- Kannada News Photo gallery Cricket photos IND vs WI Yashasvi Jaiswal set to express himself on West Indies tour
IND vs WI: ‘ಅಪ್ಪ ಕಣ್ಣೀರಿಟ್ಟರು’; ತಂಡಕ್ಕೆ ಆಯ್ಕೆಯಾದ ಬಗ್ಗೆ ಯಶಸ್ವಿ ಜೈಸ್ವಾಲ್ ಹೇಳಿದ್ದಿದು
Yashasvi Jaiswal: ಐಪಿಎಲ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Updated on:Jun 24, 2023 | 8:34 AM

ಐಪಿಎಲ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ನಡೆದ ಡಬ್ಲ್ಯುಟಿಸಿ ಫೈನಲ್ನಲ್ಲಿ ಟೀಂ ಇಂಡಿಯಾದಲ್ಲಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಯಶಸ್ವಿ, ಇದೀಗ ತಂಡದಲ್ಲಿ 3ನೇ ಕ್ರಮಾಂಕದ ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ಟೆಸ್ಟ್ ತಂಡಕ್ಕೆ ಯಶಸ್ವಿ ಜೈಸ್ವಾಲ್ರನ್ನು ಆಯ್ಕೆ ಮಾಡಿದೆ. ಹಾಗೆಯೇ ಖಾಲಿಯಾಗಿರುವ ಪೂಜಾರ ಸ್ಥಾನದಲ್ಲಿ ಯಶಸ್ವಿ ಕಣಕ್ಕಿಳಿಯವುದು ಖಚಿತ ಎಂತಲೇ ಹೇಳಲಾಗುತ್ತಿದೆ.

ಇದಕ್ಕೆ ಕಾರಣವೂ ಇದ್ದು, ಟೀಂ ಇಂಡಿಯಾದ ಟಾಪ್ 5 ಬ್ಯಾಟರ್ಗಳೆಲ್ಲರು ಬಲಗೈ ಆಟಗಾರರೆ ಆಗಿದ್ದಾರೆ. ಹೀಗಾಗಿ ತಂಡದಲ್ಲಿ ಎಡಗೈ ಬ್ಯಾಟರ್ನ ಅವಶ್ಯಕತೆ ಇದೆ. ಆದ್ದರಿಂದ ಜೈಸ್ವಾಲ್ ಎಡಗೈ ಬ್ಯಾಟರ್ ಆಗಿರುವುದು ಅವರ ಆಯ್ಕೆಯನ್ನು ಖಚಿತ ಪಡಿಸುತ್ತಿದೆ.

ಇನ್ನು ಟೀಂ ಇಂಡಿಯಾಕ್ಕೆ ಆಯ್ಕೆಯಾದ ಬಗ್ಗೆ ಮಾತನಾಡಿರುವ ಜೈಸ್ವಾಲ್, ‘ನಾನು ತಂಡಕ್ಕೆ ಆಯ್ಕೆಯಾಗಿದ್ದನ್ನು ತಿಳಿದ ನನ್ನ ತಂದೆ ಅಳಲು ಆರಂಭಿಸಿದರು. ಸದ್ಯ ನಾನು ಅಭ್ಯಾಸದಲ್ಲಿ ನಿರತನಾಗಿದ್ದು, ಇನ್ನು ಮನೆಗೆ ಹೋಗಿಲ್ಲ. ಹೀಗಾಗಿ ಮನೆಗೆ ಹೋದ ಬಳಿಕ ಅಮ್ಮ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ಕಾತುರನಾಗಿದ್ದೀನಿ ಎಂದಿದ್ದಾರೆ.

ಹಾಗೆಯೇ ಟೆಸ್ಟ್ಗೆ ತಯಾರಿಯ ಬಗ್ಗೆ ಮಾತನಾಡಿದ ಜೈಸ್ವಾಲ್ ಇಷ್ಟರಲ್ಲೇ ನಾನು ಬೆಂಗಳೂರಿನ ಎನ್ಸಿಎಯಲ್ಲಿ ತರಬೇತಿ ಪಡೆಯಲು ಅಲ್ಲಿಗೆ ತೆರಳಲಿದ್ದೇನೆ. ಅಲ್ಲದೆ ಈ ಹಿಂದೆ ನಡೆದ ಡಬ್ಲ್ಯುಟಿಸಿ ಫೈನಲ್ನಲ್ಲಿ ಹಿರಿಯ ಆಟಗಾರರೊಂದಿಗೆ ಕಲೆತು ಅಭ್ಯಾಸ ನಡೆಸಿದ್ದು ನನಗೆ ತುಂಬಾ ಅನುಕೂಲವಾಗಿದೆ ಎಂದಿದ್ದಾರೆ.

ಹಿರಿಯ ಆಟಗಾರರಿಂದ ನಾನು ಸಾಕಷ್ಟು ಕಲಿತಿದ್ದೇನೆ. ತಂಡದಲ್ಲಿ ಅವಕಾಶ ಸಿಕ್ಕರೆ ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ಜತೆಗೆ ಅವಕಾಶ ಸಿಕ್ಕಾಗ ಸಾಧನೆ ಮಾಡುವ ಗುರಿಯೂ ಇರಲಿದೆ. ಕೆರಿಬಿಯನ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸುವವರೆಗೂ ನಾನು ಸಾಕಷ್ಟು ಆತಂಕದಲ್ಲಿದ್ದೆ. ಆದರೆ ತಂಡಕ್ಕೆ ಆಯ್ಕೆಯಾದ ಬಳಿಕ ತುಂಬಾ ಖುಷಿಯಾಯಿತು ಎಂದಿದ್ದಾರೆ.

ಪ್ರಥಮ ದರ್ಜೆ ಪಂದ್ಯಗಳಲ್ಲಿ ಮುಂಬೈ ಪರ ಕಣಕ್ಕಿಳಿಯುವ ಜೈಸ್ವಾಲ್ ಕೇವಲ 15 ಪಂದ್ಯಗಳಲ್ಲಿ 80.21 ಸರಾಸರಿಯಲ್ಲಿ ಒಂಬತ್ತು ಶತಕಗಳೊಂದಿಗೆ 845 ರನ್ ಗಳಿಸಿದ್ದಾರೆ. ಇನ್ನು 2023ರ ಐಪಿಎಲ್ನಲ್ಲಿ 163.61 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಜೈಸ್ವಾಲ್ 625 ರನ್ ಚಚ್ಚಿದ್ದರು.
Published On - 8:33 am, Sat, 24 June 23



















