ಬೆಂಗಳೂರಿನಲ್ಲಿ ಫುಟ್ಬಾಲ್ ಕದನ; ಭಾರತಕ್ಕೆ ನೇಪಾಳ ಎದುರಾಳಿ! ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

|

Updated on: Jun 24, 2023 | 11:03 AM

SAFF Championship 2023: ಪ್ರಸ್ತುತ, ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ನೇಪಾಳ ವಿರುದ್ಧ ಜಯ ಗಳಿಸುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಟೀಂ ಇಂಡಿಯಾ ಪ್ರಯತ್ನಿಸಲಿದೆ.

ಬೆಂಗಳೂರಿನಲ್ಲಿ ಫುಟ್ಬಾಲ್ ಕದನ; ಭಾರತಕ್ಕೆ ನೇಪಾಳ ಎದುರಾಳಿ! ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಭಾರತ ಫುಟ್ಬಾಲ್ ತಂಡ
Follow us on

ಜೂನ್ 24 ರ ಶನಿವಾರ ಅಂದರೆ, ಇಂದು ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂ (Sree Kanteerava Stadium in Bangalore) ಮತ್ತೊಂದು ಫುಟ್ಬಾಲ್ ಕದನಕ್ಕೆ ಸಜ್ಜಾಗಿದೆ. SAFF ಚಾಂಪಿಯನ್‌ಶಿಪ್ 2023 (SAFF Championship 2023)ರ ಮೊದಲ ಮುಖಾಮುಖಿಯಲ್ಲಿ ಪಾಕಿಸ್ತಾನ ತಂಡವನ್ನು 4-0 ಅಂತರದಿಂದ ಮಣಿಸಿದ್ದ ಭಾರತ ಉತ್ತಮ ಆರಂಭ ಪಡೆದುಕೊಂಡಿತ್ತು. ಟೀಂ ಇಂಡಿಯಾ ಪರ ತಂಡದ ನಾಯಕ ಸುನಿಲ್ ಛೆಟ್ರಿ (Sunil Chhetri) ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ಪಾಕ್ ತಂಡವನ್ನು ಹೆಡೆಮುರಿ ಕಟ್ಟಿದ್ದರು. ಇದೀಗ ಈ ಸೀಸನ್​ನ ಎರಡನೇ ಪಂದ್ಯಕ್ಕೆ ಸಜ್ಜಾಗಿರುವ ಸುನಿಲ್ ಛೆಟ್ರಿ ಬಳಗ ನೇಪಾಳ (IND Vs NEP) ತಂಡವನ್ನು ಎದುರಿಸುತ್ತಿದೆ. ಪ್ರಸ್ತುತ, ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ನೇಪಾಳ ವಿರುದ್ಧ ಜಯ ಗಳಿಸುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಟೀಂ ಇಂಡಿಯಾ ಪ್ರಯತ್ನಿಸಲಿದೆ. ಇತ್ತ ನೇಪಾಳ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕುವೈತ್ ವಿರುದ್ಧ 3- 1ಗೋಲುಗಳ ಅಂತರದ ಸೋಲು ಕಂಡಿತ್ತು. ಹೀಗಾಗಿ ನೇಪಾಳ ತಂಡ ಆತಿಥೇಯ ಭಾರತದ ವಿರುದ್ಧ ಖಾತೆ ತೆರೆಯಲು ಎದುರು ನೋಡುತ್ತಿದೆ.

ಇನ್ನು ಭಾರತ ಹಾಗೂ ನೇಪಾಳ ನಡುವಿನ ಕೊನೆಯ 5 ಮುಖಾಮುಖಿಗಳನ್ನು ನೋಡಿದರೆ, ಈ 5 ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಆಡಿರುವ 5 ಪಂದ್ಯಗಳಲ್ಲಿ ಭಾರತ 4 ರಲ್ಲಿ ಗೆದ್ದಿದ್ದರೆ, ಇನ್ನುಳಿದ ಒಂದು ಪಂದ್ಯ 1-1 ರಿಂದ ಡ್ರಾಗೊಂಡಿದೆ. ಹೀಗಾಗಿ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೆವರೆಟ್ ಎನಿಸಿಕೊಂಡಿದೆ.

