ಸಚಿನ್ ತೆಂಡೂಲ್ಕರ್​ ಭಾರತೀಯ ಕ್ರಿಕೆಟ್ ತಂಡದ ಪರ ಒಟ್ಟು 200 ಟೆಸ್ಟ್​ಗಳು (Tests), 463 ಏಕ ದಿನ ಪಂದ್ಯಗಳು (ODI) ಮತ್ತು 1 ಟಿ 20 ಟೂರ್ನಿ (T 20 I) ಆಡಿದ್ದಾರೆ. ಜಗತ್ತಿನ ಕ್ರಿಕೆಟ್ ಕ್ಷೇತ್ರದಲ್ಲಿ 100 ಶತಕಗಳನ್ನು ಬಾರಿಸಿರುವವರೂ ಅವರೊಬ್ಬರೇ!

ಭಾರತ ಕ್ರಿಕೆಟ್​ನ ದಂತಕತೆ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​ ಪ್ರಸ್ತುತ ಮುಂಬೈನಲ್ಲಿದ್ದು, ತಮ್ಮ ಕುಟುಂಬದವರೊಂದಿಗೆ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಇದೀಗ ಐಪಿಎಲ್ 2021 ಸೀಸನ್. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಅವರು ಮುಂಬೈ ಇಂಡಿಯನ್ಸ್​ ತಂಡದ ಜೊತೆ ಇರುತ್ತಾರೆ. ಆದರೆ ಇತ್ತೀಚೆಗಷ್ಟೇ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಮನೆಯಲ್ಲೇ ಇದ್ದಾರೆ.

ತಮ್ಮ 24 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್​ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್ ಅಸಂಖ್ಯಾತ ಬ್ಯಾಟಿಂಗ್​ ದಾಖಲೆಗಳು ಮತ್ತಿತರ ದಾಖಲೆಗಳನ್ನು ಪುಡಿಪುಡಿ ಮಾಡಿದ್ದಾರೆ. ಅವು ಯಾವುವು.. ನೋಡೋಣಾ ಬನ್ನೀ.

ಅತಿ ಹೆಚ್ಚು ಟೆಸ್ಟ್ ಪಂದ್ಯಗಳು:

ಸಚಿನ್ ತೆಂಡೂಲ್ಕರ್ ಎಂಬ ರನ್ ಮಷೀನ್

ಕ್ರಿಕೆಟ್​​ನಲ್ಲಿ ಅತಿ ಚಿಕ್ಕ ವಯಸ್ಸಿಗೇ ಕಣಕ್ಕೆ ಇಳಿದ ಪ್ರತಿಭೆ. 175 ಟೆಸ್ಟ್​ ಕ್ಯಾಪ್​ಗಳನ್ನು ಧರಿಸಿದ ಅಸಾಮಾನ್ಯ ಈ ಸಚಿನ್ ತೆಂಡೂಲ್ಕರ್. ಇವರಿಗಿಂತ ಒಂದು ಸ್ಥಾನದಲ್ಲಿ ಹೊಂದಿರುವ ಆಸ್ಟ್ರೇಲಿಯಾದ ರಿಕಿ ಪಾಟಿಂಗ್​ಗಿಂತ ಈತ ಮಾರು ದೂರ ಹೆಚ್ಚಾಗಿಯೇ ಇದ್ದಾರೆ. ಅಂದಹಾಗೆ ರಿಕಿ ಪಾಟಿಂಗ್ ಆಡಿರುವುದು 168 ಟೆಸ್ಟ್​ ಪಂದ್ಯಗಳನ್ನಷ್ಟೇ.

