ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾರ್ಡನ್ ಕ್ರಿಕೆಟ್ನ ಎಲ್ಲಾ ತಂತ್ರಜ್ಞಾನವನ್ನೂ ಸ್ವಾಗತಿಸಿದ ಕ್ರಿಕೆಟಿಗ. ಆದ್ರೆ DRS ವಿಚಾರದಲ್ಲಿ ಸಚಿನ್ ಅದೇಕೋ ಮೊದಲಿನಿಂದಲೂ ಅಸಮಾಧಾನ ಹೊಂದಿದ್ರು. ಆದರೆ ಈಗ ಸಚಿನ್ ತಾವ್ಯಾಕೆ DRS ಸಿಸ್ಟಮ್ನ ವಿರೋಧಿಸ್ತಾರೆ ಅನ್ನೋ ಸಂಗತಿಯನ್ನ ಬಾಯಿಬಿಟ್ಟಿದ್ದಾರೆ.
DRSಗೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಜೊತೆ ನಡೆಸಿರುವ ಸಂಭಾಷಣೆಯ ವಿಡಿಯೋವನ್ನು ಸಚಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ DRS ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ.
ಚೆಂಡು ಯಾವ ಶೇಕಡಾ ಆಧಾರದಲ್ಲಿ ಸ್ಟಂಪ್ಗೆ ಬಡಿಯಿತು ಅನ್ನೋದು ಮುಖ್ಯವಲ್ಲ. DRSನಲ್ಲಿ ಬಾಲ್ ಸ್ಟಂಪ್ಗೆ ಬಡಿದಿದ್ದು ಕಂಡುಬಂದರೆ ಆನ್ ಫೀಲ್ಡ್ ಅಂಪೈರ್ DRS ತೆಗೆದುಕೊಳ್ಳದೆ ಬ್ಯಾಟ್ಸ್‌ಮನ್ ಔಟ್ ಆಗಿದ್ದಾನೆ ಎಂದು ತೀರ್ಪು ನೀಡಬೇಕು. DRSನಲ್ಲಿ ಈ ಬದಲಾವಣೆಯನ್ನು ತಂದರೆ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿದಂತಾಗುತ್ತದೆ. ಮನುಷ್ಯರಂತೆ ತಂತ್ರಜ್ಞಾನವೂ ಯಾವಾಗಲೂ ಕರೆಕ್ಟ್ ಆಗಿರಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ. ಈ ಪರಿಕಲ್ಪನೆ ದೋಷಪೂರಿತವಾಗಿದೆ ಎಂದಿದ್ದಾರೆ. ICCಯೊಂದಿಗೆ ನಾನು ಒಪ್ಪದ ವಿಷಯದಲ್ಲಿ ಅದೂ ಇದೆ ಎಂದು ಬ್ರಿಯಾನ್ ಲಾರಾ ಬಳಿ ಸಚಿನ್ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ.
ಈ DRS ಅಂದ್ರೆ ಏನು?
DRS ಅಂದ್ರೆ ಡಿಸೀಷನ್ ರಿವ್ಯೂ ಸಿಸ್ಟಮ್. ಬ್ಯಾಟ್ಸ್‌ಮನ್ ಔಟ್ ಆಗಿದ್ದಾನೋ ಅನ್ನೋ ಅನುಮಾನವನ್ನ ಪರಿಹರಿಸಿಕೊಳ್ಳೋದಕ್ಕೆ ಈ ತಂತ್ರಜ್ಞಾನವನ್ನ ಬಳಸಿಕೊಳ್ಳಲಾಗುತ್ತೆ. LBW ಸಮಯದಲ್ಲಿ ಬಾಲ್ ಶೇಕಡಾ 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸ್ಟಂಪ್ಗೆ ಬಡಿದಿದ್ರೆ, ಆಗ ಡಿಸೀಷನ್ ರಿವ್ಯೂ ಸಿಸ್ಟಮ್ ಅನ್ನ ಬಳಸಿಕೊಳ್ಳಲಾಗುತ್ತೆ. ಆದ್ರೆ ಇದರಿಂದ ಅನರ್ಥಗಳಾಗೋದೇ ಹೆಚ್ಚು ಅನ್ನೋದು ಸಚಿನ್ ವಾದ. ಸಚಿನ್ ಹೇಳಿರೋದ್ರಲ್ಲಿ ತಪ್ಪೇನು ಇಲ್ಲ. ಆಗಾಗ DRSಬಳಸಿ ಉಂಟಾಗೋ ಲೋಪಗಳಿಂದ ಮ್ಯಾಚ್ಗಳಲ್ಲಿ ವಿವಾದಗಳು ಆಗ್ತಾನೇ ಇರುತ್ತೆ.
What % of the ball hits the stumps doesn’t matter, if DRS shows us that the ball is hitting the stumps, it should be given out, regardless of the on-field call. That's the motive of using technology in Cricket. As we know technology isn’t 100% right but neither are humans.#ENGvWI pic.twitter.com/8At80AtRs5
— Sachin Tendulkar (@sachin_rt) July 11, 2020
Published On - 3:13 pm, Tue, 14 July 20