Happy Birthday Sunil Chhetri: ಭಾರತದ ಫುಟ್ಬಾಲ್ ಸಾಮ್ರಾಟ ಸುನೀಲ್ ಛೆಟ್ರಿಗೆ ಇಂದು ಜನ್ಮದಿನ; ಶುಭಕೋರಿದ ಕಿಂಗ್ ಕೊಹ್ಲಿ

ಸೆಮಿಫೈನಲ್‌ ಹಾದಿ ಮತ್ತಷ್ಟು ಸುಗಮಗೊಳ್ಳಲಿದೆ

ಇನ್ನು ನೇಪಾಳ ವಿರುದ್ಧ ಭಾರತ ಗೆದ್ದರೆ, ತಂಡದ ಸೆಮಿಫೈನಲ್‌ ಹಾದಿ ಮತ್ತಷ್ಟು ಸುಗಮಗೊಳ್ಳಲಿದೆ. ಅಲ್ಲದೆ ಎಲ್ಲಾ ಗುಂಪು ಪಂದ್ಯಗಳನ್ನು ಗೆಲ್ಲುವ ಮೂಲಕ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು ಸುನಿಲ್ ಪಡೆಯ ಗುರಿಯಾಗಿದೆ. ಭಾರತ ಇತ್ತೀಚೆಗೆ ಇಂಟರ್ ಕಾಂಟಿನೆಂಟಲ್ ಕಪ್ ಗೆದ್ದಿತ್ತು. ಫೈನಲ್‌ನಲ್ಲಿ ಲೆಬನಾನ್‌ನಂತಹ ಬಲಿಷ್ಠ ತಂಡವನ್ನು 2-0 ಅಂತರದಿಂದ ಸೋಲಿಸಿದ ಸುನಿಲ್ ಛೆಟ್ರಿ ಬಳಗ ಟ್ರೋಫಿ ಎತ್ತಿಹಿಡಿದಿತ್ತು.

ರಕ್ಷಣಾ ವಿಭಾಗದ ಪ್ರದರ್ಶನವೇ ಭಾರತ ತಂಡಕ್ಕೆ ದೊಡ್ಡ ಸಮಾಧಾನ. ಸಂದೇಶ್ ಜಿಂಗಾನ್ ಜೊತೆಗೆ ಯುವ ಡಿಫೆಂಡರ್ ಅನ್ವರ್ ಅಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿಂದೆ ನಡೆದ ಇಂಟರ್‌ಕಾಂಟಿನೆಂಟಲ್ ಕಪ್‌ನಲ್ಲಿ ಭಾರತ ಒಂದೇ ಒಂದು ಗೋಲು ಬಿಟ್ಟುಕೊಡದಿರುವುದು ತಂಡದ ರಕ್ಷಣಾ ವಿಭಾಗದ ಬಲಿಷ್ಠ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಭಾರತ Vs ನೇಪಾಳ ನಡುವಿನ ಪಂದ್ಯ ಯಾವಾಗ ನಡೆಯುತ್ತದೆ?

ಭಾರತ Vs ನೇಪಾಳ ನಡುವಿನ ಪಂದ್ಯವು ಶನಿವಾರ, ಜೂನ್ 24, 2023 ರಂದು ನಡೆಯಲಿದೆ.

ಭಾರತ Vs ನೇಪಾಳ ನಡುವಿನ ಪಂದ್ಯ ಎಲ್ಲಿ ನಡೆಯುತ್ತದೆ?

ಭಾರತ Vs ನೇಪಾಳ ನಡುವಿನ ಪಂದ್ಯವು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ Vs ನೇಪಾಳ ನಡುವಿನ ಪಂದ್ಯ ಯಾವ ಸಮಯಕ್ಕೆ ಆರಂಭವಾಗುತ್ತದೆ?

ಭಾರತ Vs ನೇಪಾಳ ನಡುವಿನ ಪಂದ್ಯವು ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ.

ಭಾರತ Vs ನೇಪಾಳ ನಡುವಿನ ಪಂದ್ಯವನ್ನು ಯಾವ ಟಿವಿ ಚಾನೆಲ್‌ ನೇರ ಪ್ರಸಾರ ಮಾಡಲಿದೆ?

ಭಾರತ Vs ನೇಪಾಳ ನಡುವಿನ ಪಂದ್ಯವನ್ನು ಭಾರತದಲ್ಲಿ DD ಸ್ಪೋರ್ಟ್ಸ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.

ಭಾರತ Vs ನೇಪಾಳ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ಲಭ್ಯವಿರುತ್ತದೆ?

ಭಾರತ Vs ನೇಪಾಳ ನಡುವಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಭಾರತದಲ್ಲಿನ ಫ್ಯಾನ್‌ಕೋಡ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