ಟೆಸ್ಟ್ ಕ್ರಿಕೆಟ್ 4 ದಿನಕ್ಕೇ ಸೀಮಿತ, ಐಸಿಸಿ ನಿರ್ಧಾರಕ್ಕೆ ‘ಕ್ರಿಕೆಟ್ ಗಾಡ್’ ವಿರೋಧ
ಟೆಸ್ಟ್ ಕ್ರಿಕೆಟ್ನಲ್ಲಿ ರೋಚಕತೆ ಸೃಷ್ಟಿಸಲು 5 ದಿನದ ಬದಲು ನಾಲ್ಕು ದಿನಗಳಿಗೆ ಕಡಿತ ಮಾಡಲು ಮುಂದಾಗಿರೋ ಐಸಿಸಿ ನಿರ್ಧಾರಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ನ ಅತಿ ಶುದ್ಧರೂಪ ಟೆಸ್ಟ್ ಕ್ರಿಕೆಟ್. ಅದನ್ನ ಕುಲಗೆಡಿಸಬೇಡಿ. ಏಕದಿನ, ಟಿ20, ಟಿ10 ಕ್ರಿಕೆಟ್ ಎಲ್ಲವನ್ನೂ ಜಾರಿಗೆ ತಂದಿದ್ದೀರಾ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಅದನ್ನು ಹಾಗೆಯೇ ಬಿಡಿ ಎಂದು ಸಚಿನ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಭಿಮಾನಕ್ಕೆ ಕೊಹ್ಲಿ ಫಿದಾ ಗುವಾಹಟಿ ಟಿ-ಟ್ವೆಂಟಿ ಪಂದ್ಯಕ್ಕೂ ಮುನ್ನ ವಿರಾಟ್ […]
ಟೆಸ್ಟ್ ಕ್ರಿಕೆಟ್ನಲ್ಲಿ ರೋಚಕತೆ ಸೃಷ್ಟಿಸಲು 5 ದಿನದ ಬದಲು ನಾಲ್ಕು ದಿನಗಳಿಗೆ ಕಡಿತ ಮಾಡಲು ಮುಂದಾಗಿರೋ ಐಸಿಸಿ ನಿರ್ಧಾರಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ನ ಅತಿ ಶುದ್ಧರೂಪ ಟೆಸ್ಟ್ ಕ್ರಿಕೆಟ್. ಅದನ್ನ ಕುಲಗೆಡಿಸಬೇಡಿ. ಏಕದಿನ, ಟಿ20, ಟಿ10 ಕ್ರಿಕೆಟ್ ಎಲ್ಲವನ್ನೂ ಜಾರಿಗೆ ತಂದಿದ್ದೀರಾ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಅದನ್ನು ಹಾಗೆಯೇ ಬಿಡಿ ಎಂದು ಸಚಿನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಅಭಿಮಾನಕ್ಕೆ ಕೊಹ್ಲಿ ಫಿದಾ ಗುವಾಹಟಿ ಟಿ-ಟ್ವೆಂಟಿ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಅಭಿಮಾನಿಯೊಬ್ಬ, ವಿಶೇಷ ಕಲಾಕೃತಿಯ ಗಿಫ್ಟ್ನ್ನ ನೀಡಿದ್ದಾನೆ. ಕೊಹ್ಲಿ ಅಪ್ಪಟ ಅಭಿಮಾನಿ ಆಗಿರೋ ರಾಹುಲ್ ಪಾರೆಕ್, ಹಳೆಯ ಮೊಬೈಲ್ ಫೋನ್ಗಳ ಬಿಡಿಭಾಗಗಳನ್ನ ಬಳಕೆ ಮಾಡಿ, ಕೊಹ್ಲಿಯ ಕಲಾಕೃತಿಯನ್ನ ನಿರ್ಮಿಸಿದ್ದಾನೆ. ಅಭಿಮಾನಿ ಕುಂಚದಲ್ಲಿ ಅರಳಿದ ಕಲಾಕೃತಿ ಕಂಡು ನಿಬ್ಬೆರಗಾದ ಕೊಹ್ಲಿ, ತಮ್ಮ ಹಷ್ತಾಕ್ಷರದೊಂದಿಗೆ ಫ್ಯಾನ್ಗೆ ಶುಭಕೋರಿದ್ರು. ಈ ವಿಡಿಯೋವನ್ನ ಬಿಸಿಸಿಐ ಟ್ವೀಟ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ.
Making art out of old phones. How is this for fan love! ?? #TeamIndia @imVkohli pic.twitter.com/wnOAg3nYGD
— BCCI (@BCCI) January 5, 2020
ಆಸಿಸ್ ಕ್ಲೀನ್ ಸ್ವೀಪ್ ನ್ಯೂಜಿಲೆಂಡ್ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸಿಸ್ 279ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. 416ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ್ದ ನ್ಯೂಜಿಲೆಂಡ್, 136ರನ್ಗೆ ಆಲೌಟ್ ಆಯ್ತು. ಎರಡನೇ ಇನ್ನಿಂಗ್ಸ್ನಲ್ಲಿ ಡೇವಿಡ್ ವಾರ್ನರ್ ಶತಕ ಬಾರಿಸಿದ್ರೆ, ಮಾರ್ನಸ್ ಲಾಬುಚಾನ್ ಅರ್ಧಶತಕ ಸಿಡಿಸಿದ್ರು. ಕಿವೀಸ್ ಪರ ಗ್ರ್ಯಾಂಡ್ಹೋಮ್ 52ರನ್ ಗಳಿಸಿದ್ರೆ, ನಾಥನ್ ಲಿಯಾನ್ 5ವಿಕೆಟ್ ಪಡೆದ್ರು. ಇದ್ರೊಂದಿಗೆ ಆಸಿಸ್ 3-0ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡ್ತು.
ಪುತ್ರಿಯೊಂದಿಗೆ ಧೋನಿ ಎಂಜಾಯ್ ಟೀಂ ಇಂಡಿಯಾದಿಂದ ದೂರವಾಗಿರೋ ಮಹೇಂದ್ರ ಸಿಂಗ್ ಧೋನಿ, ಇದೀಗ ಮಗಳು ಝೀವಾಳೊಂದಿಗೆ ಸಖತ್ ಎಂಜಯ್ ಮಾಡ್ತಿದ್ದಾರೆ. ಇತ್ತೀಚೆಗೆ ಕುಟುಂಬದೊಂದಿಗೆ ಡೆಹ್ರಾಡೂನ್ ಪ್ರವಾಸವನ್ನ ಕೈಗೊಂಡಿದ್ರು. ಈ ವೇಳೆ ಮಾಹಿ ಪುತ್ರಿಯೊಂದಿಗೆ ಹಿಮಭರಿತ ಬೆಟ್ಟಗಳಲ್ಲಿ ಆಟವಾಡಿ, ಎಂಜಾಯ್ ಮಾಡಿದ್ರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.
https://www.instagram.com/p/B68RZREnvS6/?utm_source=ig_web_copy_link
Published On - 6:39 pm, Mon, 6 January 20