Happy Birthday Sunil Chhetri: ಭಾರತದ ಫುಟ್ಬಾಲ್ ಸಾಮ್ರಾಟ ಸುನೀಲ್ ಛೆಟ್ರಿಗೆ ಇಂದು ಜನ್ಮದಿನ; ಶುಭಕೋರಿದ ಕಿಂಗ್ ಕೊಹ್ಲಿ
Sunil Chhetri Birthday : ಸುನಿಲ್ ಛೆಟ್ರಿ ಅತಿ ಹೆಚ್ಚು ಅಂತರರಾಷ್ಟ್ರೀಯ ಹ್ಯಾಟ್ರಿಕ್ ಗೋಲುಗಳ ದಾಖಲೆಯನ್ನು ಹೊಂದಿದ್ದಾರೆ (3 ಬಾರಿ). ಅವರು 2008 ರ ಎಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ಮೊದಲ ಬಾರಿಗೆ ತಜಕಿಸ್ತಾನದ ವಿರುದ್ಧ ಮೊದಲ ಹ್ಯಾಟ್ರಿಕ್ ಗಳಿಸಿದರು.
ಭಾರತೀಯ ಪುರುಷರ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವರು ಅತಿ ಹೆಚ್ಚು ಫುಟ್ಬಾಲ್ ಪಂದ್ಯಗಳನ್ನು ಆಡಿದ್ದು ಮಾತ್ರವಲ್ಲ, ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಇಂದು ಆಗಸ್ಟ್ 3, ಸುನೀಲ್ ಛೆಟ್ರಿಯವರ ಜನ್ಮದಿನ. 1984 ರಲ್ಲಿ ಸಿಕಂದರಾಬಾದ್ ನಲ್ಲಿ ಜನಿಸಿದ ಛೆಟ್ರಿಗೆ ಬಾಲ್ಯದಿಂದಲೂ ಫುಟ್ಬಾಲ್ ಬಗ್ಗೆ ಒಲವಿತ್ತು. 16 ವರ್ಷಗಳಿಂದ ಈ ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು 2005 ರಲ್ಲಿ ರಾಷ್ಟ್ರೀಯ ತಂಡವನ್ನು ಸೇರಿಕೊಂಡರು. ಅವರು ಇದುವರೆಗೆ ಭಾರತದ ಪರ 117 ಪಂದ್ಯಗಳನ್ನು ಆಡಿದ್ದಾರೆ. ಸ್ಟಾರ್ ಆಟಗಾರನಾದ ರೊನಾಲ್ಡೊ (99) ನಂತರ ಅವರು ಹೆಚ್ಚಿನ ಅಂತರರಾಷ್ಟ್ರೀಯ ಗೋಲುಗಳ ದಾಖಲೆಯನ್ನು ಹೊಂದಿದ್ದಾರೆ. ಮೋಹನ್ ಬಗಾನ್ 2002 ರಲ್ಲಿ ತಂಡದೊಂದಿಗೆ ತಮ್ಮ ಫುಟ್ಬಾಲ್ ವೃತ್ತಿಜೀವನವನ್ನು ಆರಂಭಿಸಿದರು. ಅವರು ತಂಡಕ್ಕಾಗಿ 48 ಪಂದ್ಯಗಳಲ್ಲಿ 21 ಗೋಲುಗಳನ್ನು ಗಳಿಸಿದರು.
ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅಗ್ರ ಗೋಲು ಗಳಿಸಿದವರಲ್ಲಿ ಒಬ್ಬರು. ಕ್ರಿಸ್ಟಿಯಾನೊ ರೊನಾಲ್ಡೊ ನಂತರದ ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಸಾರ್ವಕಾಲಿಕ ಗೋಲುಗಳಲ್ಲಿ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ ಅಗ್ರ 10 ರೊಳಗೆ ಸ್ಥಾನ ಪಡೆದಿದ್ದಾರೆ. ಒಟ್ಟು 117 ಪಂದ್ಯಗಳಲ್ಲಿ 74 ಗೋಲುಗಳನ್ನು ಗಳಿಸಿ ರೊನಾಲ್ಡೊ (103) ನಂತರದ ಸ್ಥಾನಪಡೆದಿದ್ದಾರೆ. ಸುನಿಲ್ ಛೆಟ್ರಿ ಭಾರತ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಫುಟ್ಬಾಲ್ ಆಟಗಾರರಾಗಿದ್ದಾರೆ. ಈ ಹಿಂದೆ ಮಾಜಿ ನಾಯಕ ಬೈಚುಂಗ್ ಭುಟಿಯಾ ಕೇವಲ 107 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು.