ಸಚಿನ್ ತೆಂಡೂಲ್ಕರ್ ಕ್ರಿಕೆಟ್​ ಆಡಿದ ಕಾಲಮಾನದಲ್ಲಿ ಹೆಚ್ಚಾಗಿ ಕೇವಲ ಎರಡು ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಮಾದರಿಗಳಷ್ಟೇ ಇದ್ದಿದ್ದು. ಹಾಗಾಗಿಯೇ ಅವರು ಹೆಚ್ಚು ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಆಡಲು ಸಾಧ್ಯವಾಯಿತು ಎಂದು ವಿಶ್ಲೇಷಿಸಬಹುದು. ಆದರೆ ಅವರಿಗೆ ಇಂಜ್ಯುರಿ ಅಂದ್ರೆ ಗಾಯಗಳು ಸಹ ಹೆಚ್ಚಾಗಿ ಬಾಧಿಸಿದವು. ಅದರಿಂದ ಅನೇಕ ಮ್ಯಾಚ್​​ಗಳಲ್ಲಿ ಮೈದಾನದಿಂದ ಹೊರಗುಳಿಯಬೇಕಾಯಿತು. ಅಂದ್ರೆ ಸುಮಾರು 25 ಟೆಸ್ಟ್​ ಪಂದ್ಯಗಳನ್ನೇ ಅವರು ಮಿಸ್​ ಮಾಡಿಕೊಂಡರು. ಇಲ್ಲಾಂದ್ರೆ ಅವರ ಟೆಸ್ಟ್​ ಕೌಂಟ್​ ಸುಲಭವಾಗಿ 225 ಅಂಕಿ ತಲುಪುತ್ತಿತ್ತು.

ಸಚಿನ್ ತೆಂಡೂಲ್ಕರ್ ಎಂಬ ರನ್ ಮಷೀನ್

ಅಗ್ರಮಾನ್ಯ ಸಚಿನ್ ತೆಂಡೂಲ್ಕರ್ 200 ಟೆಸ್ಟ್​ ಪಂದ್ಯಗಳನ್ನು ಆಡಲು ಸಾಧ್ಯವಾಗಿದ್ದಕ್ಕೇ ತಮ್ಮ ಖಾತೆಯಲ್ಲಿ ಒಟ್ಟಾರೆ 15921 ಗರಿಷ್ಠ ರನ್ ಪೇರಿಸಲು ಸಾಧ್ಯವಾಯಿತು. ಅದೇ ಆಸ್ಟ್ರೇಲಿಯಾದ ರಿಕಿ ಪಾಟಿಂಗ್​ 13,378 ರನ್ ಮಾತ್ರವೇ ದಾಖಲಿಸಲು ಸಾಧ್ಯವಾಯಿತು.

ವಿಶ್ವ ಕಪ್​ಗಳಲ್ಲಿ ಹೆಚ್ಚು ಬಾರಿ ಕಾಣಿಸಿಕೊಂಡ ಅಗ್ರ ಆಟಗಾರ:

ಈ ವಿಶ್ವ ಕಪ್​ಗಳಲ್ಲಿ ಹೆಚ್ಚು ಬಾರಿ ಕಾಣಿಸಿಕೊಳ್ಳಬೇಕು ಅಂದ್ರೆ ಎರಡು ಅಂಶಗಳು ಪ್ರಧಾನವಾಗುತ್ತವೆ: ಒಂದು, ವಯಸ್ಸು; ಮತ್ತೊಂದು ಫಿಟ್​ನೆಸ್​. ಇದುವರೆಗೂ ಜಗತ್ತಿನ ಕ್ರಿಕೆಟ್​ನಲ್ಲಿ ಒಟ್ಟಾರೆಯಾಗಿ 12 ವಿಶ್ವ ಕಪ್​ಗಳು ಜರುಗಿವೆ. ಅದರಲ್ಲಿ ಇಬ್ಬರೇ 6 ವಿಶ್ವ ಕಪ್​ಗಳಲ್ಲಿ ಆಡಿರುವವರು! ಮೊದಲಿಗರು ಪಾಕಿಸ್ತಾನದ ಕಲಾತ್ಮಕ ಬ್ಯಾಟ್ಸ್​ಮನ್ ಜಾವೀದ್​ ಮಿಯಾಂದಾದ! ಮತ್ತೊಬ್ಬರು ನಮ್ಮ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್! 2011ರಲ್ಲಿಯೇ ಸಚಿನ್ ತೆಂಡೂಲ್ಕರ್ ಅವರು ಜಾವೀದ್​ ಮಿಯಾಂದಾದ್ ಅವರ ಗರಿಷ್ಠ 6 ರ ಸಂಖ್ಯೆಯನ್ನು ದಾಟಿಬಿಟ್ಟರು. 46 ವರ್ಷ ಕಾಲದ ವಿಶ್ವ ಕಪ್​ಗಳ ಇತಿಹಾಸದಲ್ಲಿ ಈ ಇಬ್ಬರೇ ಆಟಗಾರರು ಇಂತಹ ಅಪರೂಪದ ಸಾಧನೆಗೈದವರು.

