IND vs WI: ಐಪಿಎಲ್​ನಲ್ಲಿ ದುಬಾರಿ ಎನಿಸಿಕೊಂಡಿದ್ದ ಬೌಲರ್​ಗೆ ಮಣೆ ಹಾಕಿದ ಬಿಸಿಸಿಐ..!

|

Updated on: Jun 24, 2023 | 12:37 PM

IND vs WI: ವಾಸ್ತವವಾಗಿ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಬಲಗೈ ವೇಗಿ ಮುಖೇಶ್ ಕುಮಾರ್ ಆಡಿದ ಒಟ್ಟು 10 ಪಂದ್ಯಗಳಲ್ಲಿ 186 ಎಸೆತಗಳನ್ನು ಬೌಲ್ ಮಾಡಿ 326 ರನ್ ಬಿಟ್ಟುಕೊಟ್ಟಿದ್ದರು.

1 / 6
ಟೀಂ ಇಂಡಿಯಾ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಎರಡು ಟೆಸ್ಟ್, ಮೂರು ಏಕದಿನ ಹಾಗೂ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಬಿಸಿಸಿಐನ ಆಯ್ಕೆ ಸಮಿತಿಯು ಶುಕ್ರವಾರ ಈ ಪ್ರವಾಸಕ್ಕಾಗಿ ಟೆಸ್ಟ್ ಮತ್ತು ಏಕದಿನ ತಂಡವನ್ನು ಪ್ರಕಟಿಸಿದೆ.

2 / 6
ಈ ಎರಡೂ ತಂಡಗಳಲ್ಲಿ ಯುವ ವೇಗಿ ಮುಖೇಶ್ ಕುಮಾರ್ ಸ್ಥಾನ ಪಡೆದಿದ್ದಾರೆ. ಆದರೆ ಇಲ್ಲೊಂದು ಅಚ್ಚರಿಯ ಸಂಗತಿಯೆಂದರೆ ಇದೇ ಮುಖೇಶ್ ಕುಮಾರ್ ಐಪಿಎಲ್​ನಲ್ಲಿ ಬರೋಬ್ಬರಿ 10.52 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು.

3 / 6
ವಾಸ್ತವವಾಗಿ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಬಲಗೈ ವೇಗಿ ಮುಖೇಶ್ ಕುಮಾರ್ ಆಡಿದ ಒಟ್ಟು 10 ಪಂದ್ಯಗಳಲ್ಲಿ 186 ಎಸೆತಗಳನ್ನು ಬೌಲ್ ಮಾಡಿ 326 ರನ್ ಬಿಟ್ಟುಕೊಟ್ಟಿದ್ದರು. ಹಾಗೆಯೇ ಕೇವಲ ಏಳು ವಿಕೆಟ್​ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

4 / 6
ಆದರೆ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದ ಮುಖೇಶ್​ರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣವೂ ಇದ್ದು, ದೇಶೀಯ ಕ್ರಿಕೆಟ್‌ನಲ್ಲಿ ಮುಖೇಶ್ ಅವರ ಪ್ರದರ್ಶನ ಅದ್ಭುತವಾಗಿದೆ. ಹೀಗಾಗಿ ಆಯ್ಕೆ ಮಂಡಳಿ ಮುಖೇಶ್​ಗೆ ಮಣೆಹಾಕಿದೆ.

5 / 6
ದೇಶೀ ಕ್ರಿಕೆಟ್​ನಲ್ಲಿ ಬಂಗಾಳ ಪರ ಆಡುವ ಮುಖೇಶ್, 2019-20 ಮತ್ತು 2022-23ರ ರಣಜಿ ಟ್ರೋಫಿಯ ಫೈನಲ್‌ಗೆ ತಂಡವನ್ನು ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದುವರೆಗೆ 39 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮುಖೇಶ್ 149 ವಿಕೆಟ್ ಪಡೆದಿದ್ದಾರೆ.

6 / 6
ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಮುಖೇಶ್ ನಂತರ ಭಾರತ-ಎ ಪರ ಆಡಿದ್ದರು. ಇಲ್ಲಿಯೂ ತಮ್ಮ ಖಾತೆಗೆ ಒಟ್ಟು 18 ವಿಕೆಟ್​ಗಳನ್ನು ಹಾಕಿಕೊಂಡಿದ್ದರು. ಈ ಹಿಂದೆ ಇಂಗ್ಲೆಂಡ್​ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯಕ್ಕೆ ಮುಖೇಶ್ ಟೀಂ ಇಂಡಿಯಾದಲ್ಲಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದರು. ಇದೀಗ ಮುಖೇಶ್​ ವಿಂಡೀಸ್ ಪ್ರವಾಸದಲ್ಲಿ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆಗಳಿವೆ.

Published On - 12:34 pm, Sat, 24 June 23