ಅತಿ ಹೆಚ್ಚು ಅಂತರರಾಷ್ಟ್ರೀಯ ಹ್ಯಾಟ್ರಿಕ್ ಗೋಲು ಸುನಿಲ್ ಛೆಟ್ರಿ ಅತಿ ಹೆಚ್ಚು ಅಂತರರಾಷ್ಟ್ರೀಯ ಹ್ಯಾಟ್ರಿಕ್ ಗೋಲುಗಳ ದಾಖಲೆಯನ್ನು ಹೊಂದಿದ್ದಾರೆ (3 ಬಾರಿ). ಅವರು 2008 ರ ಎಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ಮೊದಲ ಬಾರಿಗೆ ತಜಕಿಸ್ತಾನದ ವಿರುದ್ಧ ಮೊದಲ ಹ್ಯಾಟ್ರಿಕ್ ಗಳಿಸಿದರು. ನಂತರ ಅವರು ವಿಯೆಟ್ನಾಂ ವಿರುದ್ಧದ ಅಂತರಾಷ್ಟ್ರೀಯ ಪಂದ್ಯದಲ್ಲಿ ಎರಡನೇ ಹ್ಯಾಟ್ರಿಕ್ ಸಾಧಿಸಿದರು. ಮೂರನೆಯದು 2018 ಇಂಟರ್‌ಕಾಂಟಿನೆಂಟಲ್ ಕಪ್‌ನಲ್ಲಿ ಚೈನೀಸ್ ತೈಪೆ ವಿರುದ್ಧ ಹ್ಯಾಟ್ರಿಕ್ ಆಗಿತ್ತು. ಅವರು 6 ಬಾರಿ ಎಐಎಫ್‌ಎಫ್‌ನಿಂದ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. 1992 ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಹಿಂದೆ ಎಐ ವಿಜಯನ್ 3 ಬಾರಿ, ಜೋ ಪಾಲ್ ಆಚೇರಿ 2 ಬಾರಿ ಮತ್ತು ಭೈಚುಂಗ್ ಭುಟಿಯಾ 2 ಬಾರಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಲೀಗ್‌ನಲ್ಲಿ, ಮೋಹನ್ ಬಗಾನ್ ಜೆಸಿಟಿ ಎಫ್‌ಸಿ, ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಮತ್ತು ಬೆಂಗಳೂರು ಎಫ್‌ಸಿ ಪರವಾಗಿ ಆಡಿದ್ದಾರೆ. ಜೊತೆಗೆ 90 ಗೋಲುಗಳನ್ನು ಗಳಿಸಿದ್ದಾರೆ. ಅವರ ನಂತರ ಭುಟಿಯಾ 89 ಗೋಲುಗಳನ್ನು ಗಳಿಸಿದರು. ಅವರು ಇಂಡಿಯನ್ ಸೂಪರ್ ಲೀಗ್ (ISL) ನಲ್ಲಿ 47 ಗೋಲುಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಚೆನ್ನೈನ ಮಾಜಿ ಸ್ಟ್ರೈಕರ್ ಜೆಜೆ ಲಾಲ್ಪೆಕ್ಲುವಾ 24 ಗೋಲುಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಈ ಲೀಗ್‌ನಲ್ಲಿ ಹ್ಯಾಟ್ರಿಕ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಅವರು 2015 ರಂದು ಲೀಗ್‌ನಲ್ಲಿ ಎರಡು ಹ್ಯಾಟ್ರಿಕ್ ಗಳಿಸಿದರು. ಅಲ್ಲದೆ, ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ 31 ಪಂದ್ಯಗಳನ್ನು ಆಡಿರುವ ಸುನಿಲ್ ಛೆಟ್ರಿ 19 ಗೋಲುಗಳನ್ನು ಗಳಿಸಿದ್ದಾರೆ. ಇನ್ನು ಛೆಟ್ರಿ ಅವರ ಜನ್ಮ ದಿನದ ಅಂಗವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಶುಭಕೋರಿದ್ದು, ಇಬ್ಬರ ನಡುವಿನ ಗಾಢ ಒಡನಾಟವನ್ನು ಹೊರಹಾಕಿದ್ದಾರೆ.
Happy Birthday skip. I hope you have a blessed day like every other day in your life & I always wish you the best. I'm grateful for our friendship that's been formed very organically and contrary to belief, we've majorly connected on Delhi street food memories. ? @chetrisunil11
— Virat Kohli (@imVkohli) August 2, 2021
Happy Birthday, @chetrisunil11 ?
Remember when the ?? captain became only the second Indian to play against @ManUtd ? pic.twitter.com/VSOdQnjevm
— Premier League India (@PLforIndia) August 3, 2021