ಈ ಹಿಂದೆ ಏಕದಿನ ಮಾದರಿಯ ವಿಶ್ವ ಕಪ್ ಟೂರ್ನಿಯಷ್ಟೇ ನಡೆಯುತ್ತಿತ್ತು. ಆದರೆ ಈಗೀಗ ದ್ವೈವಾರ್ಷಿಕವಅಗಿ ನಡೆಯುವ ಟಿ 20 ವರ್ಲ್ಡ್​ ಕಪ್​ ಟೂರ್ನಿಯನ್ನೂ (ICC T20 World Cup) ಸಹ ಆಯೋಜಿಸಲಾಗುತ್ತಿದೆ.

ಟೆಸ್ಟ್​ ಕ್ರಿಕೆಟ್​ ಆಡಿದ ಅತಿ ಕಿರಿಯ ಎಂಬ ಕೀರ್ತಿ ಸಚಿನ್ ತೆಂಡೂಲ್ಕರ್ ಅವರದ್ದಾಗಿದೆ:

ಸಚಿನ್ ತೆಂಡೂಲ್ಕರ್ ಕಿರಿಯ ವಯಸ್ಸಿಗೆ ಸಾಧನೆಗೈದ ವಾಮನಮೂರ್ತಿ. ಅಪರೂಪದ ಸಂಗತಿಯೆಂದ್ರೆ ಭಾರತೀಯ ಕ್ರಿಕೆಟ್​ ಆಯ್ಕೆ ಮಂಡಳಿ ತೆಂಡೂಲ್ಕರ್ ಅವರನ್ನು 19 ವರ್ಷ ವಯಸ್ಸಿನ ದೇಶೀಯ ಟೂರ್ನಿಯಲ್ಲಿ ಕಡ್ಡಾಯವಾಗಿ ಆಡುವಂತೆ ಸೂಚಿಸಲಿಲ್ಲ. ಆದರೆ ರಣಜಿ ಟ್ರೋಫಿ, ದುಲೀಪ್​ ಟ್ರೋಫಿ ಮತ್ತು ಇರಾನಿ ಕಪ್​ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ತಮ್ಮ ಎಂಟ್ರಿಯನ್ನು ಸಾಬೀತುಪಡಿಸಿದ್ದರು. ಸಚಿನ್ ತೆಂಡೂಲ್ಕರ್ ಭಾರತದ ಪರ ಟೆಸ್ಟ್​ ಕ್ರಿಕೆಟ್​ ಕ್ಯಾಪ್​ ಧರಿಸಿದಾಗ ಆ ಹುಡುಗನಿಗೆ ಕೇವಲ 16 ವರ್ಷ 205 ದಿನ ವಯಸ್ಸಾಗಿತ್ತಷ್ಟೇ!

ವಿಶ್ವ ಕಪ್​ಗಳಲ್ಲಿ ಹೆಚ್ಚು ರನ್​ ಪೇರಿಸಿದ ಪ್ರತಿಭೆ!

ಸಚಿನ್ ತೆಂಡೂಲ್ಕರ್ ಗರಿಷ್ಠ ವಿಶ್ವ ಕಪ್​ಗಳನ್ನು ಆಡಿದವರು. ಮೊದಲೇ ಅದ್ಭುತ ಬ್ಯಾಟ್ಸ್​ಮನ್. ಹಾಗಾಗಿಯೇ ವಿಶ್ವ ಕಪ್​ಗಳಲ್ಲಿ ಅತಿ ಹೆಚ್ಚು ಹೆಚ್ಚು ರನ್​ ಪೇರಿಸಿದ ದಾಖಲೆ ಇವರ ಹೆಸರಿನಲ್ಲಿಯೇ ಇದೆ. ಈ ವಿಶ್ವ ಕಪ್​ಗಳಲ್ಲಿ ಮಾಸ್ಟರ್​​ ಬ್ಲಾಸ್ಟರ್​ 2,000 ರನ್ ಕೂಡಿಹಾಕಿದ್ದಾರೆ. ಈ ದಾಖಲೆಗಳನ್ನು ಬೇರೆ ಯಾವುದೇ ಆಟಗಾರನಿಗೆ ಮುರಿಯಲು ಸಾಧ್ಯವಾಗದೇ ಇರಬಹುದು.. ಅಲ್ಲವೇ!?
(Sachin Tendulkar 48th birthday: Sachin Tendulkar has many unbeatable records in his bag here is a list)

Published On - 11:09 am, Sat, 24 April 21